೪೫೪ ಪಿ.ಸಿ. ಕಲ್ಯಾಣ ಕರ್ನಾಟಕ ನಾಗರಿಕ ಪೊಲೀಸ್ ಪೇದೆಯ ದೈಹಿಕ ಪರೀಕ್ಷೆಯನ್ನು ಮುಂದೂಡ ಬೇಕು:ಕರವೇ
<span;> ಇಂದು ದಿ|| ೨೭-೧೨-೨೦೨೪ರಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಹಾಗೂ ಮಾನ್ಯ ಗೃಹ ಸಚಿವರು ರವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು ವಿಷಯ ಈಗಾಗಲೇ ನೆಡೆಯುತ್ತಿರುವ, ೪೫೪ ಪಿ.ಸಿ. ಹುದ್ದೆಗಳ ನೇಮಕಾತಿಗೆ ಮಾರ್ಚ್ ೦೧ ರಿಂದ ೪ ವರೆಗೆ ದೈಹಿಕ ಪರೀಕ್ಷೆ ನಡೆಸುತ್ತಿದ್ದು,
<span;> ಕಾರಣ ದಿನಾಂಕ:- ೨೫/೦೨/೨೪ ರಂದು ಭಾನುವಾರ ನಾಗರಿಕ ಪೊಲೀಸ್ ಪೇದೆ ಲಿಖಿತ ಪರೀಕ್ಷೆಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಈ ಭಾಗದಲ್ಲಿ ಹೊರತು ಪಡಿಸಿ ಬೇರೆ ಬೇರೆ ಜಿಲ್ಲೆಗೆ ಹೋಗಿದ್ದಾರೆ. ಅಲ್ಲಿಂದ ಬರಲು ಕನಿಷ್ಠ ೨ ರಿಂದ ೩ ದಿನವಾದರೂ ಬೇಕು ಆದರೆ ಮಾರ್ಚ್ ೦೧ ರಿಂದ ೪ ವರೆಗೆ ದೈಹಿಕ ಪರೀಕ್ಷೆ ಎಂಬ ಇಲಾಖೆಯ ಆದೇಶದಿಂದ ಅಭ್ಯರ್ಥಿಗಳು ಚಿಂತಿಸುವAತಾಗಿದೆ. ದೈಹಿಕ ಪರೀಕ್ಷೆ ಎದುರಿಸಲು ಕನಿಷ್ಟ ೨೦ ದಿನವಾದರೂ ತರಬೇತಿ ಆಗಿರಬೇಕು. ಕೇವಲ ೪ ದಿನಗಳ ಕಾಲಾವಧಿಯಲ್ಲಿ ಅಬ್ಯಾಸ ಮಾಡಲು ಸಾಧ್ಯವಿಲ್ಲ. ಅಭ್ಯರ್ಥಿಗಳ ಮೇಲೆ ಒತ್ತಡ ಹೇರುವಂತಾಗಿದೆ ಎಂದು ಹೇಳಿದರು.
<span;> ಕಾರಣ ತಾವುಗಳು ದೈಹಿಕ ಪರೀಕ್ಷೆಯ ದಿನಾಂಕವನ್ನು ೨೦ ದಿನಗಳ ಕಾಲಾವಕಾಶ ನೀಡಿ ಅಭ್ಯರ್ಥಿಗಳ ಉಜ್ವಲ ಭವಿಷ್ಯದ ಅನುಕೂಲಕ್ಕಾಗಿ ಮಾಡಿಕೊಡಬೇಕೆಂದು ತಿಳಿಸಿದ್ದರು
<span;> ದಯವಿಟ್ಟು ತಾವುಗಳು ಕೂಡಲೇ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಈ ಪತ್ರದ ಮೂಲಕ ವಿನಂತಿಸಿತ್ತೇವೆ.
<span;>ಈ ಸಂಧರ್ಭದಲ್ಲಿ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷರಾದ ವಿಶ್ವರಾಜ ಹೊನಗೇರಾ, ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಸುರೇಶ ಬೆಳಗುಂದಿ, ಮಹೇಶ ಠಾಣಗುಂದಿ, ದೇವಸಿಂಗ್ ಮಾದ್ವಾರ, ಕಾಶಿನಾಥನಾಯಕ ನಾನೇಕ, ಯಲ್ಲು ಚಾಮನಳ್ಳಿ, ಕರುಣೇಶಸ್ವಾಮಿ ಚಾಮನಳ್ಳಿ, ರಮೇಶ.ಡಿ.ನಾಯಕ, ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.