ಬದ್ದೇಪಲ್ಲಿ : ವೈಭವದರಥೋತ್ಸವಕ್ಕೆಅದ್ಧೂರಿ ಚಾಲನೆ

Nov 20, 2023 - 17:31
 0  20

Google  News WhatsApp Telegram Facebook

ಬದ್ದೇಪಲ್ಲಿ : ವೈಭವದರಥೋತ್ಸವಕ್ಕೆಅದ್ಧೂರಿ ಚಾಲನೆ

Janaa Akrosha News Desk.

ಸಮೀಪದ ಬದ್ದೇಪಲ್ಲಿಗ್ರಾಮದಲ್ಲಿಆಂಜನೇಯ ಸ್ವಾಮಿಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮುಂಜಾನೆರಥೋತ್ಸವವುಅದ್ಧೂರಿಯಾಗಿ ಸಾಗಿತು.
ಅಂದು ಮುಂಜಾನೆ ಕುಂಬವನ್ನು ಹೊತ್ತುತಂದ ಭಕ್ತರುರಥಕ್ಕೆ ನೈವೆಧ್ಯೆ ಸಮರ್ಪಿಸಿ ಪೂಜೆ ಸಲ್ಲಿಸಿದರು.ಮಂದಿರದಿAದ ಪತಿದೇವರನ್ನು ಪಲ್ಲಕ್ಕಿಯಲ್ಲಿತಂದುರಥದ ಸುತ್ತಲೂ ಪ್ರದಕ್ಷಣೆ ಹಾಕಿದರು.ನಂತರ ಪತಿದೇವರನ್ನುರಥದಲ್ಲಿಟ್ಟು ವೈಭವದರಥೋತ್ಸವಕ್ಕೆಅದ್ದೂರಿಯಾಗಿ ಚಾಲನೆ ನೀಡಲಾಯಿತು.ರಥದ ಹಗ್ಗವನ್ನಿಡಿದ ಭಕ್ತರುಜೈ ಘೋಷಗಳನ್ನು ಮೊಳಗಿಸಿ ಎಳೆದರು. ಆಂಜನೇಯದೇವಸ್ಥಾನದಿAದ ಹೊರಟರಥೋತ್ಸವವವುದೇವರ ಪಾದಗಟ್ಟೆಯನ್ನುತಲುಪಿತುಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಹಿಂತಿರುಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.ಪತಿದೇವರನ್ನು ಪಲ್ಲಕ್ಕಿಯ ಮೂಲಕ ಪುನಃ ಮಂದಿರದೊಪಳಗೆ ಕೊಂಡೊಯ್ಯಲಾಯಿತು.ಯುವ ಸಮೂಹವು ರಥೋತ್ಸವಯುದ್ಧಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಬಾಜ ಭಜಂತ್ರಿಯಜತೆಗೆ ಡೊಳ್ಳು ಕುಣಿತಕಣ್ಮನ ಸೆಳೆಯಿತು.ಮಹಿಳೆಯರು ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.
ರಥವನ್ನು ಪುಷ್ಪ ಮಾಲೆಗಳಿಂದ ಸಿಂಗರಿಸಲಾಗಿತ್ತು.ಜಾತೆಯ ನಿಮಿತ್ತ ಮಂದಿರ ಹಾಗೂ ಆಕರ್ಷಕ ಏಕಶಿಲಾ ಕಂಬ (ಹಾಲಗಂಬ)ಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವೈಭವದರಥೋತ್ಸವಕ್ಕೆ ನೆರೆಯ ಬಾಲಚೇಡ, ದದ್ದಲ್, ರಾಂಪೂರ, ಸೈದಾಪುರ, ದುಪ್ಪಲ್ಲಿಅಜಲಾಪುರ,  ಕಡೇಚೂರ, ನೀಲಹಳ್ಳಿ, ಕಣೇಕಲ್, ಮಾಧ್ವಾರ, ಸಣ್ಣ ಸಂಬರ, ವಂಕಸAಬರ, ಚೇಲೇರಿ, ಇಡ್ಲೂರು, ತೋರಣತಿಪ್ಪ, ಯಲ್ಸತ್ತಿಗ್ರಾಮಸ್ಥರು ಸೇರಿದಂತೆ ಪಕ್ಕದತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟç, ಗುಜರಾತ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ದೇವರದರ್ಶನ ಪಡೆದು ಪುನಿತರಾದರು.

Google  News WhatsApp Telegram Facebook
HTML smaller font

.

.