ಆರ್‌ಎಂಪಿ ಎನ್ನುವ ಗ್ರಾಮೀಣ ಜನರ ಪಾಲಿನ ಧನ್ವಂತರಿ

RMP is the wealth of the rural people

Jul 8, 2023 - 13:12
 0  41

Google  News WhatsApp Telegram Facebook

ಆರ್‌ಎಂಪಿ ಎನ್ನುವ ಗ್ರಾಮೀಣ ಜನರ ಪಾಲಿನ ಧನ್ವಂತರಿ

Janaa Akrosha News Desk.

ನಿಮ್ಮದೊAದು ಕುಗ್ರಾಮ,ನೀವು ಬಡವರು,ನಿಮ್ಮೂರಿಗೆ ಬಸ್ಸು ಮುಂಜಾನೆ ಒಮ್ಮೆ,ಮಧ್ಯಾಹ್ನ ಒಮ್ಮೆ,ರಾತ್ರಿ ಒಮ್ಮೆ ಬಂದು ಮೊಕ್ಕಾಂ ಹೂಡಬಹುದು;ಅಥವಾ ದಿನಕ್ಕೆ ಒಮ್ಮೆ ಬಂದು ಹೋಗಬಹುದು.ಅಥವಾ ದುಷ್ಟ ವ್ಯವಸ್ಥೆ ನಿಮ್ಮೂರಿಗೆ ಕೆಂಪು ಬಸ್ಸಿನ ವ್ಯವಸ್ಥೆ ಕಲ್ಪಿಸದೆ ಇರಬಹುದು.ಅವತ್ತೇಕೋ ಸಾಯಂಕಾಲ ಸಣ್ಣಗೆ ಜ್ವರ.ಪ್ಚ್,ನಾಳೆ ಸಿಟಿಗೆ ಹೋಗಿ ತೋರಿಸಿಕೊಂಡರಾಯಿತು ಎನ್ನುತ್ತೀರಿ.ರಾತ್ರಿಯ ಹೊತ್ತಿಗೆ ಮೈ ಕಾಯ್ದ ಕುಲುಮೆಯಾಗುತ್ತದೆ.ದೇಹದ ಉಷ್ಣಾಂಶ ವಿಪರೀತ ಏರುತ್ತದೆ.ಜ್ವರ ತೀವ್ರವಾಗಿ ಉಲ್ಬಣಿಸುತ್ತದೆ.ಮನೆ ಮಂದಿಯೆಲ್ಲಾ ಗಾಭರಿ.ದಿಕ್ಕು ತೋಚದ ಸ್ಥಿತಿ.ಮನೆಯಲ್ಲಿ ಯಾವುದೇ ವಾಹನವಿಲ್ಲ.ವಿಪರೀತ ರಾತ್ರಿಯಾಗಿದೆ.ಸಮಯ ಹನ್ನೆರಡು ಗಂಟೆ.ಯಾವುದಾದರೂ ಟಂಟA ಮುಗಿಸಿಕೊಂಡು ಈಗ ಸಿಟಿಗೆ ಹೋಗಬೇಕು.ಎಲ್ಲಾ ದವಾಖಾನೆಗಳು ಮುಚ್ಚಿರುತ್ತವೆ.ಏನು ಮಾಡುವುದು?ಯೋಚಿಸತೊಡಗುತ್ತೀರಿ,ಚಿಂತಿಸತೊಡಗುತ್ತೀರಿ.ಅಳಲು ಆರಂಭಿಸುತ್ತೀರಿ.ನಿಮ್ಮ ಪ್ರೀತಿ ಪಾತ್ರ ಕುಟುಂಬದ ಸದಸ್ಯ ಇನ್ನಿಲ್ಲ!ಆತ ಅವರಾತ್ರಿ ತೀವ್ರವಾದ ಜ್ವರದ ಬಾಧೆ ತಾಳದೆ ಕಣ್ಮುಚ್ಚುತ್ತಾನೆ.ನೀವು ವ್ಯವಸ್ಥೆಗೆ ಶಾಪ ಹಾಕುವುದಿಲ್ಲ.ನಿಮ್ಮನ್ನಾಳುವ ನಾಯಕನಿಗೆ ಶಾಪ ಹಾಕುವುದಿಲ್ಲ.ಏಕೆಂದರೆ ಇದ್ಯಾವುದು ನಿಮಗೆ ಗೊತ್ತಿಲ್ಲ.ಯಾವನೋ ನಿಮ್ಮ ಮನೆ ಬಾಜಿನ ವ್ಯಕ್ತಿ ನಿಮ್ಮ ಕೈಯೊಳಗೆ ನೂರಿನ್ನೂರು ರೂಪಾಯಿ ಕೊಟ್ಟು ಇಂಥವನಿಗೆ ಓಟು ಹಾಕಿರಿ ಎಂದು ಹೇಳಿರುತ್ತಾನೆ,ನೀವು ಬಕರಾಗಳ ತರಹ ನಿಮ್ಮ ಅಮೂಲ್ಯವಾದ ಮತವನ್ನುಮಾರಿಕೊಂಡು ಹಾಕಿರುತ್ತೀರಿ.ಅಲ್ಲಿಗೆ ಅದನ್ನು ಮರೆತಿರುತ್ತೀರಿ.ತಿರುಗಿ ಕೇಳಿದರೆ ನಿಮಗೆ ನಿಮ್ಮ ಎಮ್ಮೆಲ್ಲೆ ಯಾರು ಅನ್ನುವುದು ನಿಮಗೆ ಗೊತ್ತಿರುವುದಿಲ್ಲ.ಬೆಳಿಗ್ಗೆ ನಿಮ್ಮ ಬಡತನಕ್ಕೆ ಶಾಪ ಹಾಕುತ್ತಾ,ಹಳ್ಳಿಯಲ್ಲಿ ಹುಟ್ಟಿದ ನಿಮ್ಮ ಜನ್ಮಕ್ಕೆ ಶಾಪ ಹಾಕುತ್ತಾ ಸತ್ತವನ ಹೆಣವನ್ನು ಮಣ್ಣು ಮಾಡುತ್ತೀರಿ.ಮತ್ತೆ ಯಥಾರೀತಿಯ ಜೀವನ,ಇದು ನಿಮ್ಮ ಬದುಕು.

ಹೌದು,ಘನ ಸರ್ಕಾರ ದಾಖಲೆಗಳಲ್ಲಿ ನಿಮಗೆ ಎಲ್ಲವನ್ನೂ ಕೊಟ್ಟಿದೆ.ಕುಡಿಯುವ ನೀರು ಒದಗಿಸಿದೆ,ನಿಮಗೊಬ್ಬ ಕೃಷಿ ಗ್ರಾಮ ಸೇವಕನನ್ನು ಕೊಟ್ಟಿದೆ,ನಿಮಗೊಬ್ಬ ಆರೋಗ್ಯ ಸೇವಕನನ್ನು ಕೊಟ್ಟಿದೆ,ನಿಮಗೊಬ್ಬ ಪೋಲಿಸನನ್ನು ಕೊಟ್ಟಿದೆ,ನಿಮಗೊಬ್ಬ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕೊಟ್ಟಿದೆ,ನೀವು ನೀವೇ ಆಳಿಕೊಳ್ಳಲಿ ಎಂದು ನಿಮಗೂ ಗ್ರಾಮ ಪಂಚಾಯತಿ ಅಧ್ಯಕ್ಷನಾಗುವ,ಗ್ರಾಮ ಪಂಚಾಯತಿಗೆ ಸದಸ್ಯನಾಗುವ ಅವಕಾಶವನ್ನು ಕೊಟ್ಟಿದೆ.ಆಹಾರ ಭದ್ರತೆಗಾಗಿ ನ್ಯಾಯಬೆಲೆ ಅಂಗಡಿಕೊಟ್ಟಿದೆ.ಉಚಿತ ಆಹಾರ ಸೌಲಭ್ಯವನ್ನೂ ಒದಗಿಸಿದೆ.ದಾಖಲೆಗಳಲ್ಲಿ. ಸೌಲಭ್ಯಗಳ ಪ್ರಯೋಜನೆಯನ್ನು ನೀವು ಸಮರ್ಪಕವಾಗಿ ಬಳಸಿಕೊಳ್ಳುವ ಜ್ಞಾನವನ್ನು ನೀಡದೆ ಮುಚ್ಚಿಟ್ಟಿದೆ.ಯಾರ ಹಕ್ಕುಗಳನ್ನು ಇನ್ನಾö್ಯರೋಕಬಳಿಸುತ್ತಿದ್ದಾರೆ.ವಿಷಯ ಅದಲ್ಲ.ನಾನೀಗ ಇಲ್ಲಿ ಬರೆಯ ಹೊರಟ ವಿಷಯ...

ಸಾಯಂಕಾಲ ಯಾಕೋ ಮೈ ಬೆಚ್ಚಗನ್ನಿಸುತ್ತದೆ.ಜ್ವರ ಬರಬಹುದು ಅಂತನ್ನಿಸುತ್ತದೆ.ನೀವು ಚಿಂತೆ ಮಾಡುವುದಿಲ್ಲ.ಮನೆಯಲ್ಲಿ ಊಟ ಮಾಡಿ ಮಲಗುತ್ತೀರಿ,ಆದರೆ ಸಾಯಂಕಾಲ ಸಣ್ಣಗಿದ್ದ ಜ್ವರ ಒಂದ್ಹೊತ್ತಿನಲ್ಲಿ ತೀವ್ರವಾಗಿ ಉಲ್ಬಣಿಸುತ್ತದೆ.ಮನೆಯಲ್ಲಿ ಕುಟುಂಬ ಸದಸ್ಯರು ಮೈಮುಟ್ಟಿ ನೋಡುತ್ತಾರೆ,ನಿಮ್ಮ ಮೈ ಬೆಂಕಿ ಕೆಂಡ!ಯಾರೂ ಗಾಬರಿಯಾಗುವುದಿಲ್ಲ.ರಾತ್ರಿ ಒಂದು ಗಂಟೆಯ ಸಮಯ.ಕೈಗೆ ಫೋನ್ ತೆಗೆದುಕೊಂಡು ಡಯಲ್ ಮಾಡುತ್ತೀರಿ,ಸರ್ಕಾರಿ ಆಂಬ್ಯುಲೆನ್ಸಿಗಲ್ಲ.ನಿಮ್ಮೂರ ಆರ್ಎಂಪಿ ಡಾಕ್ಟರ್ನಿಗೆ! ಐದು ನಿಮಿಷದಲ್ಲಿ ನಿದ್ದೆಗಣ್ಣಿನಲ್ಲಿ ಎದ್ದುಬಂದು ಅಲ್ಲಿರುತ್ತಾನೆ ಆತ,ಪ್ರೀತಿಯಿಂದ,ಪ್ರೇಮದಿA ಮತ್ತು ನಿಮ್ಮ ಕುಟುಂಬದ ಸದಸ್ಯರಲ್ಲೊಬ್ಬನಂತೆ. ಅಣ್ಣ,ಮಾಮ,ಚಿಗಪ್ಪ,ದೊಡಪ್ಪ,ಚಿಗವ್ವ,ದೊಡವ್ವ ಎನ್ನುತ್ತಾ ಸಂಜೆ ಹೊತ್ತು ಯಾಕ್ ಬರಲಿಲ್ಲ,ನಾನೇನು ಸತ್ತಿದ್ದೀನಾ ಎನ್ನುತ್ತಾ ಕೈಗೆ ಸಿರಂಜ್ ತೆಗೆದುಕೊಳ್ಳುತ್ತಾನೆ,ಮಾತಾಡುತ್ತಾ ಮಾತಾಡುತ್ತಾ ಎರಡು ಇಂಜೆಕ್ಷನ್ ಮಾಡುತ್ತಾನೆ.ಅಲ್ಲೆ ಕುಳಿತು ನೀವು ಚಹಾ ಮಾಡುತ್ತಿರುವಂತೆ ಎರಡು ಗೋಲಿ(ಮಾತ್ರೆ) ನುಂಗಿಸುತ್ತಾನೆ.ನೋಡು ನೋಡುತ್ತಿರುವಂತೆ ಜ್ವರ ಇಳಿದು ಹೋಗುತ್ತದೆ.ಕೆಲಕ್ಷಣಗಳ ಮೊದಲು ಸಾವಿನ ಭೀತಿ ಅನುಭವಿಸಿ ಆತ ನಗುನಗುತ್ತಾಡಾಕ್ಟೆçà ನಿಮ್ಮ ಕೈಗುಣ ಅಂದ್ರೆ ಕೈಗುಣ ನೋಡಿ,ನಮ್ಮಪ್ಪ ನೀನು ನಮ್ಮ ಪಾಲಿನ ದೇವರುಎನ್ನುತ್ತಾನೆ.ಚಹಾ ಕುಡಿದು ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸುವ ಆತನಿಗೆ ನೀವು ಹಣ ನೀಡಲು ಹೋಗುತ್ತೀರಿ,ಆತ ಇದ್ದರೆ ಕೊಡಿ ಇಲ್ಲಾಂದ್ರೆ ಬೆಳಿಗ್ಗೆ ಕೊಡುವಿರಂತೆ ಎನ್ನುತ್ತಾನೆ. ರೋಗಿಯಲ್ಲಿ ವ್ಯತ್ಯಾಸ ಆತನಿಗೆ ಅನುಮಾನಕರವಾಗಿ ಕಂಡು ಬಂದರೆತಡ ಮಾಡುವುದು ಬೇಡ,ನಡೀರಿ ಸಿಟಿಗೆ ಹೋಗೋಣಎನ್ನುತ್ತಾನೆ.ಅಥವಾ ತನ್ನ ಮಾರ್ಗದರ್ಶಕ ತಜ್ಞವೈದೈರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾನೆ. ರಾತ್ರಿ ಹೇಗಾದರೂ ಜೀವ ಉಳಿಸಿ ಬೆಳಿಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾನೆ.ನೀವು ನೆಮ್ಮದಿಯಿಂದ ಮಲಗುತ್ತೀರಿ.

ಈಗ ನಾನು ಬರೆಯ ಹೊರಟ ವಿಷಯ ಏನೆಂದು ನಿಮಗೀಗಾಗಲೇ ಅರ್ಥವಾಗಿರಬಹುದು.

ಆರ್ಎಂಪಿ ಡಾಕ್ಟರ್ ಗ್ರಾಮೀಣ ಜನರ ಬದುಕಿನ ಪಾಲಿನ ಧನ್ವಂತರಿ.ಆತ ಹಳ್ಳಿಗರ ಆತ್ಮಬಂಧು.ಸರಹೊತ್ತಿನಲ್ಲೂ ಎದ್ದು ಜನರ ಸಮಸ್ಯೆಗೆ ಸ್ಪಂದಿಸುವ ಅವರ ಪಾಲಿನ ದೇವರು.ಆತ ಕೇವಲ ಹಣಕ್ಕಾಗಿ ಕೆಲಸ ಮಾಡುವುದಿಲ್ಲ.ಅವರ ಬದುಕಿನೊಳಗೆ ತಾನೊಬ್ಬನಾಗಿ ಕೆಲಸ ಮಾಡುತ್ತಾನೆ.ಅವರು ಕೊಟ್ಟಷ್ಟನ್ನು ಇಸಿದುಕೊಳ್ಳುತ್ತಾನೆ.ಇಲ್ಲದಿದ್ದರೆ ಇನ್ನೊಮ್ಮೆ ಕೊಡಿ ಎನ್ನುತ್ತಾನೆ.ಎಷ್ಟೋ ಸಂದರ್ಭಗಳಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಕಂಗಾಲಾದಾಗ ತಾನೇ ಹಣದ ನೆರವು ನೀಡಿ ಸಿಟಿ ಆಸ್ಪತ್ರೆಗೆ ಕಳುಹಿಸುತ್ತಾನೆ.ಅವರ ಮನೆಗೇ ಹೋಗಿ ಚಿಕಿತ್ಸೆ ನೀಡುತ್ತಾನೆ.ವೃದ್ಧರ ಹಾರೈಕೆ ಮಾಡುತ್ತಾನೆ.ಗಾಯಗಳಿಗೆ ಪ್ರತಿದಿನ ಡ್ರೆಸ್ಸಿಂಗ್ ಮಾಡುತ್ತಾನೆ.ಕುಗ್ರಾಮಗಳಲ್ಲಿ ತುರ್ತು ಹೆರಿಗೆಯಂತಹ ಸಮಸ್ಯಗಳು ಕಾಣಿಸಿಕೊಂಡಾಗ ತನ್ನ ಮಾರ್ಗದರ್ಶಕ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಒದಗಿಸುತ್ತಾನೆ.ಅವರನ್ನು ಆಸ್ಪತ್ರೆಗೆ ಕಳುಹಿಸುತ್ತಾನೆ.ಅವರ ರೋಗಗಳು ಪರಿಹಾರ ಆಗಬಹುದಾದ ಜಾಗಗಳ ಮಾರ್ಗದರ್ಶನ ಮಾಡುತ್ತಾನೆ. ಸಿಟಿಯ ಆಸ್ಪತ್ರೆಗಳ ದೊಡ್ಡ ಡಾಕ್ಟರುಗಳು ಕೈಗೆ ಸೂಜಿ ಬಿಟ್ಟು ದಿನ ಸೂಜಿ ಮಾಡಿಸಿಕೊಳ್ಳಬೇಕು ಎಂದು ಮಣಗಟ್ಟಲೆ ಔಷಧಿ ಬರೆದು ಕಳುಹಿಸಿದಾಗ ಇಂಜೆಕ್ಷನ್ಗಳನ್ನು ಈತನೇ ಮಾಡುತ್ತಾನೆ.ಪ್ರತಿದಿನ ಯೋಗಕ್ಷೇಮ ವಿಚಾರಿಸುತ್ತಾನೆ. ತಾನು ಚಿಕಿತ್ಸೆ ನೀಡಿದ ವ್ಯಕ್ತಿಗೆ ಗುಣವಾಗಲಿ ಎಂದು ತನ್ನ ಮನೆಗೆ ಹೋಗಿ ದೇವರ ಜಗುಲಿಯ ಮುಂದೆ ನಿಂತು ಪ್ರಾರ್ಥಿಸುತ್ತಾನೆ.ಆತ ನಿಜಕ್ಕೂ ಹಳ್ಳಿಗರ ಪಾಲಿನ ಧನ್ವಂತರಿ. ಸೇವೆಗಳಿಗಾಗಿ ಆತ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ಎರಡುನೂರು ರೂಪಾಯಿಯ ಒಳಗೆ ಇರುತ್ತದೆ.ಜನ ಆತನನ್ನು ನಮ್ಮಪ್ಪ ದೇವರು ಎನ್ನುತಾರೆ.ನಿಜಕ್ಕೂ ಆತ ಗ್ರಾಮೀಣ ಜನರ ಆತ್ಮಬಂಧು.

ಇಲ್ಲಿ ನಿಮಗೆ ಇನ್ನೊಂದು ಸಂಗತಿಯನ್ನು ವಿವರಿಸಬಯಸುತ್ತೇನೆ.

ಯಾಕೋ ಮೈ ಬೆಚ್ಚಗೆ ಅನ್ನಿಸುತ್ತದೆ.ಯಾವುದೋ ಬೈಕು ಹಿಡಿದು,ಬಸ್ಸು ಹಿಡಿದು,ಟಂಟA ಹಿಡಿದು ಸಿಟಿಗೆ ಹೋಗುತ್ತೀರಿ.ಆಸ್ಪತ್ರೆ ಗಿಜಿಗಿಜಿ ಅನ್ನುತ್ತಿರುತ್ತದೆ.ಅಲ್ಲಿನ ಮೇಡಂ ಚೀಟಿ ತಗೋಬೇಕು ಅನ್ನುತ್ತಾಳೆ. ನೀವು ನೂರೈವತ್ತು ರೂಪಾಯಿಕೊಟ್ಟು(ಕೆಲವು ಮಹಾ ಪಂಡಿತರು ೨೫೦ರವರೆಗೆ ಫೀಸು ಮಾಡಿದ್ದಾರೆ) ಚೀಟಿ ಪಡೆಯುತ್ತೀರಿ.ನಿಮ್ಮ ಚೀಟಿಯ ಸಂಖ್ಯೆ ೭೦-೮೦ ಇರುತ್ತದೆ.ತಾಸೆರಡು ತಾಸಿನ ನಂತರ ನಿಮ್ಮ ಸರದಿ ಬರುತ್ತದೆ.ಹೋಗುತ್ತೀರಿ,ಟೆಸ್ಟಿಂಗ್ ಟೇಬಲ್ ಮೇಲೆ ಮಲಗುತ್ತೀರಿ,ಡಾಕ್ಟರ್ ಸ್ಟೆಥಾಸ್ಕೋಪ್ ಎದೆಯ ಮೇಲೆ ಇಡುತ್ತಾನೆ.ಬಿಪಿ ಪರೀಕ್ಷೆ ಮಾಡುತ್ತಾನೆ.ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ.ನಂತರ ತನ್ನ ಕನ್ಸಲ್ಟಿಂಗ್ ಲ್ಯಾಬಿನ ಚೀಟಿ ತೆಗೆದುಕೊಂಡು ಗೀಚುತ್ತಾನೆ. ಟೆಷ್ಟುಗಳನ್ನು ಮಾಡಿಸಿಕೊಂಡು ಬಾ ಎಂದು ನಿಮ್ಮನ್ನು ಕಳುಹಿಸುತ್ತಾನೆ,ಒಂದು ಇಂಜೆಕ್ಷನ್ ಒಂದು ಮಾತ್ರೆಯನ್ನೂ ನೀಡದೆ! ನೀವು ಮುಲುಗುತ್ತಾ ಆತ ಸೂಚಿಸಿದ ಲ್ಯಾಬಿಗೆ ಹೋಗುತ್ತೀರಿ.ಅಲ್ಲಿ ತಕ್ಷಣ ಚೀಟಿ ಪಡೆದುಕೊಳ್ಳುವ ವುಕ್ತಿ ಮೊದಲು ನಿಮ್ಮ ರಕ್ತ ಪಡೆದುಕೊಳ್ಳುತ್ತಾನೆ,ಮೂತ್ರ ಪಡೆದುಕೊಳ್ಳುತ್ತಾನೆ,ಏಳೆಂಟುನೂರು ಫೀಜು ಹೇಳಿ ಒಂದು ಗಂಟೆ ಬಿಟ್ಟು ಬರಲು ಹೇಳುತ್ತಾನೆ.ನೀವು ಜ್ವರವನ್ನು ಕಷ್ಟದಿಂದ ಸಹಿಸುತ್ತಾ ಒಂದು ಗಂಟೆಯ ನಂತರ ರಿಪೋರ್ಟುಗಳನ್ನು ಪಡೆದು ಆಸ್ಪತ್ರೆಗೆ ಹೋಗುತ್ತೀರಿ.ನಿಮ್ಮ ಅದೃಷ್ಟ ಸರಿ ಇದ್ದರೆ ಡಾಕ್ಟರ್ ಭಯ ಪಡುವಂಥದ್ದು ಏನಿಲ್ಲ,ಮಾಮೂಲಿ ಜ್ವರ ಎಂದು ಮಾತ್ರೆ ಬರೆದು ಕಳುಹಿಸುತ್ತಾನೆ.ನೀವು ನತದೃಷ್ಟರಾಗಿದ್ದರೆ ಅಡ್ಮಿಟ್ ಆಗಬೇಕು ಮಲೇರಿಯಾ ಟೈಪಾಡ್ ಎನ್ನುತ್ತಾನೆ.ಅಥವಾ ಮಣಗಟ್ಟಲೆ ಔಷಧಿ ಬರೆದು ಕೈಗೆ ಇಂಜೆಕ್ಷನ್ ಹಾಕಿ ಊರಿಗೆ ಕಳುಹಿಸುತ್ತಾನೆ. ಪ್ರಾಸೆಸ್ ಕನಿಷ್ಠ ಎರಡ್ಮೂರು ಸಾವಿರವನ್ನು ನುಂಗಿರುತ್ತದೆ.ಈಗಿನ ಸಿಟಿ ವೈದ್ಯರು ವೈದ್ಯಕೀಯವನ್ನು ಉದ್ಯಮವಾಗಿಸಿಕೊಂಡಿದಾರೆ.ಅವರದೆ ಮೆಡಿಕಲ್,ಅವರದೆ ಲ್ಯಾಬ್,ಅವರದೆ ನರ್ಸಿಂಗ್ ಹೋಮ್ ಇರುತ್ತವೆ.ಅಥವಾ ಅವುಗಳಿಂದ ಕಮಿಷನ್ ಪಡೆಯುತ್ತಿರುತ್ತಾರೆ.

ನನ್ನ ಒಬ್ಬ ಸ್ನೇಹಿತ ಯಾಕೋ ಎದೆಚುಚ್ಚಿದಂಗಾಗ್ತದ ಎಂದ,ಎದೆ ಚುಚ್ಚುವುದು ಭಯಪಡುವ ವಿಷಯ.ಸಾಯಂಕಾಲದ ಹೊತ್ತು,ಬೈಕಿನ ಮೇಲೆ ಆಸ್ಪತ್ರೆಗೆ ಹೋದೇವು.ವೈದ್ಯರ ಹತ್ತಿರ ಹೋಗಿ ತೋರಿಸಿಕೊಂಡಾಗ ಆತ ಮೊದಲು ಇಸಿಜಿ ಮಾಡಿದ.ಇಸಿಜಿ ವರದಿ ನೋಡಿ ತಕ್ಷಣ ನೀವು ಹೃದ್ರೋಗ ತಜ್ಞರ ಹತ್ತಿರಕ್ಕೆ ಹೋಗಬೇಕು ಎಂದು ನರ್ಸಿಂಗ್ ಹೋಮನ್ನು ಸೂಚಿಸಿದ.ಅದುವರೆಗೆ ಉಲ್ಲಾಸದಿಂದ ಇದ್ದ ನನ್ನ ಸ್ನೇಹಿತನ ಮುಖ ಕಪ್ಪಾಗಿ ಹೋಯಿತು.ಆತ ಭೀತಿಗೆ ಒಳಗಾಗದ.ನಾನೂ ಭಯಗೊಂಡೆ.ಏಕೆAದರೆ ಡಾಕ್ಟರ್ ಸೂಚಿಸಿದ ಆಸ್ಪತ್ರೆ ಅಲ್ಲಿಂದ ಅರವತ್ತು ಕಿಲೋಮೀಟರ್ ದೂರದಲ್ಲಿತ್ತು.ಬಸ್ಸಿನಲ್ಲಿ ದರಿದ್ರ ವ್ಯವಸ್ಥೆಯ ರಸ್ತೆಯಲ್ಲಿ ಕನಿಷ್ಠ ಎರಡುವರೆ ತಾಸು ಪ್ರಯಾಣಿಸಬೇಕು.ಡಾಕ್ಟರ್ ಅರ್ಜೆಂಟ್ ಎನ್ನುತ್ತಿದ್ದಾನೆ.ತಕ್ಷಣ ಬಸ್ ನಿಲ್ದಾಣಕ್ಕೆ ಬಂದು ಅವರು ಸೂಚಿಸಿದ ಆಸ್ಪತ್ರೆಯನ್ನು ತಲುಪಿದೇವು.ನಾವಿನ್ನೂ ನರ್ಸಿಂಗ್ ಹೋಮಿನ ಮುಂಬಾಗದ ದ್ವಾರದಲ್ಲಿದ್ದೇವು,ಸ್ಟೆಕ್ಷರ್ ಅಲ್ಲಿಗೇ ಬಂದಿತು! ನಂತರ ಹದಿನೈದು ಇಪ್ಪತ್ತು ಸಾವಿರ ರೂಪಾಯಿಗಳ ಪರೀಕ್ಷೆಗಳು.ಅದಾದ ಮೇಲೆ ನನ್ನ ಸ್ನೇಹಿತನನ್ನು ಐಸಿಯೂಗೆ ಶಿಫ್ಟ್ ಮಾಡಿ ಆಕ್ಸಿಜನ್ ಕೊಟ್ಟರು.ಅವನು ಇದೆಲ್ಲವನ್ನೂ ನೋಡಿ ಭಯಗೊಂಡು ಮೌನವಾದ.ಕೈಗೆ ಸೆಲೂನ್ ಹಚ್ಚಿದರು,ಇಂಜೆಕ್ಷನ್ ಬರೆದುಕೊಟ್ಟರು,ತಂದೆ,ರಾತ್ರಿ ಎರಡ್ಮೂರುಸಲ ಇಂಜೆಕ್ಷನ್ ಮಾಡಿ ಮಾತ್ರೆಗಳನ್ನು ನುಂಗಿಸಿದರು.ಬೆಳಿಗ್ಗೆ ಮನೆಗೆ ಹೋಗಬಹುದು ಎಂದರು.Aತಿಮ ಬಿಲ್ ಸಲ್ಲಿಸಿ ಬರೆದುಕೊಟ್ಟ ಮಣ ಔಷಧಿಯನ್ನು ಬ್ಯಾಗಿನಲ್ಲಿ ತುಂಬಿಕೊAಡು ಅಲ್ಲಿಂದ ನಾವು ಮರಳಿದೇವು.ಓದಿದವನಲ್ಲವೇ ನಾನು,ಅವರು ಕೊಡುವ ಔಷಧಿಗಳನ್ನು ಪರೀಕ್ಷಿಸುತ್ತಾ ಕುಳಿತಿದ್ದೆ.ಕೊಟ್ಟಿದ್ದು ಪೆಂಟಾಪ್ರೊಜೋಲ್ ಮಾತ್ರೆ ಮತ್ತು ಇಂಜೆಕ್ಷನ್!ಇಲ್ಲಿ ವಿಷಯ ಏನೆಂದರೆ ಘಟನೆಯ ಕಳೆದ ದಿನ ದೀಪಾವಳಿ.ನಮ್ಮ ಯಾದಗಿರ ರಾಯಚುರೆಂಬ ದರಿದ್ರ ಜಿಲ್ಲೆಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ ಗೊತ್ತೇ? ಹಳ್ಳಿಗಳಲ್ಲಿ ಒಂದು ಸಣ್ಣ ಡಬ್ಬಾ ಅಂಗಡಿಗೂ ರಾತ್ರಿ ಲಕ್ಷಿö್ಮÃ ಪೂಜೆ ಅಂತ ಮಾಡುತ್ತಾರೆ. ದಿನ ರಾತ್ರಿಪೂರ್ತಿ ಇಸ್ಪೀಟು ಆಡುತ್ತಾರೆ,ನಿದ್ರೆಗೆಟ್ಟು. ಪುಣ್ಯಾತ್ಮ ಸ್ನೇಹಿತ ರಾತ್ರಿ ಇಡೀ ಗುಟ್ಕಾ ಮತ್ತು ಬೀಡಿ ಸಿಗರೇಟು ಸೇದುತ್ತಾ ಇಸ್ಪೀಟು ಆಡಿ ನಿದ್ರೆಗೆಟ್ಟಿದ್ದಾನೆ.ಆತನಿಗೆ ವಿಪರೀತ ಆಸಿಡಿಟಿಯಾಗಿ ಎದೆನೋವು ಕಾಣಿಸಿದೆ.ಪಿತ್ತ ಆಗಿದೆ.ಪಿತ್ತಕ್ಕೆ ನಾವು ತೆತ್ತ ದಂಡ ನಲವತ್ತು ಸಾವಿರ ರೂಪಾಯಿಗಳು! ವೈದ್ಯಕೀ ಈಗ ಬಹು ಆಕರ್ಷಣೀಯ ಉದ್ಯಮ.ಸಿಕ್ಕಿಹಾಕಿಕೊಂಡ ರೋಗಿಯ ಹತ್ತಿರ ಎಷ್ಟು ಸುಲಿಯಲು ಸಾಧ್ಯಆಗುತ್ತದೋ ಅಷ್ಟನ್ನು ಸುಲಿಯುತ್ತಾ ಔಷಧಿ ವ್ಯಾಪಾರ ಮಾಡುತ್ತಾರೆ.ಮನುಷ್ಯನಲ್ಲಿ ರೋಗ ಉತ್ಪಾದನೆಯಾಗಲು ಪೂರಕ ಎನ್ನುವಂತೆ ರಾಸಾಯನಿಕ ಮಿಶ್ರಿತ ಆಹಾರವನ್ನು ಉತ್ಪಾದಿಸಲಾಗುತ್ತಿದೆ.ಸಹಜ ಕೃಷಿ ಇವತ್ತಿನ ದಿನಗಳಲ್ಲಿ ಮರೆಯಾಗಿ ಹೋಗಿದೆ.ಯಾರನ್ನಾದರೂ ಕೇಳಿ,ತಮಗೆ ಸಕ್ಕರೆ ಖಾಯಿಲೆ,ರಕ್ತದ ಒತ್ತಡ,ಥೈರಾಯ್ಡ್ ಸಮಸ್ಯೆಗಳು ಇರುವುದಾಗಿ ಹೇಳುತ್ತಾರೆ.ಇದು ದೊಡ್ಡ ಡಾಕ್ಟರ್ ಅಂದರೆ ಕೋಟಿಗಟ್ಟಲೇ ಹಣತೆತ್ತು ವೈದ್ಯಕೀಯ ಪ್ರಮಾಣಪತ್ರ ಪಡೆದು ಕೋಟಿಗಟ್ಟಲೇ ಹಣ ಹೂಡಿ ಆಸ್ಪತ್ರೆ ಕಟ್ಟಿದವರು ಆಟ,ಅವರು ಆಡಿಸಿದಂತೆ ಆಡುತ್ತವೆ ರೋಗಗಳು!ಹಾಗಂತ ಎಲ್ಲಾ ವೈದ್ಯರು ದುಷ್ಟರಲ್ಲ.ಮಾನವೀಯತೆಯ ಸಾಕಾರಮೂರ್ತಿಯಂತಹ ಅನೇಕ ವೈದ್ಯರು ಸೇವಾನಿರತರಾಗಿದ್ದಾರೆ.ಪ್ರಾಮಾಣಿಕ ವೈದ್ಯರಿಗೆ ಜನ ಆಕ್ರೋಶ ಪತ್ರಿಕೆ ಕೋಟಿ ನಮನಗಳನ್ನು ಸಲ್ಲಿಸುತ್ತದೆ.ವಿಷಯ ಇದಲ್ಲ-

ಲೇಖನವನ್ನು ಏಕೆ ಬರೆಯಬೇಕಾಗಿ ಬಂತು ಎನ್ನುವುದು.

ಹಳ್ಳಿಯಲ್ಲಿ ಮುಗ್ಧ ಜನರ ಜೀವನದೊಂದಿಗೆ ಜೀವನ ಹಂಚಿಕೊAಡು ಸೇವಾನಿರತರಾಗಿರುವ ಅನೇಕ ಕೌಶಲ್ಯಪೂರ್ಣ ಅನುಭವಿ ಚಿಕಿತ್ಸಕರು ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದಾರೆ. ದುಷ್ಟ ಜಗತ್ತು ಅವರನ್ನು ನಕಲಿ ವೈದ್ಯರು ಎನ್ನುತ್ತಿದೆ.ಅವರು ಭಯಾನಕವಾದ ಔಷಧಿ ಪ್ರಯೋಗಗಳನ್ನೇನೂ ಮಾಡುವುದಿಲ್ಲ.ಮಿತಿಮೀರಿ ಹಣವನ್ನೂ ಪೀಕುವುದಿಲ್ಲ.ಅವರು ಪ್ರಥಮ ಚಿಕಿತ್ಸೆ ನೀಡುತ್ತಾರೆ. ಮೂಲಕ ಬಸ್ಸಿನ ಸೌಲಭ್ಯವಿಲ್ಲದ ಆರೋಗ್ಯ ಸೇವೆ ಇಲ್ಲದ ಪ್ರದೇಶಗಳ ಜನರಿಗೆ ಧೈರ್ಯ ತುಂಬುತ್ತಾರೆ.ನನ್ನ ಗ್ರಾಮೀಣ ಪ್ರದೇಶದ ಸುತ್ತಾಟದಲ್ಲಿ ನಾನು ಕಂಡುಕೊA ಸತ್ಯ ಹಲವು ಗ್ರಾಮಗಳಿಗೆ ರಸ್ತೆ ಇಲ್ಲ.ಆಂಬ್ಯುಲೆನ್ಸ್ ಬರಲಿಕ್ಕೂ ದಾರಿ ಇಲ್ಲ.ಇಂತಹ ಸಂದರ್ಭದಲ್ಲಿ ಹಳ್ಳಿಗರ ಬದುಕಿಗೆ ಆರ್ಎಂಪಿ ವೈದ್ಯನೇ ದಾರಿದೀಪ.ಆದರೆ ಪಾಪಿಗಳು ವರದಿಗಾರರ ಹೆಸರಿನಲ್ಲಿ,ಪತ್ರಕರ್ತರ ಹೆಸರಿನಲ್ಲಿ,ಸಂಘಟನೆ ಮತ್ತು ಹೋರಾಟಗಾರರ ಹೆಸರಿನಲ್ಲಿ ತೀವ್ರವಾದ ಕಿರುಕುಳ ನೀಡುತ್ತಿದ್ದಾರೆ.ಹಣ ಪೀಕುತ್ತಿದ್ದಾರೆ.ಮಾನಸಿಕ ಹಿಂಸೆ ನೀಡುತ್ತಿದ್ದಾರೆ.ಒಂದು ಬ್ರದೇಶದಿಂದ ಒಬ್ಬ ರೋಲ್ಕಾಲ್ ಗಿರಾಕಿ ಅಸಂಬದ್ಧ ಸುದ್ದಿಯೊಂದನ್ನು ಬರೆದು ಕಳುಹಿಸಿ ಸಿದ್ದಿ ಪ್ರಕಟಿಸುವಂತೆ ವಿನಂತಿಸಿದ್ದ.ಆತ ಕೆಲವು ಸೇವಾನಿರತ ವೈದ್ಯರ ಭಾವಚಿತ್ರವನ್ನು ಕದ್ದು ತೆಗೆದಿದ್ದ.ನಾನು ನನ್ನ ವಿಧಾನಗಳ ಮೂಲಕ ತನಿಖೆ ಮಾಡಿದಾಗ ಆತ ಬ್ಲಾಕ್ಮೇಲ್ ಗಿರಾಕಿ ಎಂದು ತಿಳಿಯಿತು.ಹೌದು,ಸರ್ಕಾರ ಎಲ್ಲಾರೀತಿಯ ಕಾಯ್ದೆ ಕಾನೂನುಗಳನ್ನು ಮಾಡಿದೆ.ಆದರೆ ಅವಿನ್ನೂ ಜನರನ್ನು ತಲುಪಿಲ್ಲ. ಸಂದರ್ಭದಲ್ಲಿ ಹಳ್ಳಿಗರ ಸೇವೆಯಲ್ಲಿ ನಿರತರಾಗಿರುವ ಗ್ರಾಮೀಣ ಆರೆಂಪಿ ಎನ್ನುವ ವೈದ್ಯರಿಗೆ ಸೂಕ್ತ ಪರೀಕ್ಷೆ ಅಥವಾ ತರಬೇತಿ ನೀಡುವ ಮೂಲಕ ಷರತ್ತುಗಳ ಮೇಲೆ ಪರವಾನಗಿಯನ್ನು ಏಕೆ ನೀಡಬಾರದು ಎನ್ನುವುದು ನನ್ನ ಪ್ರಶ್ನೆ. ಅಂಶವನ್ನು ಆಧಾರವಿಟ್ಟುಕೊಂಡು ರೋಲ್ಕಾಲ್ ಗಿರಾಕಿಗಳು ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳನ್ನೂ ಕಾಡುತ್ತಾರೆ.

ದಯವಿಟ್ಟು ಅಂಶದ ಮೇಲೆ ಸಂಬAಧಿಸಿದ ಅಧಿಕಾರಿಗಳು ಗಮನಹರಿಸಬಲ್ಲರೆ ಎನ್ನುವುದನ್ನು ನಾವು ಕಾದು ನೋಡೋಣ.

                                                                                                            ಲಕ್ಷ್ಮೀಕಾಂತ  ನಾಯಕ

 

Google  News WhatsApp Telegram Facebook
HTML smaller font

.

.