ಅಂಗನವಾಡಿ ಚಾವಣಿ ಕುಸಿತ,ಮಕ್ಕಳು ಮಹಿಳೆಯರ ತಲೆ ಡಮಾರ್

Aug 10, 2023 - 15:11
 0  26

Google  News WhatsApp Telegram Facebook

Janaa Akrosha News Desk.

ಅಂಗನವಾಡಿಯ ಚಾವಣಿಗೆ ಹಾಕಲಾದ ಪ್ಲಾಸ್ಟರ್ ಕಿತ್ತು ಇಬ್ಬರು ಮಕ್ಕಳು ಮತ್ತು ಇಬ್ಬರು ತಾಯಂದಿರ ತಲೆ ಒಡೆದ ಘಟನೆ ವರದಿಯಾಗಿದೆ.ಮಕ್ಕಳನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ತಾಯಂದಿರ ತಲೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಯಾದ ಮರ್ಕಲ್ ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮಕ್ಕಳು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದ್ದಕ್ಕಿದ್ದಂತೆ ಕುಸಿದ ಇಂಚು ಗಾತ್ರದ ಪ್ಲಾಸ್ಟರ್ ಇಬ್ಬರು ಮಹಿಳೆಯರ ತಲೆ ಒಡೆದು ಹಾಕಿದ್ದು ಮಕ್ಕಳ ತಲೆಗೂ ತೀವ್ರವಾದ ಗಾಯ ಮಾಡಿದೆ.

"ಇದು ಹೊಸ ಕಟ್ಟಡ, ಕಳೆದ ವರ್ಷ ಈ ಕಟ್ಟಡವನ್ನು ಅಂಗನವಾಡಿ ನಡೆಸಲು ಹಸ್ತಾಂತರಿಸಲಾಗಿತ್ತು.ಇದ್ದಕ್ಕಿದ್ದಂತೆ ಕುಸಿದ ಚಾವಣಿಯ ಪ್ಲಾಸ್ಟರ್ ನಮ್ಮಲ್ಲಿ ದಿಗ್‌ಭ್ರಮೆ ಮೂಡಿಸಿದೆ. ನೂತನ ಕಟ್ಟಡ ಕಳಪೆಯಾಗಿದೆ ಎಂದು ನಮಗೆ ತಿಳಿಯುವುದಾದರೂ ಹೇಗೆ? ಸದ್ಯ ಜೀವ ಉಳಿದಿರುವುದು ನಮ್ಮ ಪುಣ್ಯ" ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ.

"ಇದು ಭೂಸೇನಾ ನಿಗಮದಿಂದ ನಿರ್ವಹಿಸಲಾದ ಕಾಮಗಾರಿ,ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಾರೆಂದು ಜಿಲ್ಲಾಡಳಿತ ಸರ್ಕಾರಿ ಸ್ವಾಮ್ಯದ ಭೂಸೇನಾ ನಿಗಮಕ್ಕೆ ಕಾಮಗಾರಿಗಳನ್ನು ವಹಿಸಿಕೊಡಲಾಗುತ್ತದೆ.ಈ ಭೂಸೇನಾ ನಿಗಮವೂ ಕಳಪೆ ಕಾಮಗಾರಿ ಮಾಡುತ್ತದೆ ಎನ್ನುವುದಾದರೆ ಯಾರನ್ನು ನಂಬಬೇಕು ಎನ್ನುವುದು ತಿಳಿಯದಾಗಿದೆ" ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥ ಮರೆಪ್ಪ ಮಕಾಶಿ.

ಘಾಸಿಗೊಂಡ ಮಕ್ಕಳು ಮತ್ತು ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಕಳಪೆ ಕಾಮಗಾರಿ ಮಾಡಿದ ಸಂಬಂಧಿಸಿದ ನಿಗಮದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

Google  News WhatsApp Telegram Facebook
HTML smaller font

.

.