ಬಸವ ಧರ್ಮ ಪೀಠ ಸಂಪೂರ್ಣವಾಗಿ ಸಜ್ಜು

Oct 11, 2023 - 19:30
 0  25

Google  News WhatsApp Telegram Facebook

ಬಸವ ಧರ್ಮ ಪೀಠ ಸಂಪೂರ್ಣವಾಗಿ ಸಜ್ಜು

Janaa Akrosha News Desk.

ಹುಮನಾಬಾದ: ಮನುಕುಲದ ಉದ್ಧಾರಕ ಅಣ್ಣ ಬಸವಣ್ಣನವರು ಮೆಟ್ಟಿದ ಧರೆ ಪಾವನ ಭೂಮಿ ಬಸವಕಲ್ಯಾಣದ ಬಸವ ಪೀಠದ ಮಹಾಮನೆಯ ಆವರಣದಲ್ಲಿ 22ನೇ ಕಲ್ಯಾಣ ಪರ್ವ ಕಾರ್ಯಕ್ರಮ ಆಚರಣೆಗೆ ಬಸವ ಧರ್ಮ ಪೀಠ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಬಸವಕುಮಾರ ಸ್ವಾಮಿಜಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು ಪೂಜ್ಯ ಗಂಗಾ ಮಾತಾಜಿಯವರ ಅಧ್ಯಕ್ಷತೆಯಲ್ಲಿ  ಹಾಗೂ ಪರಮ ಪೂಜ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳವರ
ನೇತೃತ್ವದಲ್ಲಿ ಇದೆ ತಿಂಗಳು 28,29,30ರ ಈ ಮೂರು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧವಾಗಿ, ಅರ್ಥಪೂರ್ಣವಾಗಿ ಕಾರ್ಯಕ್ರಮವು
ಸಾಗಲಿದೆ ಎಂದರು. 
ಪರಮ ಪೂಜ್ಯ ಅನಿಮಿಷಾನಂದ ಸ್ವಾಮಿಜಿಗಳು ಮಾತನಾಡಿ ಕಲ್ಯಾಣ ಪರ್ವಕ್ಕೆ ಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ಮೊದಲಾದ ರಾಜ್ಯಗಳಿಂದ ಸಾವಿರಾರು ಶರಣ ಬಂಧುಗಳು ಭಾಗವಹಿಸಲಿದ್ದಾರೆ. ವರ್ಷಕ್ಕೆ ಒಮ್ಮೆಯಾದರೂ ಕಲ್ಯಾಣ ಪರ್ವಕ್ಕೆ ಬಂದು ಧನ್ಯರಾಗಬೇಕು. ಅಂದಾಗಲೇ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದರು. 
ಪರಮ ಪೂಜ್ಯ ಬಸವಪ್ರಕಾಶ ಸ್ವಾಮಿಜಿ ಮಾತನಾಡಿ  ಮೂರು ದಿವಸಗಳ ಕಾಲ ಯೋಗ , ಇಷ್ಟಲಿಂಗ ಪೂಜೆ, ಪ್ರಾರ್ಥನೆ,ಶರಣ ಸ್ಮರಣೆ, ಧರ್ಮಚಿಂತನೆ,ವಿಚಾರಗೋಷ್ಟಿ, ವಚನ ಸಂಗೀತ, ವಚನ ನೃತ್ಯ ,ಪೀಠಾರೋಹಣ,ಪಥ ಸಂಚಲನ, ಪ್ರಶಸ್ತಿ ಪ್ರದಾನ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನೆರವೇರಲಿವೆ ಎಂದರು.
---
ಈ ಪವಿತ್ರ ಕಲ್ಯಾಣ ಪರ್ವ  ಸಮಾವೇಶಕ್ಕೆ ಜಾತಿ,ಮತ ಪಂಥಗಳ ಭೇದವಿಲ್ಲದೆ, ಸರ್ವರಿಗೂ ಆದರದ ಸ್ವಾಗತವಿದೆ.ಬಸವಾಭಿಮಾನಿಗಳ ದೇಹದಲ್ಲಿ ಜೀವ ಇರುವವರೆಗೂ ಒಮ್ಮೆಯಾದರೂ ಕಲ್ಯಾಣ ಪರ್ವದಲ್ಲಿ ಭಾಗಿಯಾಗಿ ಪಾವನರಾಗಬೇಕು. 
 - ಸಂಗಮೇಶ ಎನ್ ಜವಾದಿ.
ಸಾಹಿತಿ,ಪತ್ರಕರ್ತರು, ಪರಿಸರ ಸಂರಕ್ಷಕರು.
Google  News WhatsApp Telegram Facebook
HTML smaller font

.

.