ರೈತನ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಒಂದು ವಿಶ್ಲೇಷಣೆ

Jul 18, 2023 - 09:59
 0  27

Google  News WhatsApp Telegram Facebook

ರೈತನ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಒಂದು ವಿಶ್ಲೇಷಣೆ

Janaa Akrosha News Desk.

ರೈತನ ಆತ್ಮಹತ್ಯೆಗಳು ಏಕೆ ಸಂಭವಿಸುತ್ತವೆ?ಅದೇಕೆ ರೈತ ಕುಟುಂಬ ನೋಡು ನೋಡುತ್ತಿರುವಂತೆ ಅನಾಥವಾಗಿ ಹೋಗುತ್ತದೆ?ರೈತನ ಕುಟುಂಬ ರೈತನ ಮಕ್ಕಳು ಬೀದಿಗೆ ಬೀಳುವುದರ ಹಿನ್ನೆಲೆ ಏನು?ರೈತನ ಮಕ್ಕಳು ಹಸಿವನ್ನೆÃ ತಮ್ಮ ವಿಧಿ ಲಿಖಿತ ಎಂದು ಭಾವಿಸಿ ಬದುಕುವುದರ ಕಾರಣವೇನು?ಆತ ಎಲ್ಲರಿಗೂ ಅನ್ನ ನೀಡುತ್ತಾನೆ;ಇಡೀ ಜಗತ್ತು ಆತನ ಹೆಗಲ ಮೇಲಿದೆ;ಇಡೀ ಜಗತ್ತು ಆತ ಬೆಳೆಯುವ ಅನ್ನವನ್ನು ಅವಲಂಬಿಸಿದೆ.ರೈತನ ಶ್ರಮದ ಮೇಲೆ ಜಗತ್ತಿನ ಉಸಿರು ನಿಂತಿದೆ.ಜಗತ್ತು ಎನ್ನುವ ವಾಹನದ ಚಾಲನೆಗೆ ಕೃಷಿ ಒಂದು ಇಂಧನವಾಗಿದೆ.ಆದರೆ ರೈತ ಮಾತ್ರ ಹಸಿದ ಹೊಟ್ಟೆಯಿಂದ ಮಲಗುತ್ತಾನೆ.ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಾನೆ.ಸಾಲಭಾದೆಯಿಂದ ಅವಮಾನ ನೋವು ಅನುಭವಿಸುತ್ತಾನೆ.ಏಕೆ ಹೀಗೆ?ಇದೇನು ಉತ್ತರವಿಲ್ಲದ ಪ್ರಶ್ನೆ ಏನು ಅಲ್ಲ

 

ಕೃಷಿ ಹಲವು ಉದ್ದಿಮೆಗಳಿಗೆ ತಳಹದಿಯಾಗಿದೆ.ತುಂಬಾ ಕಾರ್ಖಾನೆಗಳು ಕೃಷಿ ಉತ್ಪಾದನೆಯ ಮೇಲೆ ನಡೆಯುತ್ತಿವೆ.ಕಾರ್ಖಾನೆಗಳ ಮಾಲೀಕರು ಸುಖವಾಗಿರುತ್ತಾನೆ. ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಮೂರು ಹೊತ್ತು ಸುಖ ಭೋಜನೆ ಮಾಡುತ್ತಾನೆ.ಬೃಹತ್ ಉದ್ದಿಮೆಗಳ ಮಾಲೀಕರು ಸಾವಿರಾರು ಕೋಟಿ ರೂಪಾಯಿಗಳನ್ನು ಸಂಪಾದಿಸಿ ಐಷರಾಮಿ ಜೀವನ ಮಾಡುತ್ತಾನೆ.ಕಛೇರಿಗಳಲ್ಲಿ ಕೆಲಸ ಮಾಡುವ ಕೊನೆಯ ದರ್ಜೆಯ ಗುಮಾಸ್ತನೂ ಕೂಡಾ ಆರ್ಥಿಕ ಭದ್ರತೆಯಿಂದ ನೆಮ್ಮದಿಯ ಜೀವನ ಮಾಡುತ್ತಾನೆ.ಆತನಿಗೆ ವಿಶ್ರಾಂತಿ,ಆತನ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮತ್ತು ಆರೋಗ್ಯ ಸೇವೆಗಳು ಇನ್ನಿತರ ಸೌಲಭ್ಯಗಳು ದೊರೆಯುತ್ತವೆ.ಆದರೆ ರೈತನ ಹಣೆಬರಹ?ದಾರುಣವಾಗಿದೆ

 

ನಿಮಗೆ ತಿಳಿದಿರಲಿ:೨೦೧೩ ರಿಂದ ೨೦೧೭ರ ತನಕ ಕರ್ನಾಟಕದಲ್ಲಿ ಸುಮಾರು ೩೫೧೫ ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.ಆತ್ಮಹತ್ಯೆಗೆ ಕಾರಣ ಬೆಳೆ ನಷ್ಟ ಮತ್ತು ಕೃಷಿ ವೈಫಲ್ಯ. ಕೃಷಿ ವೈಫಲ್ಯಕ್ಕೆ ನೇರ ಕಾರಣ ಮಳೆಯ ಕೈ ಕೊಡುವಿಕೆ ಪ್ರಧಾನವಾದರೂ ರೈತರ ನೆರವಿಗೆ ಧಾವಿಸುವಲ್ಲಿ ಸರ್ಕಾರ ಮೀನ ಮೇಷ ಎಣಿಸಿದ್ದು ಒಂದು ಪ್ರಮುಖ ಅಂಶವಾಗಿದೆ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಂಡಿಸುವ ಕೃಷಿ ಬಜೆಟ್ ರೈತರನ್ನು ತಲುಪುವಲ್ಲಿ ವಿಫಲವಾಗುತ್ತಿದೆ.ಕಾಲ ಕಾಲಕ್ಕೆ ಮಳೆ ಬಾರದಿರುವುದು ಮತ್ತು ರಸ ಗೊಬ್ಬರ ವಿತರಣೆಯಲ್ಲಿ ಸರ್ಕಾರಗಳು ನಡೆದುಕೊಂಡ ರೀತಿ ಅತ್ಯಂತ ಖಂಡನೀಯವಾಗಿದೆ.ರೈತನ ಪುನ್ಛೆÃತನದ ಬಗ್ಗೆ ಯೋಚಿಸದ ಸರ್ಕಾರಗಳು ರೈತನ ಸಾವಿನ ನಂತರ ೫೦೦೦೦೦೦ ಲಕ್ಷ ರೂಪಾಯಿಗಳನ್ನು ಸಹಾಯ ಧನವಾಗಿ ವಿತರಿಸುತ್ತಿರುವುದು ಆತ್ಮಹತ್ಯೆಯ ಪ್ರೊÃತ್ಸಾಹ ತಂತ್ರವಾಗಿದೆ.ರೈತ ಬದುಕಿರುವಂತೆ ಆತನ ಸಂಕಷ್ಟದ ಪರಿಸ್ಥಿತಿಗೆ ನೆರವಾಗದ ಸರ್ಕಾರಗಳು ಆತನ ಸಾವಿಗೆ ಹುರಿದುಂಬಿಸುತ್ತವೆ.ಒಂದು ತಮಾಷೆ ಹೇಳಬೇಕು ಎಂದರೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಸಣ್ಣ ರೈತರ ಬಿತ್ತನೆಗೆ ಸಹಕಾರಿ ಸಂಘಗಳ ಮೂಲಕ ಆರ್ಥಿಕ ನೆರವು ನೀಡಬೇಕಿರುವ ಘನ ಸರ್ಕಾರಗಳು ಮಾರ್ಚ ತಿಂಗಳಿನಲ್ಲಿ ಅಲ್ಪ ಸ್ವಲ್ಪ ಸಾಲ ನೀಡುತ್ತವೆ.ಕುಡಿಯಲಿಕ್ಕೆ;ಕುಡಿದು ಸಾಯಲಿಕ್ಕೆ!ಮಾರ್ಚ ತಿಂಗಳಿನಲ್ಲಿ ಯಾವ ಕೃಷಿ ಚಟುವಟಿಕೆಗಳಿರುತ್ತವೋ ದೇವರೇ ಬಲ್ಲ.ಮಾನವ ಸಂಪನ್ಮೂಲ ಅಥವಾ ರೈತ ಸಾಮೂಹಿಕವಾಗಿ ಭೌತಿಕ ಅಸ್ಥಿತ್ವ ಕಳೆದುಕೊಳ್ಳುವಿಕೆ ಆಡಳಿತ ಯಂತ್ರದ ಸುಲಭ ಚಾಲನೆಗೆ ಅವಶ್ಯವೇನೋ ಅನ್ನುವ ಅನುಮಾನ ಸರ್ಕಾರಗಳ ನಡೆಯಿಂದ ಅನ್ನಿಸುತ್ತದೆ

 

ನ್ಯಾಷನಲ್ ಕ್ರೆöÊಮ್ ರಿಕಾರ್ಡಸ್ ಬ್ಯೂರೋ ಪ್ರಕಾರ ೨೦೧೪ರಲ್ಲಿ ಭಾರತದಲ್ಲಿ ೫೬೫೦ ರೈತರ ಆತ್ಮಹತ್ಯೆಗಳಾಗಿದ್ದವು.ಅತ್ಯಂತ ಭಯಾನಕವಾದ ಅಂಕಿ ಅಂಶವೆಂದರೆ ೨೦೦೪ರದು. ಎರಡು ಸಾವಿರದ ನಾಲ್ಕರಲ್ಲಿ ಜರುಗಿದ ರೈತ ಆತ್ಮಹತ್ಯೆಗಳ ಸಂಖ್ಯೆ ಹೇಳಿದರೆ ಭಯ ಬೀಳುತ್ತಿÃರಿ!ನಿಮಗೆ ಗೊತ್ತಾ?೧೮೨೪೧ ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು!ಭಾರತದ ೭೦% ಪ್ರತಿಶತ ಜನ ಪ್ರತಕ್ಷö್ಯ ಮತ್ತು ಪರೋಕ್ಷö್ಯವಾಗಿ ಕೃಷಿಯ ಮೇಲೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಕೃಷಿ ಅವಲಂಬಿತ ದೇಶದ ಪ್ರತಿಶತ ೧೧.% ಆತ್ಮಹತ್ಯೆಗಳು ಮಳೆ ವೈಫಲ್ಯ,ಸರಕಾರದ ಮೂರ್ಖ ನಿರ್ಧಾರಗಳು,ಸಾಲದ ಹೊರೆಗಳು ಕಾರಣಗಳಿಂದ ಉಂಟಾದ ಮಾನಸಿಕ ಖಿನ್ನತೆ ಅವರನ್ನು ಸಾವಿನ ಕೂಪಕ್ಕೆ ತಳ್ಳುತ್ತಿವೆ

 

ಭಾರತದ ಅಷ್ಟೂ ರಾಜಕೀಯ ಪಕ್ಷಗಳು ರೈತನನ್ನು ಮೂರ್ಖನನ್ನಾಗಿಸುವ ಪೈಪೋಟಿಗೆ ಬಿದ್ದು,ಚುನಾವಣೆ ಸಂದರ್ಭದಲ್ಲಿ ಸಾಲ ಮನ್ನಾ ಅಸ್ತçವನ್ನು ಪ್ರಯೋಗಿಸುತ್ತವೆ.ಒಬ್ಬವನು ತಾನು ಪ್ರಮಾಣ ವಚನ ಸ್ವಿÃಕರಿಸಿದ ಇಪ್ಪತ್ತು ನಾಲ್ಕು ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೆÃನೆ ಎಂದರೆ ಇನ್ನೊಬ್ಬವನು ವಿಧಾನಸೌಧದ ಮೆಟ್ಟಿಲು ಇನ್ನೂ ಒಂದಡಿ ದೂರ ಇರುವಂತೆ ಸಾಲ ಮನ್ನಾ ಮಾಡುತ್ತೆÃನೆ ಎನ್ನುತ್ತಾನೆ.ಇಲ್ಲಿ ರೈತರ ಸಾಲ ಮನ್ನಾ ಆಗುತ್ತದೋ ಇಲ್ಲವೋ ಕೆಲ ಮೂರ್ಖರು ಮಾತ್ರ ಜನರನ್ನು ಮಂತ್ರದ ಆಧಾರದ ಮೇಲೆ ಖೆಡ್ಡಾಕ್ಕೆ ಕೆಡವಿ ಬಿಡುತ್ತಾರೆ.ಸರ್ಕಾರ ರಚನೆಯಾದ ಮೇಲೆ ಊಸರವಳ್ಳಿಯ ರೀತಿಯಲ್ಲಿ ಬಣ್ಣ ಬದಲಿಸಿ ಮಾತು ತಪ್ಪಿ ಬಿಡುತ್ತಾರೆ.ರೈತ ಮತ್ತದೆ ಸಾವಿನ ಮನೆಯ ಕಡೆ ಪಯಣಿಸುತ್ತಾನೆ.ಯಾಕೆ  ಯಾಮಾರುತ್ತೆÃವೆ ನಾವೆಲ್ಲಾ?ರಾಜಕಾರಣಿಗಳ ಪುಂಗಿಗೆ ತಲೆ ಅಲ್ಲಾಡಿಸುವ ಉರಗಗಳು ನಾವೇಕೆ ಆಗುತ್ತೆÃವೆ?ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ

 

ಜೈ ಜವಾನ್,ಜೈ ಕಿಸಾನ್ ಅಂತೀವಿ!ರೈತ ದೇಶದ ಬೆನ್ನೆಲುಬು ಅನ್ನುತ್ತಿÃವಿ!!ಬರೀ ಪುಂಗಿ.ರೈತರ ಬಗ್ಗೆ ಯಾವ ಸರ್ಕಾರ ಮತ್ತು ಯಾವ ರಾಜಕೀಯ ಪಕ್ಷಗಳಿಗೂ ಕಾಳಜಿ ಇಲ್ಲ.ರೈತ ಸಾಯುತ್ತಲೇ ಇದ್ದರೆ ಸಾಲ ಮನ್ನಾ ಎನ್ನುವ ಮಂತ್ರಕ್ಕೆ ಶಕ್ತಿ ಬರುತ್ತದೆ.ರೈತ ಮತ ನೀಡುತ್ತಾನೆ.ಸರ್ಕಾರಗಳು ರೈತ ಸಮಾದಿಗಳ ಮೇಲೆ ಸಾಮ್ರಾಜ್ಯ ಕಟ್ಟಿ ಮೆರೆಯುತ್ತವೆ.ಇದು ಇವತ್ತಿನ ಮಾತಲ್ಲ;ರಾಜಪ್ರಭುತ್ವದಿಂದ ಹಿಡಿದು ಪರಕೀಯರ ದಾಸ್ಯದ ಒಳಗೂ ಪಾರಂಪರಿಕವಾಗಿ ನಡೆದು ಬಂದ ಒಂದು ಹೀನ ಸಂಪ್ರದಾಯ.ಇದಕ್ಕೆ ಕೊನೆ ಎಂಬುದಿಲ್ಲ!ರೈತನಿಗೆ ವೈಭೋಗದ ಜೀವನ ಪ್ರಾಪ್ತವಾಗಲಿ ಎನ್ನುವುದು ಲೇಖನದ ಉದ್ದೆÃಶವಲ್ಲ; ಬದುಕು ರೈತನಿಗೆ ಪ್ರಾಪ್ತವಾಗುವುದೂ ಇಲ್ಲ.ಬದಲಾಗುತ್ತಿರುವ ಆದುನಿಕ ಜಗತ್ತು ನಗರೀಕರಣಕ್ಕೆ ಒತ್ತು ನೀಡುತ್ತಿದೆ.ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.ನಮ್ಮದೇ ಸ್ವತಂತ್ರ ಆಡಳಿತವಿರುವ ಪ್ರಜಾಪ್ರಭುತ್ವದಲ್ಲಿ ಮೂಲಭೂತ ಸೌಲಭ್ಯಗಳು ಹಳ್ಳಿಗಳನ್ನು ತಲುಪುತ್ತಿಲ್ಲ.ಇದರ ಪರಿಣಾಮ ಹಳ್ಳಿಗರು ನಗರದ ಕಡೆ ವಲಸೆ ಹೋಗುತ್ತಿದ್ದಾರೆ.ತುಂಬಾ ಜನರು ತಮ್ಮ ರೈತಾಪಿ ಪಾರಂಪರಿಕ ಜೀವನ ವಿಧಾನಕ್ಕೆ ತಿಲಾಂಜಿ ಇಟ್ಟು ಅವರು ಕೂಡಾ ನಗರ ಸೇರುತ್ತಿದ್ದಾರೆ.ಯಾರಿಗೆ ಬೇಕಿದೆ ಹೇಳಿ:ಸಾಲ ಬಾಧೆಯಿಂದ ನರಳುವ,ಅವಮಾನದಿಂದ ಖಿನ್ನತೆಗೆ ಒಳಗಾಗುವ,ಒಂದಿದ್ದರೆ ಇನ್ನೊಂದಿರದ ನರಕಮಯ ಜೀವನ?ಮಾಹಾ ನಗರಗಳಲ್ಲಿ ಕಟ್ಟಡ ಕಾಮಗಾರಿಯ ಕೂಲಿಗಳಾಗಿ ಬದುಕಿದರೆ ವಾರಕ್ಕೆ ನಾಲ್ಕು ಕಾಸು ಕಾಣಬಹುದು ಎನ್ನುವುದು ಅಚಿತಿಮವಾಗಿ ರೈತ ತೀರ್ಮಾನವಾಗಿದೆ.ರೈತನೇ ಇಲ್ಲವೆಂದ ಮೇಲೆ ಕೃಷಿ ಕಾರ್ಮಿಕ ಏಕಿರುತ್ತಾನೆ ಹಳ್ಳಿಯಲ್ಲಿ

 

ಬೆಂಗಳೂರಿನ ಗಲ್ಲಿಗಳಲ್ಲಿ ಕಲಬುರಗಿ,ಬೀದರ್,ಯಾದಗಿರಿ,ವಿಜಾಪುರದ ಜನ ಹರಿದ ಧೋತಿಯೊಂದಿಗೆ ಹರಿದ ಹಂಗಿಯೊಂದಿಗೆ ಕಟ್ಟಡ ಕಾಮಗಾರಿಗಳಲ್ಲಿ ನಿರತರಾಗಿರುವುದನ್ನು ನೀವು ನೋಡಬಹುದು.ಅವರು ಒಂದು ಸಮಯದ ರೈತರೆ ಆಗಿದ್ದರು.ಸುಮಾರು ಹತ್ತು ವರ್ಷಗಳಿಂದ ಭಾಗಕ್ಕೆ ಸಮರ್ಪಕವಾದ ಮಳೆಯಾಗಿಲ್ಲ.ಐದು ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ.ಕೃಷ್ಣಾ ಎಡ-ಬಲ ಮೇಲ್ದಂಡೆ ಯೋಜನೆ ಅಸ್ತಿತ್ವದಲ್ಲಿದೆ.ಅದು ಶತ ಶತಮಾನಗಳಲ್ಲೂ ಮುಗಿಯದ ಕಾಮಗಾರಿ!ಐದು ನದಿ ಎರಡು ಆಣೆಕಟ್ಟೆಗಳಿದ್ದೂ ಭಾಗದ ರೈತರಿಗೆ ನೀರಾವರಿ ಸೌಲಭ್ಯವನ್ನು ಸಮರ್ಪಕವಾದ ರೀತಿಯಲ್ಲಿ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ.ಬಜೆಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಹಣ ಅಚಿತಿಮಾಗಿ ಯಾರ ಜೇಬು ಸೇರುತ್ತದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ ಏನೂ ಅಲ್ಲ.ಇದು ಕೇವಲ ರಾಜಕಾರಣಿಗಳ ದುರಾಸೆಯ ಪ್ರತಿಫಲ.ನೆನಪಿರಲಿ: ಬೆಂಗಳೂರು ಸೇರಿದಂತೆ ಮಹಾ ನಗರಗಳಿಗೆ ವಲಸೆ ಹೋಗುವ ಕೃಷಿ ಕಾರ್ಮಿಕರು ಮತ್ತು ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಮಕ್ಕಳೂ ಕಟ್ಟಡಗಳಿಗೆ ಇಟ್ಟಿಗೆ ಹೊರುತ್ತಿದ್ದಾರೆ.ಇದೊಂದು ಭಯಾನಕ ಸಮಸ್ಯೆ

 

ಮಾಹಾತ್ಮಾ ಗಾಂಧಿ ರಾಷ್ಟಿçà ಉದ್ಯೊà ಖಾತ್ರಿ ಎನ್ನುವುದೊಂದು ಯೋಜನೆ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಜಾರಿಗೆ ತಂದಿವೆ.ಅದರ ಹೆಸರಿನಲ್ಲಿ ಕಾಗದದಲ್ಲಿ ಕೆಲಸಗಳಾಗುತ್ತಿವೆ.ನೂರಾರು ಕೋಟಿ ರೂಪಾಯಿಗಳು ಒಂದೊಂದು ಗ್ರಾಮ ಪಂಚಾಯತಿಯಿಂದ ವಿನಿಯೋಗವಾಗುತ್ತಿದೆ. ಹಣ ಯಾರಿಗೆ ತಲುಪುತ್ತಿದೆ?ಕಳ್ಳರಿಗೆ!ಪಿಡಿಓ,ಅಧ್ಯಕ್ಷರು,ಸದಸ್ಯರು,ಮತ್ತು ಊರ ಪುಂಡ ಪೋಕರಿಗಳ ಪಾಲಾಗುತ್ತಿದೆ.ಒಬ್ಬೊಬ್ಬ ಕಳ್ಳ ನೂರಾರು ಜಾಬ್ ಕಾರ್ಡ ಮತ್ತು ಅವರ ಬ್ಯಾಂಕ್ ಪುಸ್ತಕವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಯಾವ ಕೆಲಸವನ್ನೂ ಮಾಡದೆ ಅತ್ಯಂತ ಸಿಸ್ತು ಬದ್ಧವಾದ ರೀತಿಯಲ್ಲಿ ಹಣ ಲೂಟಿ ಮಾಡಿಕೊಳ್ಳುತ್ತಾನೆ.ಪಂಚಾಯತ್ ರಾಜ್ ಇಂಜಿನಿಯರ್ ಸೇರಿದಂತೆ ಪಂಚಾಯತಿಯ ಸಿ ಗಳು ಕೂಡಾ ಕಂಡೂ ಕಾಣದಂತೆ ಸುಮ್ಮನಿರುತ್ತಾರೆ.ಇದಕ್ಕೆ ಲಕ್ಷ ಉದಾಹರಣೆಗಳನ್ನು ತೋರಿಸಬಹುದು

 

ಇವೆಲ್ಲಾ ಸಮಸ್ಯೆಗಳು ರೈತನ ಆತ್ಮಹತ್ಯೆಗೆ ಪೂರಕವಾಗಿವೆ.ಬೆಳಗಾವಿ ಜಿಲ್ಲೆಯಲ್ಲಿ ರೈತ ಹೋರಾಟ ನಿರಂತರವಾಗಿ ನಡೆಯುತ್ತಿದೆ.ಸಕ್ಕರೆ ಕಾರ್ಖಾನೆಯ ಮಾಲೀಕರು ಹಣ ಪಾವತಿಸದೆ ರೈತರನ್ನು ಗೋಳು ಹುಯ್ಕೊಳ್ಳುವಂತೆ ಮಾಡಿದ್ದಾರೆ.ವರ್ಷಾನುಗಟ್ಟಲೆ ಹಣ ಪಾವತಿಸದೇ ಹೋದರೆ ರೈತನ ಗತಿ ಏನು?ಆತನ ಕೈಸಾಲ ಖಾಸಗಿ ಸಾಲ ನೇಣು ಕುಣಿಕೆಯಾಗದೆ ಬೇರೇನು ಆದೀತು?ಉತ್ಪಾದಿಸಿ ಸಕ್ಕರೆ ಮಾರಾಟವಾಗಿಲ್ಲ  ಎನ್ನುವ ಸಬೂಬು ಮಾಲೀಕರು ಹೇಳುತ್ತಾರೆ.ನಷ್ಟದಲ್ಲಿದ್ದೆÃವೆ ಎನ್ನುವ ಮಾತನ್ನೂ ಕಾರ್ಖಾನೆಗಳ ಮಾಲೀಕರು ಹೇಳುತ್ತಾರೆ.ಆದರೆ ಒಬ್ಬೆÃ ಒಬ್ಬ ಮಾಲೀಕ ನೇಣಿಗೆ ಶರಣಾಗಿರುವುದು ಇಂದಿಗೂ ದಾಖಲಾಗಿಲ್ಲ.ಸಕ್ಕರೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ,ಬೆಲೆ ಕುಸಿದಿದೆ ಎನ್ನುವ ಸಬೂಬುಗಳ ಜೊತೆಯಲ್ಲೆÃ ರೈತನ ಅಥವಾ ಕಬ್ಬು ಬೆಳೆಗಾರ ಜೀವನವನ್ನು ನರಕವಾಗಿಸುತ್ತಿದ್ದಾರೆ.ಅಚಿತಿಮವಾಗಿ ಅದು ರೈತನ ಆತ್ಮಹತ್ಯೆಯ ಕಡೆಗೇ ಕೊಂಡೊಯುತ್ತದೆ

 

ಹಾಗಂತ ಸರ್ಕಾರಗಳು ನಿಷ್ಕಿçಯವಾಗಿವೆ ಎನ್ನುವುದು ಲೇಖನದ ಉದ್ದೆÃಶವಲ್ಲ.ಕೃಷಿ ಬಜೆಟ್ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಮತ್ತು ಕೃಷಿಯನ್ನು ಉತ್ತೆÃಜನಗೊಳಿಸುವ ಹಲವು ಯೋಜನೆಗಳು ರೈತಾಪಿ ವರ್ಗವನ್ನು ತಲುಪುತ್ತಿಲ್ಲವೆಂದು ಅರ್ಥ.ಕೃಷಿ ಸಹಾಯಕರು ರೈತರಿಗೆ ತಲುಪುತ್ತಿಲ್ಲ.ಕೃಷಿ ಅಭಿವೃದ್ಧಿ ಕಛೇರಿಗಳು ಪಾರದರ್ಶಕ ಆಡಳಿತ ನೀಡುತ್ತಿಲ್ಲ.ರೈತ ಸಂಪರ್ಕ ಕೇಂದ್ರಗಳು ದಲ್ಲಾಳಿಗಳ ಕೇಂದ್ರಗಳಾಗಿವೆ.ಕೃಷಿ ಉತ್ಪನ್ನ ಮಾರುಕಟ್ಟೆಗಳು ಕತ್ತೆ ಹೊರಳಾಡುವ ಜಾಗಗಳಾಗಿವೆ.ರೈತನನ್ನು ಅಧಿಕೃತವಾಗಿ ಸರ್ಕಾರಿ ನಿಯಮದ ಪ್ರಕಾರ ಒಬ್ಬ ದಕ್ಷ ಮಾರಾಟಗಾರನ್ನಾಗಿಸುವಲ್ಲಿ ಕೃಷಿ ಇಲಾಖೆ ಸೋತಿದೆ.ಯಾವನೋ ದಲ್ಲಾಳಿ ರೈತನ ಬೆಳೆಗೆ ಬೆಲೆ ನಿಗದಿ ಮಾಡುತ್ತಾನೆ.ಯಾವನೋ ಅನಾಮಧೇಯ ದಲ್ಲಾಳಿ ರೈತನನ್ನು ಏಮಾರಿಸುತ್ತಾನೆ.ರೈತನ ಅತಂತ್ರ ಜೀವನ ಸುಧಾರಿಸೀತೆ

 

ರೈತನ ಆತ್ಮಹತ್ಯೆಯ ಹಿನ್ನೆಲೆ ನಿಮಗೆ ಈಗ ಸ್ಪಷ್ಟವಾಗಿರಬೇಕು ಎಂದು ಅಂದುಕೊಳ್ಳುತ್ತೆÃನೆ.ಮುಂದಿನ ದಿನಗಳಲ್ಲಿ ಸರ್ಕಾರಗಳು ಸಮರ್ಪಕವಾದ ರೀತಿಯಲ್ಲಿ ರೈತರನ್ನು ತಲುಪಲಿ ಎಂದು ಬೇಡಿಕೊಳ್ಳುತ್ತೆÃನೆ

 

                                                ಲಕ್ಷ್ಮೀಕಾಂತ ನಾಯಕ 

                                      ಕೊಳ್ಳೂರು ಎಂ ತಾ//ಶಹಾಪೂರ ಜಿ//ಯಾದಗಿರಿ  585304

                                                    9845968164 

 

Google  News WhatsApp Telegram Facebook
HTML smaller font

.

.