ನಂಬಿಕೆ ಎನ್ನುವ ಪದವನ್ನು ಕಾಪಡಿಕೊಳ್ಳುವ ಅಗತ್ಯದ ಕುರಿತು ಒಂದು ಚಿಂತನೆ

Jul 8, 2023 - 13:44
 0  25

Google  News WhatsApp Telegram Facebook

ನಂಬಿಕೆ ಎನ್ನುವ ಪದವನ್ನು ಕಾಪಡಿಕೊಳ್ಳುವ ಅಗತ್ಯದ ಕುರಿತು ಒಂದು ಚಿಂತನೆ

Janaa Akrosha News Desk.

ನಂಬಿಕೆಜಗತ್ತಿನ ಬಹುದೊಡ್ಡ ಮತ್ತು ಮಹತ್ವಪೂರ್ಣ ಪದ.ಭಾಗಶಃ ಜಗತ್ತು ಪದದ ಆಧಾರದ ಮೇಲೆ ಜೀವಿಸುತ್ತಿದೆ.ಮನುಷ್ಯನ ಪ್ರತಿ ಶ್ವಾಸ ಮತ್ತು ನಿಶ್ವಾಸ ಪದವನ್ನೇ ಅವಲಂಬಿಸಿದೆ.ಮನುಷ್ಯನ ಒಟ್ಟಾರೆ ಬದುಕಿನ ಧ್ಯೇಯವೇ ನಂಬಿಕೆ.ರಾತ್ರಿ ಊಟ ಮುಗಿಸಿ ಹಾಸಿಗೆಗೆ ಮೈ ಚೆಲ್ಲುವ ಮುನ್ನ ಪ್ರತಿ ವ್ಯಕ್ತಿ.ಪ್ರತಿ ನರಜೀವಿ ನಾಳಿನ ಬೆಳಗಿನ ನಂಬಿಕೆಯೊAದಿಗೇ ಕಣ್ಮುಚ್ಚುತ್ತದೆ. ನಂಬಿಕೆಯAತೆ ಬೆಳಗು ಮೂಡುತ್ತದೆ,ಹೊಸ ಸೂರ್ಯೋದಯವಾಗುತ್ತದೆ,ಮತ್ತೆ ಬದುಕಿನ ಆರಂಭ.ಬದುಕು ಹೊಸದಾದರೇನು ಹಳೆಯದಾದರೇನು,ನಿತ್ಯದ ಬೆಳಗಿನೊಂದಿಗೆ ಆರಂಭವಾಗುವ ಜೀವನ ನಿತ್ಯ ನೂತನ. ನಿತ್ಯನೂತನ ಜೀವನ ಅವಲಂಬಿಸಿರುವುದೇ ನಂಬಿಕೆಯ ಮೇಲೆ.ಸುಖಿಯಾಗಿ ಬದುಕುತ್ತೇವೆ ಎನ್ನುವ ನಂಬಿಕೆ ನಮ್ಮ ಮನಸ್ಸಿಗೆ ಒದಗಿಸುವ ಇಂಧನ,ಮುAದಿನ ವರ್ಷ ನಿರೀಕ್ಷಿತ ಗುರಿ ತಲುಪುತ್ತೇವೆ ಎನ್ನುವ ನಂಬಿಕೆ ಜೀವನೋತ್ಸಾಹ.ಮುರಿದ ಮನಸ್ಸುಗಳು ಮತ್ತೆ ಕಟ್ಟಲ್ಪಡುತ್ತವೆ ಎನ್ನುವ ನಂಬಿಕೆ ಜೀವನ ಭರವಸೆಯಾಗುತ್ತದೆ.ಮನುಷ್ಯನ ಒಟ್ಟಾರೆ ಬದುಕು ನಂಬಿಕೆಯನ್ನು ಅವಲಂಬಿಸಿದೆ.Aಬಿಕೆ ಮುರಿದು ಹೋದ ಮೇಲೆ ಮನುಷ್ಯನ ದೇಹದೊಳಗೆ ಚೈತನ್ಯವೂ ಉಳಿಯಲಾರದೇನೋ?ನಂಬಿಕೆ ತೀರಿ ಹೋದ ಮೇಲೆ ಮನುಷ್ಯ ಜೀವಂತ ಶವವೇನೋ?ಶವದ ಕೊಳೆತ ನಾತವನ್ನು(ವಾಸನೆ) ನೀವು ಸಹಿಸಬಹುದು,ಜೀವಂತವಾಗಿ ಸತ್ತ ಮನುಷ್ಯನ ವಾಸನೆಯನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ!

ನಾನು ತುಂಬಾ ಜನರನ್ನು ಪ್ರಶ್ನಿಸಿದ್ಧೇನೆ,ಏಕೆ ಕುಡಿಯುತ್ತಿದ್ದೀರಿ,ಕುಡಿತ ನಿಮ್ಮ ಬದುಕನ್ನು,ನಿಮ್ಮ ಜೀವನವನ್ನು ನಾಶ ಮಾಡುತ್ತದಲ್ಲವೇ ಎಂದು,ಕುಡಿತ ಬರೀ ಜೀವನವನ್ನು ಮಾತ್ರವಲ್ಲ ಜೀವವನ್ನೂ ನಾಶ ಮಾಡುತ್ತದೆ, ಸಂಗತಿಯನ್ನು ವಿವರಿಸಿಯೇ ನಾನು ಪ್ರಶ್ನೆ ಕೇಳಿರುತ್ತೇನೆ,ಅವರಿಂದ ವಿಷಾದದ, ನಿರಾಶೆಯ ಉತ್ತರ ಬರುತ್ತದೆ;ಇನ್ನೇನು ಸರ್ ಉಳಿದಿದೆ ಜೀವನ,ಆಯ್ತಲ್ಲ ಎಂದು!ಆಗಿನ್ನೂ ವಯಸ್ಸು ನಲವತ್ತು ನಲವತ್ತೆöÊದರಲ್ಲಿರುತ್ತದೆ. “ಅರೆ ಸರ್,ಎಲ್ಲಿದ್ದೀರಿ,ನಾವೆಲ್ಲಿ ನೂರು ವರ್ಷ ಬದುಕುತ್ತೇವೆ?ಐವತ್ತು ಅರವತ್ತಕ್ಕೆ ಚಟ್ಟ ರೆಡಿ ನಮ್ಮದು!”ಎನ್ನುತ್ತಾರೆ.ಅವರು ನಿರಾಶೆಯ ಭಯಾನಕ ಕಂದಕದೊಳಗೆ ಜಾರಿ ಹೋಗಿರುತ್ತಾರೆ.ಅವರ ಇಡೀ ಬದುಕು ನಿರಾಶೆಯಿಂದ ಕೂಡಿರುತ್ತದೆ.ಮದುವೆ,ಮದುವೆಯಾದ ಮೇಲೆ ಮಕ್ಕಳು,ಯಾಂತ್ರಿಕವಾಗಿ ಸಾಗುವ ಉದ್ಯೋಗ-ವ್ಯಾಪಾರ,ಹುಟ್ಟದ ಹೊಸ ಕನಸುಗಳು...ಉಹುಂ,ಇವೆಲ್ಲವೂ ನಿರಾಶೆಯ ಕಡೆಗೆ ಕೊಂಡೊಯ್ಯುವ ವಾಹನಗಳು;ಬದುಕು ಅರ್ಥ ಕಳೆದುಕೊಂಡ ಸ್ಥಿತಿಯಲ್ಲಿ ಉಲ್ಭಣಗೊಂಡ ರೋಗಗಳು.ಇಂತಹ ವ್ಯಕ್ತಿಗಳೇ ಕುಡಿತ ಧೂಮಪಾನ ಮತ್ತು ಧಾರ್ಮಿಕ ಭಾವನೆಗಳ ದಾಸರಾಗುತ್ತಾರೆ.ಕಾಣದ ಭವಿಷ್ಯದ ಮೇಲೆ ಭರವಸೆ ಇಡುತ್ತಾರೆ.ಕಾಣದ ದೇವರು ಇವರಿಗೆ ಧೈರ್ಯ;ತಮ್ಮೆಲ್ಲಾ ಭಯಗಳನ್ನು ದೇವರ ಮೇಲೆಯೋ,ದೆವ್ವ ಅವಧೂತರ ಮೇಲೆ ಹಾಕಿ ಕುಡಿದು ನೆನಪುಗಳಿಂದ ದೈನಂದಿನ ಬದುಕಿನಿಂದ ದೂರವಾಗುವ ಪ್ರಯತ್ನ ಮಾಡುತ್ತಾರೆ,ಇವರು ನಂಬಿಕೆಯನ್ನು ಅರ್ಧಂಬರ್ಧ ಕಳೆದುಕೊಂಡವರು.ಬದುಕಿನ ಒಂದು ಹಂತವನ್ನು ಪೋರೈಸಿರುವ ಇವರಿಗೆ ನಂಬಿಕೆಯ,ಭರವಸೆಯ ಅಗತ್ಯ ಬೀಳುವುದಿಲ್ಲ.

ಆರ್ಥಿಕ ಭದ್ರತೆ ಇರುವ ವ್ಯಕ್ತಿಗಳ ಬದುಕು ನೆಮ್ಮದಿಯಿಂದ ಇರುತ್ತದೆ.ಎಲ್ಲಿ ನೆಮ್ಮದಿ ಇರುತ್ತದೋ ಅಲ್ಲಿ ನಂಬಿಕೆಗಳು ಗಾಢವಾಗಿರುತ್ತವೆ.ನಂಬಿಕೆ ಎನ್ನುವುದು ಪರಸ್ಪರರ ಮಧ್ಯೆ ಇರುವ ಭರವಸೆಯೂ ಆಗಿತ್ತದೆ.ಮನೆಯಲ್ಲಿ ಹೆಂಡತಿಯನ್ನು ಬಿಟ್ಟು ಆಫೀಸ್ ಅಥವಾ ವ್ಯಾಪಾರಕ್ಕೆ ಹೋಗುವ ಪತಿಗೆ ಹೆಂಡತಿಯ ಮೇಲೆ ನಂಬಿಕೆ ಇರುತ್ತದೆ,ಅದೇ ರೀತಿ ಪತ್ನಿಗೂ ಸಹ.ಬೆಳಿಗ್ಗೆ ಟಿಫನ್ ಮಾಡಿ ಮನೆ ಬಿಟ್ಟು ಹೊರಡುವ ಪತಿ ಬರುವುದು ಸಾಯಂಕಾಲ ಆರಕ್ಕೆ,ವ್ಯಾಪಾರಸ್ಥರಾದರೆ ಅವರಿಗೆ ಸಮಯದ ಮಿತಿ ಇರುವುದಿಲ್ಲ.ಹೀಗೆ ಮನೆಯಿಂದ ಆಚೆ ಇರುವ ಗಂಡನ ನಿರೀಕ್ಷೆಯಲ್ಲಿ ಕಾಯುವ ಪತ್ನಿಗೆ ಇರುವುದು ನಂಬಿಕೆಯೇ!ಮಕ್ಕಳಿಗೆ ತಂದೆಯ ತಾಯಿಯ ಮೇಲೆ ನಂಬಿಕೆ,ತಾಯಿ ತಂದೆಗೆ ಮಕ್ಕಳ ಮೇಲೆ ನಂಬಿಕೆ.ಯಾವಾಗ ಪರಸ್ಪರರ ನಂಬಿಕೆಗಳು ಮುರಿದು ಹೋಗುತ್ತವೆ ನೋಡಿ,ಆಗ ಹೃದಯ ಘಾತುಕತೆಗೆ ಒಳಗಾಗುತ್ತದೆ.ಮನಸು ಒಡೆದ ಕನ್ನಡಿಯಂತೆ ಪುಡಿಪುಡಿಯಾಗುತ್ತದೆ.ಒಮ್ಮೆ ಮುರಿದ ಮನಸ್ಸು ಮತ್ತೆ ಕೂಡಿರುವುದು ಇತಿಹಾಸದಲ್ಲಿಯೇ ಇಲ್ಲ.ಕಪಟಿಗಳು ಆತ್ಮವಂಚನೆಯಿA ಜೀವಿಸುತ್ತಾರೆ,ಅವರಿಗೆ ಮನಸ್ಸೆಂಬುದು ಇರುವುದಿಲ್ಲ.ಮನಸ್ಸು ಮತ್ತು ಆತ್ಮವಂಚನೆಯ ಪರಿಕಲ್ಪನೆ ಇರದವರಿಗೆ ನಂಬಿಕೆ ವಿಶ್ವಾಸಗಳ ಅಗತ್ಯವಿಲ್ಲ.ಅವರು ಪಶುವಿನಂತೆ ಜನ್ಮಿಸಿ ಪಶುವಿನಂತೆ ಮರಣಿಸಿ ಹೋಗುತ್ತಾರೆ.ಅವರ ಜೀವನವೂ ಪೂರ್ಣಾವಧಿ ದುರ್ಗಂಧದಿA ಕೂಡಿರುತ್ತದೆ.ಅಂತಹ ಜನರನ್ನು ನೀವೂ ನೋಡಿರುತ್ತೀರಿ. ನಂಬಿಕೆ,ವಿಶ್ವಾಸ,ಭರವಸೆ,ಪ್ರೀತಿ ಸ್ನೇಹಗಳು ಸೂಕ್ಷö್ಮಗಾಹಿ ಮನಸ್ಸುಗಳ ಸಂವೇದನೆಗಳು.ಸೂಕ್ಷö್ಮ ಮನಸ್ಸಿಗ  ಇನ್ನೊಬ್ಬರನ್ನು ನೋಯಿಸುವ,ವಿಶ್ವಾಸಘಾತುಕ ಕೆಲಸ ಮಾಡುವ ಕೃತ್ಯಕ್ಕೆ ಯಾವತ್ತಿಗೂ ಮುಂದಾಗುವುದಿಲ್ಲ.ಆತ ನಂಬಿಕೆಯನ್ನು ಆಧರಿಸಿ ಜೀವಿಸುತ್ತಾನೆ.

ಭಾರತೀಯ ಮನಸ್ಸುಗಳಲ್ಲಿ ಧಾರ್ಮಿಕ ಭಾವನೆಗಳನ್ನು ತುಂಬಲ್ಪಟ್ಟಿರುವುದು ಮನುಷ್ಯ ಸಂವೇದನಾಶೀಲ ಮನಸ್ಸಿನಿಂದ ಜೀವಿಸಲಿ ಎಂದು.Aದರೆ ಸೂಕ್ಷö್ಮ ಮನಸ್ಸು,ಭಾವುಕತೆ ಇರುವ ಮನಸ್ಸನ್ನು ಸೃಷ್ಟಿಸುವುದು ನಮ್ಮ ಪೂರ್ವಿಕರ ಉದ್ದೇಶವಾಗಿರಬೇಕು.ದೇವರನ್ನು ಸುಕೋಮುಲ,ಸರ್ವಗುಣ ಸಂಪನ್ನ,ಪ್ರೇಮಮೂರ್ತಿ,ದಯೆ,ಕರುಣೆ,ಶರಣಾಗತ ರಕ್ಷಕ,ಭಕ್ತರ ಕಲ್ಪವೃಕ್ಷ ಎಂಬಿತ್ಯಾದಿ ಭಾವನೆಗಳಿಂದ ಚಿತ್ರಿಸಿದ್ದು ಗುಣಗಳನ್ನು ಮನುಷ್ಯನೂ ಅಳವಡಿಸಿಕೊಳ್ಳಲಿ ಎಂದು.ದೇವರನ್ನು ಸೃಷ್ಟಿಸಿರುವುದರ ಹಿನ್ನೆಲೆಯಲ್ಲಿ ಒಂದು ಉತ್ತಮ ಸಮಾಜದ ಕನಸಿನ ನಿರ್ಮಾಣದ ಉದ್ದೇಶವಿರುವುದು ಅತ್ಯಂತ ಸ್ಪಷ್ಟ. ದೇವರು ಮತ್ತು ದೈವತ್ವವನ್ನು ಗಾಢವಾದ ನಂಬಿಕೆಯಿA ಮಾತ್ರ ಕಾಣಬಹುದು ಎಂದು ಹೇಳಲಾಗಿದೆ.ನಂಬಿದವರಿಗೆ ದೇವರು ಕಾಣಿಸುತ್ತಾನಂತೆ,ಮುAದುವರೆದು ನಂಬಿಕೆಯೇ ದೇವರು ಎನ್ನುವುದು ನನ್ನ ಪ್ರತಿಪಾದನೆ.ಕಲ್ಲಿನಲ್ಲಿ ದೇವರನ್ನು ಕಾಣುತ್ತದೆ ಭಾರತದ ಹಿಂದೂ ಧಾರ್ಮಿಕ ಮನಸ್ಸು.ಕಲ್ಲಿನ ಮೇಲೆ ಗಾಢವಾದ ನಂಬಿಕೆ ಇಡುವುದರಿಂದ ಕಲ್ಲೂ ದೇವರಾಗುತ್ತದೆ.ನಂಬಿಕೆ ಇಡುವುದು ಎಂದರೆ ಸಂಬAಧಿಸಿದ ವಿಷಯದ ಮೇಲೆ ಏಕಾಗ್ರನಾಗುವುದು ಎಂದರ್ಥ.ದುರಾದೃಷ್ಟವೇನೆAದರೆ ಯಾವ ಸದ್ದುದ್ದೇಶದಿಂದ ದೇವರನ್ನು ದೈವತ್ವವನ್ನು ಸೃಷ್ಟಿಸಲಾಯಿತೋ ಅದಿವತ್ತು ಮೌಢವಾಗಿ,ವ್ಯಾಪಾರವಾಗಿ ಬದಲಾಗಿದೆ.ಜಗತ್ತಿನ ಬಹುದೊಡ್ಡ ಆರ್ಥಿಕತೆ ದೇವರ ಮೇಲೆ ನಿಂತಿದೆ.ಭಾರತದ ಖ್ಯಾತ ದೇವಸ್ಥಾನಗಳುಮತ್ತು ದೇವರುಗಳು ಒಂದು ರಾಜ್ಯವನ್ನು ಮುನ್ನೆಡೆಸುವ ಆರ್ಥಿಕತೆಯನ್ನು ಹೊಂದಿವೆ.ಮುಗ್ಧರು,ಅನೇಕ ಮಾನಸಿಕ ಸಮಸ್ಯೆಗಳಿಂದ ನರಳುತ್ತಿರುವ ಮನಸ್ಸುಗಳಿಗೆ ದೇವರೇ ದೊಡ್ಡ ಔಷಧಿ. ಕಾರಣಕ್ಕೆ ದೇವರ ಅಗತ್ಯ ಜಗತ್ತಿಗೆ ಇದೆ.ಆದರೆ ದೇವರಿಂದ ಮನುಷ್ಯನಿಗೆ ಉಪಯೋಗಗಳಾಗಬೇಕು ಎಂದರೆ ಗಾಢವಾದ ನಂಬಿಕೆ ಬೇಕು.ಭಕ್ತಿ ಎಂದರೆ ನಂಬಿಕೆಯನ್ನು ರೂಢಿಸಿಕೊಳ್ಳುವ ತಾಲೀಮು!

ನಾನು ಆಗಾಗ ನನ್ನ ಗೆಳೆಯರಿಗೆ ಹೇಳುತ್ತಿರುತ್ತೇನೆ,ನಂಬಿಕೆಯೇ ಎಟಿಎಂ ಎಂದು!ಹೌದು,ನಾವು ನಂಬಬಹುದಾದ ವ್ಯಕ್ತಿಗಳಾಗಿದ್ದರೆ,ನಾವು ನಂಬಿಕೆಯನ್ನು ಕಾಪಾಡುವ ವ್ಯಕ್ತಿಗಳಾಗಿದ್ದಲ್ಲಿ ಜಗತ್ತಿನ ಎಲ್ಲರ ಬ್ಯಾಂಕ್ ಖಾತೆಗಳೂ ನಮ್ಮ ಪಾಲಿಗೆ ಎಟಿಎಂ ಮೆಷಿನ್ಗಳು.ನಾವು ಬದುಕುವುದನ್ನು ನಂಬಿಕೆ ಎನ್ನುವ ಪದದ ಅರ್ಥ ಕಂಡುಕೊಳ್ಳುವುದರೊAದಿಗೆ ಮತ್ತದನ್ನು ರೂಢಿಸಿಕೊಳ್ಳುವುದರೊಂದಿಗೆ ಆರಂಭಿಸಬೇಕು.

ಒಬ್ಬ ಕಡುಮೂರ್ಖ ಜನರನ್ನು ನಂಬಿಸುವ ಮೂಲಕ ರಾಜಕೀಯ ಚುಕ್ಕಾಣಿ ಹಿಡಿಯುತ್ತಾನೆ,ಆತ ರಾಜಕಾರಣಿಯಾಗುತ್ತಾನೆ.ರಾಜನೂ ಆಗುತ್ತಾನೆ.ಒಬ್ಬ ವ್ಯಾಪಾರಿ ತನ್ನ ಸರಕಿನ ಬಗ್ಗೆ ಗ್ರಾಹಕನಿಗೆ ನಂಬಿಕೆ ಹುಟ್ಟಿಸುತ್ತಾನೆ,ಆತ ಸಂಪತ್ತಿನ ಒಡಯನಾಗುತ್ತಾನೆ.ಒಬ್ಬ ಬಾಬಾ ದೇವರಲ್ಲಿ ನಂಬಿಕೆಯನ್ನು ಮೂಡಿಸುವ ಮೂಲಕ ತನ್ನ ಅನುಯಾಯಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.ಎರಡು ಮನಸ್ಸುಗಳು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಬಾಳುತ್ತವೆ ಎಂದರೆ ಎರಡು ಮನಸ್ಸುಗಳ ಮಧ್ಯೆ ನಂಬಿಕೆ ಇರುತ್ತದೆ.ಮಗಳನ್ನು ಒಬ್ಬ ತಂದೆ ದೂರದ ಊರಿನಲ್ಲಿ ವಸತಿಗೃಹದಲ್ಲಿ ಓದಿಸುತ್ತಿದ್ದಾನೆ ಎಂದರೆ ಆತ ಮಗಳ ಮೇಲೆ ಗಾಢವಾದ ನಂಬಿಕೆ ಇಟ್ಟಿರುತ್ತಾನೆ.ಜೀವಮಾನದ ದುಡಿಮೆಯನ್ನು ಮಕ್ಕಳ ಮೇಲೆ ಹೂಡುವ ಪಾಲಕರು ಇಳಿಗಾಲದಲ್ಲಿ ಅವರ ಆಸರೆಯ ನಂಬಿಕೆಯನ್ನು ಹೊಂದಿರುತ್ತಾರೆ.

Aಬಿಕೆ ಎಲ್ಲಾ ಕಾಲದಲ್ಲೂ ಸ್ಥಿರವಾಗಿ ಇರದು,ನಂಬಿಕೆಗಳು ಸ್ಥಿರವಾಗಿ ಇರುವುದೇ ನಿಜವಾಗಿದ್ದರೆ ಮನಸ್ಸುಗಳು ಸ್ಮಶಾನವಾಗುತ್ತಿರಲಿಲ್ಲ.ಗೋಡೆಗಳು ಬಿರುಕು ಬಿಡುತ್ತಿರಲಿಲ್ಲ.ಮಕ್ಕಳ ನಂಬಿಕೆ ದ್ರೋಹ ತಂದೆಯ ಜೀವನ,ಜೀವವನ್ನು ಬಲಿ ಪಡೆಯುತ್ತದೆ.ಅತಿಯಾಗಿ ಪ್ರೀತಿಸಿದವನು ಕೈಬಿಟ್ಟಾಗ ಪ್ರೀತಿಯ ಕುರಿತು ಇರುವ ನಂಬಿಕೆ ಸತ್ತು ಹೋಗುತ್ತದೆ.ನಂಬಿಕೆ ಸತ್ತು ಹೋದ ಮೇಲೆ ಜೀವ ಇದ್ದರೆಷ್ಟು ಬಿಟ್ಟರೆಷ್ಟು?

ನಂಬಿಕೆ ನಿಜಕ್ಕೂ ಬಹುದೊಡ್ಡ ಪದ!

 

                                                                                          ಲಕ್ಷ್ಮೀಕಾಂತ ನಾಯಕ

Google  News WhatsApp Telegram Facebook
HTML smaller font

.

.