ಸಮಾಜ ಕಲ್ಯಾಣ ಇಲಾಖೆಯಲ್ಲಿ ೨೦ ವರ್ಷಗಳಿಂದ ಇರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ: ನಮ್ಮ ಕರವೇ

Sep 15, 2023 - 15:46
 0  132

Google  News WhatsApp Telegram Facebook

ಸಮಾಜ ಕಲ್ಯಾಣ ಇಲಾಖೆಯಲ್ಲಿ ೨೦ ವರ್ಷಗಳಿಂದ ಇರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ: ನಮ್ಮ ಕರವೇ

Janaa Akrosha News Desk.

ಸಮಾಜ ಕಲ್ಯಾಣ ಇಲಾಖೆಯಲ್ಲಿ ೨೦ ವರ್ಷಗಳಿಂದ ಇರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ: ನಮ್ಮ ಕರವೇ

ಯಾದಗಿರಿ, ಸೆ.೮- ವಾರ್ಡನ್ ಶ್ರೀಮತಿ ಶಾಂತಮ್ಮ ಜಿ.ಎ. ರವರ ಮೇಲೆ ಮಾಡಲಾದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸದ್ರಿರವರನ್ನು ಅವರ ಸ್ಥಾನದಲ್ಲಿಯೇ ಮುಂದುವರೆಸುವAತೆ ಆಗ್ರಹಿಸಿ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಪ್ರತ್ಯೇಕ ಮನವಿಗಳು ಸಲ್ಲಿಸಿರುವ ವೇದಿಕೆ, ಶ್ರೀಮತಿ ಶಾಂತಮ್ಮ ಜಿ.ಎ. ವಾರ್ಡನ್ ಇದರ ಮೇಲೆ ಜಿಲ್ಲಾ ಸಮಾಜ ಕಲ್ಯಾನ ಇಲಾಖೆಯ ಅಧೀಕ್ಷಕರಾದ ರಂಗಪ್ಪ, ತಾಲೂಕಾ ಅಧೀಕ್ಷಕರಾದ ವೆಂಕಟೇಶ, ಎಫ್.ಡಿ.ಸಿ, ಹಣಮಂತರೆಡ್ಡಿ, ಹಾಗೂ ವಾರ್ಡನಗಳಾದ ದೇವಿಂದ್ರಪ್ಪ ರುದ್ರವಾಡಿ, ಎಂ.ಡಿ. ಹುಸೇನಪಾಷಾ, ಶ್ರೀಹರಿ ಘಂಟೆ, ಸಂಗಮೇಶ ಪೂಜಾರಿ ವ್ಯವಸ್ಥಾಪಕರು ಇವರು ಸುಮಾರು ೧೮ ವರ್ಷಕ್ಕೂ ಹೆಚ್ಚು ಕಾಲ ಇದೇ ಇಲಾಖೆಯಲ್ಲಿ ಮುಂದುವರೆದಿದ್ದು, ಇವರೆಲ್ಲರೂ ಸೇರಿಕೊಂಡು ಸಂಗಮೇಶ ಪೂಜಾರಿ ವ್ಯವಸ್ಥಾಪಕರು ಇವರು ಅನರ್ಹರಿದ್ದರೂ ಕೂಡಾ ತಾಲೂಕಾ ಸಹಾಯಕ ನಿರ್ದೇಶಕರಾಗಿ ಮುಂದುವರೆದಿದ್ದಾರೆ, ಇವರ ಮೇಲೆ ಹಲವಾರು ದೂರುಗಳಿದ್ದು, ಕೋಟಿಗಟ್ಟಲೆ ಅವ್ಯವಹಾರ ಎರಗಿದ್ದು, ಈ ಬಾರಿ ವರ್ಗಾವಣೆಯಾಗಿದ್ದು, ಈಗ ಮತ್ತೆ ಯಾದಗಿರಿಗೆ ತನ್ನ ಕರ್ತವ್ಯ ಹಾಕಿಸಿಕೊಂಡು ಬಂದಿದ್ದಾರೆ. ಇವರ ಬಗ್ಗೆ ಸಮಗ್ರ ತನಿಖೆ ನಡೆಸಿ, ಇವರನ್ನು ವರ್ಗಾವಣೆ ಮಾಡುವುದು ಸೂಕ್ತವಿರುತ್ತದೆ.

ಆದರೆ, ವಿನಾಕಾರಣ ಶ್ರೀಮತಿ ಶಾಂತಮ್ಮ ಜಿ.ಎ., ವಾರ್ಡನ್‌ರವರ ಮೇಲೆ ಸುಳ್ಳು ಆರೋಪ ಮಾಡಿ, ಈ ಹಿಂದೆ ಅಮಾನತ್ತು ಮಾಡಿಸಿದ್ದು, ಇದಕ್ಕೆ ನೇರವಾಗಿ ಮೇಲ್ಕಂಡವರೇ ಕಾರಣಿಕರ್ತರಾಗಿದ್ದು, ನಿನ್ನೆ ಕೊಟ್ಟ ದೂರಿಗೂ ಕೂಡಾ ಆವರೇ ಕಾರಣರಾಗಿದ್ದಾರೆ. ಶ್ರೀಮತಿ ಶಾಂತಮ್ಮ ಜಿ.ಎ, ವಾರ್ಡನ್‌ರವರು ಅವರು ಪತಿ ಇಲ್ಲಿ . ಯಾದಗಿರಿಯಲ್ಲಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾಗಿದ್ದು, ಪತಿಯ ನೌಕರಿ ಸಲುವಾಗಿ ಯಾದಗಿರಿಗೆ ವರ್ಗಾವಣೆ ಮಾಡಲಾಗಿದ್ದು, ಇವು ಯಾದಗಿರಿಗೆ ಬಂದು ೬ ತಿಂಗಳು ಆಗಿಲ್ಲ, ಅಷ್ಟರಲ್ಲಿ ಇವರ ಮೇಲೆ ಒತ್ತಡಗಳು ಹಾಕಿ, ಮೂಲಸ್ಥಾನ ಯಾದಗಿರಿ ನಗರದಿಂದ ಗುರುಮಠಕಲ್ ಗೆ ವರ್ಗಾಯಿಸಿದ್ದು, ಆದರೆ ಈಗ ಅಲ್ಲಿಂದಲೂ ಕೂಡಾ ವರ್ಗಾವಣೆ ಒತ್ತಾಯಿಸುತ್ತಿದ್ದು,

ಶ್ರೀಮತಿ ಶಾಂತಮ್ಮ ಜಿ.ಎ. ವಾರ್ಡನ್ ರವರು ಉತ್ತಮ ಅಧಿಕಾರಿಯಾಗಿದ್ದು, ಮಕ್ಕಳಿಗೆ ಸ್ಪಂದಿಸುತ್ತಾರೆ, ಸಮಯ ಕೊಡುತ್ತಾರೆ, ಆದರೆ, ಪ್ರಾಮಾಣಿಕವಾದ ಅಧಿಕಾರಿಗೆ ತೊಂದರೆ ಕೊಟ್ಟು ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿರುವವರ ಕುರಿತು ಅಕ್ರಮಗಳಿಗೆ ಬೆಂಬಲಿಸುವವರುಗಳ ಕುರಿತು ಕೂಲಂಕಷ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಇದಲ್ಲದೇ ಮೇಲ್ಕಂಡ ಸಮಾಜ ಕಲ್ಯಾಣ ಇಲಾಖೆ ನೌಕರರು ಕಳೆದ ೧೮-೨೦ ವರ್ಷದಿಂದ ಒಂದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅಂತವರ ಮೇಲೆ ಕ್ರಮ ಕೈಗೊಳ್ಳದೇ ಒಬ್ಬ ಮಹಿಳಾ ಅಧಿಕಾರಿಗೆ ಮಾನಸಿಕ ಹಿಂಸೆ ನೀಡಿ, ಕೆಲಸಕ್ಕೆ ಅಡ್ಡಿಪಡಿಸಿ, ತೇಜೋವಧೆ ಮಾಡುತ್ತಿದ್ದಾರೆ. ಅವರ ಮೇಲೆ ಸುಳ್ಳು ಆರೋಪ ಮಾಡಿ, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆAದು ಆರೋಪ ಮಾಡಿದ್ದು, ಸತ್ಯಕ್ಕೆ ದೂರವಾಗಿದ್ದು, ಆದ ಕಾರಣ ಶ್ರೀಮತಿ ಶಾಂತಮ್ಮ ಜಿ.ಎ. ವಾರ್ಡನ್‌ರವರ ಮೇಲಿನ ಆರೋಪಗಳು ಅಲ್ಲಗಳೆದು, ಇವರನ್ನು ಕರ್ತವ್ಯದಲ್ಲಿಯೇ ಮುಂದುವರೆಸಿ ಕ್ರಮ ಕೈಗೊಳ್ಳಬೇಕು.

 

ಒಂದು ವೇಳೆ ವಿಳಂಭವಾದರೆ ಹಲವಾರು ಸಂಘಟನೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸ್ವಾಮೀಜಿಗಳು, ಎಸ್.ಸಿ.ಎಸ್.ಟಿ. ಸಮುದಾಯದ ಮುಖಂಡರು ಭಾಗಿಯಾಗಿ, ಸದರಿ ಜಿಲ್ಲಾ ಪಂಚಾಯತ ಕಛೇಧರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದೆದಂದು ಮನವಿ ಸಲ್ಲಿಸಿದರು. ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಖುದ್ದೂಸ್, ಶಾಂತಿನಗರ,

ವಿ.ಘ. ಜಿಲ್ಲಾಧ್ಯಕ್ಷ ಶಂಕರ ಕಾಳಬೆಳಗುಂದಿ, ಗೋವಿಂದ ಚವ್ಹಾಣ, ಕರಣ ಪವಾರ್, ನಿರಂಜನ ಎಸ್.ಕೆ., ರೆಡ್ಡಿ ನಾರಾಯಣ, ಮರೆಪ್ಪನಾಯಕ,  

ಪರಶುರಾಮ ಪವಾರ್ ಇನ್ನಿತರರು ಇದ್ದರು. 

Google  News WhatsApp Telegram Facebook
HTML smaller font

.

.