ಟ್ರಾಕ್ಟರ್ ಮತ್ತು ಬೈಕ್ ಮಧ್ಯೆ ಅಪಘಾತ,ಟ್ರಾಕ್ಟರ್ ಚಾಲಕ ಮೃತ

Aug 8, 2023 - 18:21
 0  294

Google  News WhatsApp Telegram Facebook

ಟ್ರಾಕ್ಟರ್ ಮತ್ತು ಬೈಕ್ ಮಧ್ಯೆ ಅಪಘಾತ,ಟ್ರಾಕ್ಟರ್ ಚಾಲಕ ಮೃತ

Janaa Akrosha News Desk.

ಯಾದಗಿರಿ:ಆಗಸ್ಟ್ 08: ಟ್ರಾಕ್ಟರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರರು ಗಾಯಗೊಂಡು ಟ್ರಾಕ್ಟರ್ ಚಾಲಕ ಸ್ಥಳದಲ್ಲಿಯೇ ಮೃತಗೊಂಡಿದ್ದಾನೆ. ಘಟನೆಯೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಕ್ರಾಸ್ ಹತ್ತಿರ ಸಂಭವಿಸಿದ್ದು ಮೃತ ವ್ಯಕ್ತಿ ವಡಗೇರಾ ತಾಲ್ಲೂಕಿನ ಕೋಡಾಲ ಗ್ರಾಮದವನು ಎಂದು ತಿಳಿದು ಬಂದಿದೆ. ಇನ್ನು ತೀವ್ರವಾಗಿ ಗಾಯಗೊಂಡ ಬೈಕ್ ಸವಾರರು ಶಹಾಪೂರಿನವರು ಎಂದು ಹೇಳಲಾಗಿದೆ. ಮೃತ ವ್ಯಕ್ತಿಯನ್ನು ಹಾಗು ಗಾಯಗೊಂಡ ಬೈಕ್ ಸವಾರರನ್ನು ಶಹಾಪೂರಿನ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು ಘಟನೆಯೂ ಶಹಾಪೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Google  News WhatsApp Telegram Facebook
HTML smaller font

.

.