ಬ್ಯೂಟಿಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ

Jul 28, 2023 - 13:31
Jul 28, 2023 - 13:35
 0  84

Google  News WhatsApp Telegram Facebook

ಬ್ಯೂಟಿಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ
ಬ್ಯೂಟಿಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ

Janaa Akrosha News Desk.

ಯಾದಗಿರಿ : ಜುಲೈ 28,  : ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ಉಚಿತ ಬ್ಯೂಟಿಪಾರ್ಲರ್ 30 ದಿನಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ದೇಶಕರು ಅವರು ತಿಳಿಸಿದ್ದಾರೆ.

 ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಯಾದಗಿರಿ ಜಿಲ್ಲೆಯ ಗ್ರಾಮೀಣ ಯುವತಿಯರು, ಉಚಿತ ಬ್ಯೂಟಿಪಾರ್ಲರ್ ತರಬೇತಿಗಾಗಿ 18 ರಿಂದ 45 ವರ್ಷ ಒಳಗಿರಬೇಕು, ನಿರುದ್ಯೋಗಿ ಯುವತಿಯರು, ಕನಿಷ್ಠ 7ನೇಯ ತರಗತಿ ವ್ಯಾಸಂಗ ಹೊಂದಿದ್ದು, ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿದ್ದು, ಗ್ರಾಮೀಣ ಪ್ರದೇಶದವರಿಗೆ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ತರಬೇತಿ ಸಮಯದಲ್ಲಿ ಉಚಿತವಾಗಿ ಊಟ, ವಸತಿ ಸೌಲಭ್ಯಗಳು ನೀಡಲಾಗುತ್ತದೆ.

ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಗ್ರಾಮೀಣ ಪ್ರದೇಶದ ಯುವತಿಯರು, ವಿದ್ಯಾರ್ಹತೆಯ ಅಂಕಪಟ್ಟಿ ಅಥವಾ ವರ್ಗಾವಣೆ, ಪತ್ರ, ಗ್ರಾಮೀಣ ಬಿ.ಪಿ.ಎಲ್ ಪಡಿತರ ಚೀಟಿ, ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ, ಇತ್ತೀಚಿನ 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿಲ್ಲಿಸಬೇಕು, ತರಬೇತಿ ಸಮಯದಲ್ಲಿ ಸಂಪೂರ್ಣ ವಿವರನ್ನು ಆರ್‌ಸೆಟಿ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ಸಮೂನೆಯಲ್ಲಿ ತುಂಬಿ ನಿರ್ದೇಶಕರು ಆರ್‌ಸೆಟಿ ಸಂಸ್ಥೆ, ಚಿತ್ತಾಪೂರ ರಸ್ತೆ ಆದರ್ಶ (ಆರ್‌ಎಮ್‌ಎಸ್‌ಎ) ಶಾಲೆಯ ಹತ್ತಿರ ಯಾದಗಿರಿಗೆ ಅರ್ಜಿಸಲ್ಲಿಸಬೇಕು. ಮೊದಲು ಬಂದ 25 ರಿಂದ 35 ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.ಆಸಕ್ತಿಯುಳ್ಳ ಗ್ರಾಮೀಣ ಪ್ರದೇಶದ ಯುವತಿಯರು ಈ ಕೂಡಲೆ ಅರ್ಜಿಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8296867139, 7019184107, 9483236840, 9880666117, 9008423316ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Google  News WhatsApp Telegram Facebook
HTML smaller font

.

.