ಮೀಸಲಾತಿ ರದ್ದು ಕೋರಿ ಅರ್ಜಿ ಸಲ್ಲಿಸಿದ ವಕೀಲನಿಗೆ 25000 ದಂಡ

Jul 7, 2023 - 10:38
 0  43

Google  News WhatsApp Telegram Facebook

ಮೀಸಲಾತಿ ರದ್ದು ಕೋರಿ ಅರ್ಜಿ ಸಲ್ಲಿಸಿದ ವಕೀಲನಿಗೆ 25000 ದಂಡ

Janaa Akrosha News Desk.

ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ಪಿ.ಎಸ್ ನರಸಿಂಹ ಅವರ ಪೀಠವೂ ಮೀಸಲಾತಿ ರದ್ದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ ವಕೀಲರೊಬ್ಬರಿಗೆ ಜಾಡಿಸಿದ್ದಲ್ಲದೆ ಅರ್ಜಿಯನ್ನು ವಜಾ ಮಾಡುತ್ತಾ 25000 ರೂಗಳ ದಂಡ ವಿಧಿಸಿದೆ. ಈ ಮೂಲಕ ಮಾನ್ಯ ಸರ್ವೋಚ್ಚ ನ್ಯಾಯಾಲಯವೂ ಶೋಷಿತ ಸಮುದಾಯಗಳ ಪರ ಕಾಳಜಿ ಪ್ರಕಟಪಡಿಸಿದೆ. ಮೀಸಲಾತಿಯನ್ನು ತೆಗೆದು ಹಾಕಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು, ನ್ಯಾಯಮೂರ್ತಿ ಡಿ,ವೈ ಚಂದ್ರಚೂಡ್  ಪಿ.ಎಸ್ ನರಸಿಂಹ ಅವರು ಇದೊಂದು ಕ್ಷುಲ್ಲಕ ಪ್ರಕರಣವಾಗಿದ್ದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ಹೇಳಿದ್ದಾರೆ. ತರುವಾಯ ದಾವೆ ಹೂಡಿದ ವಕೀಲನಿಗೆ 25000 ರೂಪಾಯಿಗಳ ದಂಡವನ್ನು ವಿಧಿಸಿದ್ದಾರೆ.

ಮೀಸಲಾತಿ ರದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲರ ಹೆಸರು ಸಚಿನ್ ಗುಪ್ತಾ ಎಂದು. ಅರ್ಜಿಯೂ ಅನಗತ್ಯವಾಗಿದೆ ಮತ್ತು ಕ್ಷುಲ್ಲಕವಾಗಿದೆ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾಗೋಳಿಸುತ್ತಾ ದೂರುದಾರ ವಕೀಲನಿಗೆ ದಂಡ ವಿಧಿಸಿದೆ.

ಅನಗತ್ಯವಾದ ಅರ್ಜಿಯನ್ನು ಸಲ್ಲಿಸುವ ಮೂಲಕ ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹೀಗೆ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ವಕೀಲನ ದಂಡದ ಮೊತ್ತವನ್ನು ನಾವು ಸರ್ವೋಚ್ಚ ನ್ಯಾಯಾಲಯದ ವಕೀಲರ ಕಲ್ಯಾಣ ನಿಧಿಗೆ ಪಾವತಿಸಲು ನಿರ್ದೇಶಿಸುತ್ತೇವೆ. ಹಾಗೆ ಪಾವತಿಸಲಾದ ದಂಡದ ರಸೀದಿಯನ್ನು ಎರಡು ವಾರಗಳಲ್ಲಿ ಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವೂ ಆದೇಶಿಸಿದೆ.

ಇದೇ ಪೀಠವೂ ಜಾತಿ ವ್ಯವಸ್ಥೆಯ ಮರು ವರ್ಗೀಕರಣ ಕೋರಿ ಸಲ್ಲಿಸಿದ್ದ ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ.

Google  News WhatsApp Telegram Facebook
HTML smaller font

.

.