ಬಳ್ಳಾರಿ, 7 ಏಪ್ರಿಲ್ : ಬಳ್ಳಾರಿಯ ಹೇಮಾ ಜುವೆಲರ್ಸ್ ಮಾಲಿಕ ನರೇಶ್ ಸೋನಿ ತಂದೆ ಪುಕ್ ರಾಜ್ ಸೋನಿ, ಅವರ ಮನೆಯಲ್ಲಿ ಯಾವುದೇ ದಾಖಲೆಗಳಿಲ್ಲದ 5 ಕೋಟಿ 60 ಲಕ್ಷ ರೂಪಾಯಿ ಹಣ, 4 ಲಕ್ಷ ಬೆಲೆ ಬಾಳುವ 3 ಕೆ.ಜಿ ಬಂಗಾರದ ಆಭರಣಗಳು ಹಾಗೂ 42 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ಅವರ ನೇತೃತ್ವದಲ್ಲಿ ಬ್ರೂಸ್ಪೇಟೆ ಪೊಲೀಸ್ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪೊಲೀಸ
ನಮ್ಮ ಸಿಬ್ಬಂದಿಯವರು ಸೋನಿಯವರ ಮನೆಯಲ್ಲಿ ಯಾವುದೇ ಲೆಕ್ಕಪತ್ರ ಹಾಗೂ ದಾಖಲೆಗಳಿಲ್ಲದ ಕಾರಣ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ, ಸೋನಿಗೆ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕಾರಣ ವ್ಯಾಪಾರಕ್ಕೆಂದು ಇಟ್ಟುಕೊಂಡಿರಬಹುದು ಅಥವಾ ಹವಾಲ ಹಣ ಇರಬಹುದು ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ಎಸ್.ಪಿ ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬ್ರೂಸ್ ಪೇಟೆ ಠಾಣೆಯ ಪಿ.ಎಸ್.ಐ ವೆಂಕಟೇಶ್ ಚೌಹಾಣ್, ಎ.ಎಸ್.ಐ. ಅಶೋಕ್ ಮೈನಳ್ಳಿ, ಹೊನ್ನೂರಪ್ಪ, ನಾಗರಾಜ್ ಮತ್ತು ಹೆಡ್ ಕಾನ್ ಸ್ಟೇಬಲ್ ಗಳಾದ ಆನಂದ್ ರೆಡ್ಡಿ, ಕುಮಾರ್ ರೆಡ್ಡಿ, ಶರ್ಮಾಸ್. ಆರ್, ಆಂಜಿನೇಯರೆಡ್ಡಿ ರಾಜಶೇಖರ್, ಶ್ರೀನಿವಾಸ್, ಮಹಿಳಾ ಸಿಬ್ಬಂದಿಯಾದ ಶಕುಂತಲಾ, ಕು! ಶ್ವೇತಾ, ಪಿ.ಸಿಗಳಾದ. ಸುನೀಲ್, ದಾಸಪ್ಪ, ರಾಮಾಂಜಿನಿ, ರವರು ಭಾಗವಹಿಸಿದ್ದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ವರಿಷ್ಟಾಧಿಕಾರಿ ಕೆ.ಪಿ. ರವಿಕುಮಾರ್, ಮತ್ತು ನವೀನ್ ಕುಮಾರ್.ಎನ್. ರವರು ಬ್ರೂಸ್ ಪೇಟೆ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.