ಸ್ಥಳೀಯ

ಕ.ಕ.ಸಂಸದರೇ ಏಮ್ಸ್ ಸ್ಥಾಪನೆಗೆ ಧ್ವನಿಯೆತ್ತಿ: ಟಿ.ಎನ್.ಭೀಮುನಾಯಕ

WhatsApp Group Join Now
Telegram Group Join Now

ಯಾದಗಿರಿ: ಅಖಿಲ ಭಾರತ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆ(AIIಒS) ಯನ್ನು ರಾಯಚೂರಿನಲ್ಲಿಯೇ
ಸ್ಥಾಪಿಸುವಂತೆ ಒತ್ತಾಯಿಸಿ ನಿರಂತರವಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಕೇಂದ್ರ ಸರಕಾರದ ವಿಳಂಬತನ, ಕಲ್ಯಾಣ ಕರ್ನಾಟಕ ಪ್ರದೇಶದ ವಿರೋಧಿ ನೀತಿಯನ್ನು ಖಂಡಿಸಿ, ಕೂಡಲೇ ಏಮ್ಸ್ (ಂIIಒS) ಸ್ಥಾಪಿಸುವಂತೆ ಒತ್ತಾಯಿಸಿ ಕರವೇ ಜಿಲ್ಲಾ ಘಟಕವು ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದುಗಡೆ ಪ್ರತಿಭಟನೆ ಮಾಡುವ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು
ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕರವರು

ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ (ಂIIಒS) ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ದಿನಾಂಕ: 13-05-2022ರಿಂದ ನಿರಂತರ ಸುದೀರ್ಘ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಹೋರಾಟಕ್ಕೆ ಕರವೇ ಸದಾ ಬೆಂಬಲಿಸುತ್ತದೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಉದ್ದೇಶಕ್ಕೆ ಯಾವುದೇ ಹಂತದ ಹೋರಾಟಕ್ಕೂ ಕರವೇ ಸಿದ್ದವಾಗಿರುತ್ತದೆ ಎಂದು ಹೇಳಿದರು

ಈ ಒಂದು ಸುದೀರ್ಘ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ, ಕೇಂದ್ರ ಸರಕಾರದ ಹಣಕಾಸು ಸಚಿವರಿಗೆ ಶಿಫಾರಸ್ಸು ಪತ್ರಗಳನ್ನು ಬರೆದು ರಾಯಚೂರಿನಲ್ಲಿ ಏಮ್ಸ್ (ಂIIಒS) ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಒತ್ತಾಯಿಸಿದ್ದಾರೆ.

ದಿನಾಂಕ: 29-06-2024 ರಂದು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಪ್ರಧಾನಮಂತ್ರಿಗಳನ್ನು ದೆಹಲಿಯಲ್ಲಿ ಸ್ವತಃ ಭೇಟಿ ಮಾಡಿ ಹಿಂದುಳಿದ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ‘ಏಮ್’್ಸ (ಂIIಒS) ಅನ್ನು ಮಂಜೂರು ಮಾಡುವಂತೆ ವಿನಂತಿಸಿಕೊAಡಿದ್ದಾರೆ. ಆದರೆ ಇಂದಿಗೂ ಕೇಂದ್ರ ಸರಕಾರದಿಂದ ಯಾವುದೇ ಸ್ಪಂದನೆ ಇರದೇ ಇರುವುದು ಖಂಡನೀಯವಾಗಿದೆAದು ಆಕ್ರೋಶವ್ಯಕ್ತಪಡಿಸಿದರು.

ಆದ್ದರಿಂದ ಕೇಂದ್ರ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ, ಐ.ಐ.ಟಿ ಯಿಂದ ವಂಚಿತಗೊAಡ, 371(ಜೆ), ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನಕ್ಕೊಳಪಟ್ಟ, ಮಹತ್ವಾಕಾಂಕ್ಷಿ ರಾಯಚೂರು ಜಿಲ್ಲೆಗೆ ಶೀಘ್ರದಲ್ಲಿಯೇ ಏಮ್ಸ್ (ಂIIಒS) ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ,
ಇದೇರೀತಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಂಸದರು ಒಂದಾಗಿ ಏಮ್ಸ್ ಆರೋಗ್ಯ ಸಂಸ್ಥೆಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕೆಂದು ಸಂಸತ್ತಿನಲ್ಲಿ ಧ್ವನಿಯೆತ್ತುವಂತಹ ಕೆಲಸವಾಗಬೇಕು ಇಲ್ಲವಾದಲ್ಲಿ ಮುಂದೊAದಿನ ಕರವೇ ನಿಮ್ಮ ನಿಮ್ಮ ಮನೆಗಳನ್ನ ಮತ್ತು ಕಛೇರಿಗಳನ್ನ ಘೇರಾವ್ ಹಾಕಿ ಪ್ರತಿಭಟನೆ ರೂಪಿಸಬೇಕಾಗುತ್ತದೆಂದು ಎಚ್ಚರಿಸಿದ್ದರು

ಒಂದು ವೇಳೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವಂತ ಜಿಲ್ಲೆಗಳಲ್ಲಿ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆAದು ತಿಳಿಸಿದರು,
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲ್ಕರ್, ಹಣಮಂತನಾಯಕ ಖಾನಳ್ಳಿ, ಹಣಮಂತ ಅಚ್ಚೋಲ, ಭೀಮರಾಯ್ ರಾಮಸಮುದ್ರ, ಪಪ್ಪುಗೌಡ ಚಿನ್ನಾಕರ್, ಶರಣುಸಾಹುಕಾರ, ವಿಶ್ವರಾಜ್ ಹೋನಗೇರಾ, ಮಲ್ಲಿಕಾರ್ಜುನ ಕನ್ನಡಿ, ಸಿದ್ದು ಸಾಹುಕಾರ, ಅಬ್ದುಲ್ ರೀಯಾಜ್, ವಿಜಯರಾಠೋಡ್, ಕಾಶಿನಾಥ್ ನಾನೇಕ್, ಸುಭಾಷ ಯರಗೋಳ, ಮಹೇಶ ಠಾಣಗುಂದಿ, ಬೀಮರಾಯ್, ಶರಣು ಮಡಿವಾಳ, ರಫೀಕ್ ವರ್ಕನಳ್ಳಿ ಮಂಜುನಾಥ ಬೇಗಾರ, ರಮೇಶನಾಯಕ ಇನ್ನತರರುಭಾಗಿಯಾಗಿದ್ದರು.

 

ನಿಮ್ಮ ಸಹಾಯವಿಲ್ಲದೆ ಏನನ್ನೂ ಮಾಡಲು ಆಗದು, ನಿಮಗನ್ನಿಸಿದಷ್ಟು ಸಹಾಯ ಮಾಡಿ.
WhatsApp Group Join Now
Telegram Group Join Now

Related Posts