ನಾವು ಮೂಲ ಸೌಕರ್ಯ ಕೊಡುತ್ತೇವೆ. ನೀವು ಉತ್ತಮ ಫಲಿತಾಂಶ ನೀಡಿ : ಸಚಿವ ದರ್ಶನಾಪುರ ಶಿಕ್ಷಕರಿಗೆ ಸೂಚನೆ

Sep 16, 2023 - 17:48
 0  38

Google  News WhatsApp Telegram Facebook

ನಾವು ಮೂಲ ಸೌಕರ್ಯ ಕೊಡುತ್ತೇವೆ. ನೀವು ಉತ್ತಮ ಫಲಿತಾಂಶ ನೀಡಿ : ಸಚಿವ ದರ್ಶನಾಪುರ ಶಿಕ್ಷಕರಿಗೆ ಸೂಚನೆ

Janaa Akrosha News Desk.

ನಾವು ಮೂಲ ಸೌಕರ್ಯ ಕೊಡುತ್ತೇವೆ. ನೀವು ಉತ್ತಮ ಫಲಿತಾಂಶ ನೀಡಿ : ಸಚಿವ ದರ್ಶನಾಪುರ ಶಿಕ್ಷಕರಿಗೆ ಸೂಚನೆ

ಯಾದಗಿರಿ : ಸೆಪ್ಟೆಂಬರ್.15  : ಶಾಲಾ ಕಾಲೇಜುಗಳಿಗೆ ಕಟ್ಟಡ, ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಬೇಕಾಗುವ ಮೂಲ ಸೌಕರ್ಯ ಸರ್ಕಾರದಿಂದ ನಾವು ನೀಡುತ್ತೇವೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಶಿಕ್ಷಕರಿಗೆ ಸೂಚನೆ ನೀಡಿದರು.

ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ಯಾದಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹಾಪುರ  ಇವರ ಸಂಯುಕ್ತಾಶ್ರಯದಲ್ಲಿ 2023-2024 ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಅವರು ಮಾತನಾಡಿದರು.

371 (ಜೆ) ಜಾರಿ ಬಂದ ನಂತರ ಕೆ.ಕೆ.ಆರ್.ಡಿ.ಬಿ ಯೋಜನೆಯಡಿಯಲ್ಲಿ  ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.  ಇದೆ ಯೋಜನೆಯಡಿ 15 ಕೋ. ರೂಗಳ ಅನುದಾನದಲ್ಲಿ ಭೀಮರಾಯನಗುಡಿ ಹಾಗೂ ಚಾಮನಾಳ ಶಾಲೆಗಳಿಗೆ ಉತ್ತಮ ಕಟ್ಟಡ, ಶೌಚಾಲಯ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದ್ದು, ಹೆಚ್ಚಿನ ಸೌಲಭ್ಯಗಳಿಲ್ಲದಿದ್ದರೆ ಗಮನಕ್ಕೆ ತನ್ನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.

ಶಿಕ್ಷಕರ ಪರೀಕ್ಷೆಯಲ್ಲಿ ನಿಮಗಿಂತ ಕಡಿಮೆ ಅಂಕ ಪಡೆದು ಹೊರಗುಳಿದು ಕಡಿಮೆ ವೇತನ ಪಡೆಯುವ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ಬರುತ್ತಿದೆ. ಆದರೆ ಎಲ್ಲ ಅರ್ಹತೆ ಮತ್ತು ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬರುತ್ತಿರುವುದು ವಿಷಾದನೀಯ. ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಫಲಿತಾಂಶ ತಂದು, ಜಿಲ್ಲೆಯನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಶ್ರಮಿಸಬೇಕು ಎಂದರು.

 ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಮಾತನಾಡಿ , ಅಂದ:ಕಾರದಲ್ಲಿದ್ದ ಸಮಾಜವನ್ನು ತಾರತಮ್ಯ ಇಲ್ಲದೆ ಸಮಾನ ಮನಸ್ಸಿನಿಂದ ಸರಿದಾರಿಗೆ ತರುವುದು ಗುರುಗಳು ಮಾತ್ರ. ಗುರು ಮತ್ತು ಶಿಕ್ಷಕರಿಗೂ ಸಾಮ್ಯತೆ ಇರುವುದರಿಂದ  ಅವರ ಪ್ರಾಮುಖ್ಯತೆ ಎಲ್ಲರಿಗೂ ಮುಖ್ಯವಿದೆ ಎಂದ ಅವರು, ಸರ್ಕಾರಿ ಶಾಲೆಗಳ ಮತ್ತು ಅವುಗಳ ಶೌಚಾಲಯ ನಿರ್ವಹಣೆಯು ಬಹುದೊಡ್ಡ ಸಮಸ್ಯೆಯಾಗಿದ್ದು, ಬರುವ ಅನುದಾನದಿಂದ ಅವುಗಳ ಸ್ವಚ್ಛತೆಗೆ ಸಾಲದಾಗಿದೆ. ಸರ್ಕಾರ ಈ ಕುರಿತು ಯೋಚಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು  ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರಾದ ಹೆಚ್.ಟಿ ಮಂಜುನಾಥ, ಮಹಿಪಾಲರೆಡ್ಡಿ, ಅಶೋಕ್ ಕುಮಾರ್ ಕೆಂಭಾವಿ, ರಾಘವೇಂದ್ರ ಅಳ್ಳಳ್ಳಿ, ರಾಯಪ್ಪಗೌಡ ಹುಡೆದ, ಬಸವರಾಜ ಯಾಳಗಿ, ಭೀಮನಗೌಡ ಜಿ. ತಳೆವಾಡ, ಶಂಕ್ರಪ್ಪ ಗೊಂದೇನೂರ, ಶಹಾಪುರ, ಸುರಪುರ ಮತ್ತು ಯಾದಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರಿ ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.