ಆರೋಗ್ಯದ ಅರಿವು ಕುರಿತು ಶಿಬಿರ ಕಾರ್ಯಕ್ರಮ

Jul 27, 2023 - 20:13
 0  46

Google  News WhatsApp Telegram Facebook

ಆರೋಗ್ಯದ ಅರಿವು ಕುರಿತು ಶಿಬಿರ ಕಾರ್ಯಕ್ರಮ
ಆರೋಗ್ಯದ ಅರಿವು ಕುರಿತು ಶಿಬಿರ ಕಾರ್ಯಕ್ರಮ

Janaa Akrosha News Desk.

ಯಾದಗಿರಿ : ಜುಲೈ 27,  : ಯಾದಗಿರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುನಲ್ಲಿ ರೆಡ್ ಕ್ರಾಸ್ ಘಟಕ ಹಾಗೂ ಜಿಲ್ಲಾ ಆಯುಷ್ ಇಲಾಖೆಯ, ಸಹಯೋಗದಲ್ಲಿ ಒಂದು ದಿನದ ಆರೋಗ್ಯದ ಅರಿವು ಹಾಗೂ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು ಎಂದು ಯಾದಗಿರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಅವರು ತಿಳಿಸಿದ್ದಾರೆ.

     ಯಾದಗಿರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುನಲ್ಲಿ ಆರೋಗ್ಯ ಅರಿವು ಕುರಿತು ಶಿಬಿರದವನ್ನು ಡಾ.ದೀಪಿಕಾ ರಾಥೋಡ್, ಡಾ.ಸುನಂದ ಕುದುರಿ, ಡಾ.ಸರ್ವೋದಯ ಶಿವಪುತ್ರ ಡಾ.ಹರೀಶ್, ಡಾ.ಶ್ರೀನಿವಾಸ್ ದೊಡ್ಡಮನಿ, ಮಹೇಶ ರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.  

     ಹತ್ತಿಕುಣಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಸುನಂದ ಕುದುರಿ ಅವರು ಪ್ರತಿಯೊಬ್ಬ ಮನುಷ್ಯನು ಪ್ರಾಣಾಯಾಮ, ಯೋಗ, ದೈಹಿಕ ಚಟುವಟಿಕೆಯಿಂದ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ನುಡಿದರು.

     ನಾಯ್ಕಲ್ ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ದೀಪಾ ರಾಠೋಡ ಹೆಣ್ಣು ಮಕ್ಕಳ ದೇಹದ ಬೆಳವಣಿಗೆ ಹಾಗೂ ವಯಸ್ಸಿಗೆ ತಕ್ಕಂತೆ ಅವರ ದೇಹದಲ್ಲಿ ಆಗುವ ಬದಲಾವಣೆಗಳ ಕುರಿತು ಅವರು ಮಾತನಾಡಿದ, ಕಾಣಿಸಿಕೊಳ್ಳುತ್ತಿರುವ ಡಿಸ್ ಮೆನೋಲಿಯ (ಹೊಟ್ಟೆ ನೋವು)ಗಳಿಗೆ ಮನೆಯಲ್ಲಿಯೇ ದಾಲ್ಚಿನ್ನಿ ಚಕ್ಕೆಯ ಕಷಾಯ ಕುಡಿಯಲು ತಿಳಿಸಿದರು. ಹಾಗೂ ಮನೆಯಲ್ಲಿರುವ ಜೀರಿಗೆಯನ್ನು ಪುಡಿ ಮಾಡಿ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಹಲವು ರೀತಿಯ ಉಪಯೋಗಗಳಾಗುತ್ತವೆ ಎಂದು ತಿಳಿಸಿದರು.

 

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಸರ್ವೋದಯ ಶಿವಪುತ್ರ ಅವರು ನಮ್ಮ ಕಾಲೇಜಿನ ಹೆಣ್ಣು ಮಕ್ಕಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅದಕ್ಕಾಗಿ ಆರೋಗ್ಯದ ಅರಿವು ಬಹಳ ಪ್ರಾಮುಖ್ಯತೆ ಇದೆ. ಹಾಗಾಗಿ ಈ ಶಿಬಿರದಿಂದ ವಿದ್ಯಾರ್ಥಿನಿಯರಿಗೆ ಉತ್ತಮ ಆರೋಗ್ಯ ಲಭಿಸುವಂತಾಗಲಿ ಎಂದು ನುಡಿದರು.

     ಆರೋಗ್ಯದ ಅರಿವು ಕುರಿತು ಶಿಬಿರ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ ಮಾಡಿ ಕೆಲವೊಂದು ಸಂಬAಧ ಪಟ್ಟ ಔಷಧಿಗಳನ್ನು ವಿದ್ಯಾರ್ಥಿನಿಯರಿಗೆ ಈ ಶಿಬಿರದಿಂದ ಕೊಡಲಾಯಿತು.

     ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಶ್ರೀನಿವಾಸ್ ದೊಡ್ಡಮನಿ, ರೆಡ್ ಕ್ರಾಸ್ ಸಂಯೋಜಕರು, ಕಾಲೇಜಿನ ಪ್ರಾಧ್ಯಾಪಕರು, ಹಾಗೂ ಆಯುಷ್ ಇಲಾಖೆಯ ಮಹೇಶ್ ರೆಡ್ಡಿ ಹಾಗೂ ಇನ್ನಿತರ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.