ಶ್ರೀರಾಮ ಸೇನೆ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಸಂವಿಧಾನ ದ್ರೋಹ ಮಾಡಿದ ಉದಯನಿಧಿಯನ್ನು, ಬೆಂಬಲಿಸಿದ ಖರ್ಗೆ, ಪರಮೇಶ್ವರಗೆ ಸಂಪುಟದಿAದ ಕೈಬಿಡಿ

Sep 10, 2023 - 08:55
 0  4

Google  News WhatsApp Telegram Facebook

ಶ್ರೀರಾಮ ಸೇನೆ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ  ಸಂವಿಧಾನ ದ್ರೋಹ ಮಾಡಿದ ಉದಯನಿಧಿಯನ್ನು, ಬೆಂಬಲಿಸಿದ ಖರ್ಗೆ, ಪರಮೇಶ್ವರಗೆ ಸಂಪುಟದಿAದ ಕೈಬಿಡಿ

Janaa Akrosha News Desk.

ಶ್ರೀರಾಮ ಸೇನೆ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಸಂವಿಧಾನ ದ್ರೋಹ ಮಾಡಿದ ಉದಯನಿಧಿಯನ್ನು, ಬೆಂಬಲಿಸಿದ ಖರ್ಗೆ, ಪರಮೇಶ್ವರಗೆ ಸಂಪುಟದಿAದ ಕೈಬಿಡಿ

ಯಾದಗಿರಿ sಸೆ.೮- ಎಲ್ಲ ಜಾತಿ ಜನಾಂಗಗಳನ್ನು ಸಮಾನವಾಗಿ ಕಾಣುತ್ತೇನೆ ಎಂದು ಶಪಥ ಮಾಡಿ ಮಂತ್ರಿಗಳಾಗಿ ಒಂದು ಧರ್ಮವನ್ನು ನಿರ್ಮೂಲನೆ ಮಾಡಿ ದ್ವೇಶ ಭಾಷಣ ಮಾಡಿದ ಮತ್ತು ಅವರಿಗೆ ಬೆಂಬಲಿಸಿದ ಸಚಿವರನ್ನು ತಕ್ಷಣ ಸಂಪುಟದಿAದ ಕೈಬಿಡಬೇಕೆಂದು ಶ್ರೀರಾಮ ಸೇನಾ ರಾಷ್ಟ್ರೀಯ ಗೌರವಾಧ್ಯಕ್ಷ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕರೆ ನೀಡಿದರು.

ಶುಕ್ರವಾರ ನಗರದ ಕಸಾಪ ಭವನನಲ್ಲಿ ಜರುಗಿದ ಶ್ರೀರಾಮಸೇನೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ಸಂವಿಧಾನದ ಮೇಲೆ ಪ್ರಜಾಪ್ರಭುತ್ವ ದ ಮೇಲೆ ವಿಶ್ವಾಸವಿದ್ದರೆ ತಕ್ಷಣ ಈ ಹೇಳಿಕೆ ನೀಡಿ ಅದನ್ನು ಭಂಡತನದಿAದ ಸಮರ್ಥಿಸಿಕೊಳ್ಳುತ್ತಿರುವ ಉದಯನಿಧಿ ಸ್ಟಾಲಿನ್ ನನ್ನು ಡಿಎಂಕೆ ಮುಖ್ಯಮಂತ್ರಿ ಕೈಬಿಡಬೇಕು ಅದೇ ರೀತಿ ಉದಯನಿಧಿಯನ್ನು ಬೆಂಬಲಿಸುತ್ತಿರುವ ರಾಜ್ಯದ ಸಂವಿಧಾನ ದ್ರೋಹದ ಮಾತಾಡಿದ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ, ಮಹಾದೇವಪ್ಪ ಮುಂತಾದವರನ್ನು ಸಂಪುಟದಿAದ ಕೈಬಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸೇನೆಯನ್ನು ಸಂಘಟಿಸುವAತೆ ಸಲಹೆ ನೀಡಿದ ಅವರು, ಕರ್ನಾಟಕದಲ್ಲಿ ಪ್ರಸಕ್ತ ಭಾರತ ದೇಶದಲ್ಲಿ ಹಿಂದುಗಳಿಗೆ ಇರುವ ಸವಾಲು ಹಾಗೂ ಅದಕ್ಕೆ ತಕ್ಕ ಉತ್ತರ ಕೊಡುವದಕ್ಕೆ ಕಾರ್ಯಕರ್ತರು ಸಿದ್ಧರಾಗಲು ನಮ್ಮ ಅಕ್ಕಪಕ್ಕದಲ್ಲಿಯೇ ದೇಶದ್ರೋಹಿ, ಧರ್ಮದ್ರೋಹಿಗಳು ಇದ್ದು ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು.

ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯದ ಹಿಂದೂಗಳ ದಯನೀಯ ಸ್ಥಿತಿ ವಿವರಿಸಿ ನಾವು ಜಾಗ್ರತರಾಗದಿದ್ದರೆ ಅದೇ ಸ್ಥಿತಿ ನಮಗೂ ಬರಲಿದೆ ಎಂದರು.

ಒAದು ಕಾಲಕ್ಕೆ ಭಾರತ ದೇಶವು ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ, ಮಲೇಶಿಯಾ ವನ್ನು ಒಳಗೊಂಡು ಅಖಂಡ ಖಂಡವಾಗಿತ್ತು. ಆದರೆ ಹಿಂದುಗಳು ಸೌಮ್ಯವಾಗಿ ಧರ್ಮದ ಮಾರ್ಗದಲ್ಲಿ ಸಾಗಿದ್ದರಿಂದ ಮತ್ತು ಶೀಕೃಷ್ಣನ ಉಪದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋಗಿದ್ದರಿಂದ ಇಂದು ಬರಿ ಭಾರತ ದೇಶವಾಗಿ ಉಳಿದಿದೆ ಇದಲ್ಲದೇ ಭಾರತದಲ್ಲಿಯೇ ಇಂದು ೧೦೨ ಜಿಲ್ಲೆ, ೦೮ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತ ಆಗಿರುವುದು ಅತ್ಯಂತ ಕಳವಳಕಾರಿ ಎಂದರು.

ಇಷ್ಟಾದರೂ ಎಚ್ಚೆತ್ತುಕೊಳ್ಳದಿದ್ದರೆ ಈಗಾಗಲೇ ಶೇ. ೬೦ ರಷ್ಟು ಹಿಂದುಗಳು ಅನ್ಯ ಕೋಮಿನವರಾಗಿ ಮತಾಂತರ ಹೊಂದಿದ್ದಾರೆ ಇನ್ನಾದರೂ ಎಚ್ಚೆತ್ತು ಜಾಗೃತರಾಗದಿದ್ದಲ್ಲಿ ೬೦ ರ ಭೂ ಭಾಗದಲ್ಲಿಯೂ ಇನ್ನಷ್ಟು ಜನ ಮತಾಂತರವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ವಿಜಯ ಪಾಟೀಲ್ ಜಿಲ್ಲೆಯಲ್ಲಿ ಶ್ರೀರಾಮ ಸೇನಾ ಬಲಗೊಳಿಸಲು ಹಲವಾರು ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.

ಶ್ರೀರಾಮ ಸೇನಾ ನೂತನ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಪದಾಧಿಕಾರಿಗಳಾಗಿ ಶಶಾಂಕ ನಾಯಕ (ಅಧ್ಯಕ್ಷ), ಅಂಬರೇಷ ತಡಿಬಿಡಿ (ಉಪಾದ್ಯಕ್ಷ), ಸಂದೀಪ ಮಹೇಂದ್ರಕರ್ (ಪ್ರಧಾನ ಕಾರ್ಯದರ್ಶಿ)  ಯುವ ಘಟಕಕ್ಕೆ ರಘುರಾಮ್ (ಅಧ್ಯಕ್ಷ) ನಗರ ಘಟಕಕ್ಕೆ ಹಣಮಂತ್ರಾಯ ಪಾಟೀಲ್ (ಅಧ್ಯಕ್ಷ), ಸಭೆಯಲ್ಲಿ ಶಹಾಪೂರ ತಾಲ್ಲೂಕು ಅದ್ಯಕ್ಷರಾಗಿ ಶಿವಕುಮಾರ ಶಿರವಾಳ, ಇವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. 

Google  News WhatsApp Telegram Facebook
HTML smaller font

.

.