ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ” ಕಾನೂನು ಅರಿವು-ನೆರವು ಕಾರ್ಯಕ್ರಮ

Nov 1, 2023 - 11:31
 0  11

Google  News WhatsApp Telegram Facebook

ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ” ಕಾನೂನು ಅರಿವು-ನೆರವು ಕಾರ್ಯಕ್ರಮ

Janaa Akrosha News Desk.

ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ” ಕಾನೂನು ಅರಿವು-ನೆರವು ಕಾರ್ಯಕ್ರಮ

ಯಾದಗಿರಿ : ಅಕ್ಟೋಬರ್ 31, (ಕ.ವಾ) : ವಿದ್ಯಾರ್ಥಿಗಳ ಜಾತಾ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಮಾನ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಹಾಗೂ ಯಾದಗಿರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಶ್ರೀ.ಬಿ ಜಯಂತ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

     ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ  ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಯಾದಗಿರಿ ಇವರುಗಳ ಸಹಯೋಗದೊಂದಿಗೆ ಇಂದು 2023ರ ಅಕ್ಟೋಬರ್ 31ರ ಮಂಗಳವಾರ ರಂದು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಬಾಲಕರ ಯಾದಗಿರಿಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ-2023 ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

     ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ಮುಕ್ತ ಕರ್ನಾಟಕದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು ಹಾಗೂ ಇಂದಿನ ದಿನದ ವಿಶೇಷಗಳಲ್ಲಿ ಒಂದಾದ ಗೌರವಾನ್ವಿತ ಭಾರತ ಸ್ವತಂತ್ರö್ಯ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸರರ್ದಾರ ವಲ್ಲಭಬಾಯಿ ಪಟೇಲರ ಜಯಂತಿಯ ಅಂಗವಾಗಿ ರಾಷ್ಟಿçÃಯ ಏಕತ ದಿನವನ್ನು ಆಚರಿಸಿ ವಿದ್ಯಾರ್ಥಿಗಳಿಗೆ ರಾಷ್ಟಿçÃಯ ಏಕತೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಗೌರವ ಸರ್ಮಪಣೆ ಮಾಡಲಾಯಿತು.

     ವಿದ್ಯಾರ್ಥಿಗಳಿಗೆ ಸತ್ಯ ಹಾಗೂ ಸುಳ್ಳು ಹೇಳುವುದರಲ್ಲಿ ಯಾವುದು ಸರಳ ಎಂಬ ಬಗ್ಗೆ, ಲೋಟದಲ್ಲಿ ಇರುವ ನೀರಿನ ಬಗ್ಗೆ ಮಕ್ಕಳ ಅಭಿಪ್ರಾಯದ ಬಗ್ಗೆ ವಿಶೇಷವಾಗಿ ಮಕ್ಕಳಿಗೆ “ಸತ್ಯಕಾಮ”ನ ಬಗ್ಗೆ ನೀತಿ ಪಾಠವನ್ನು ಮಕ್ಕಳಿಗೆ ಒಬ್ಬ ಗುರುವಾಗಿ ತಿಳಿಸಿದರು, ಮಕ್ಕಳಲ್ಲಿ ಇರುವ ವಿಭಿನ್ನ ಕಲೆಗಳನ್ನು ಉತ್ತಮ ಪಡಿಸಿಕೊಳ್ಳವಂತೆ ಮಕ್ಕಳು ಬಾಲ್ಯ ವಿವಾಹದ ಪರಿಣಾಮಗಳನ್ನು ಮಕ್ಕಳಿಗೆ ತಿಳಿಹೇಳಿದರು. ಮಕ್ಕಳಿಗೆ ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುವಂತೆ ತಿಳಿಸಿ ಮಕ್ಕಳು ಮಾನಸಿಕ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವ ಬಗ್ಗೆ ಕುತೂಹಲಕಾರಿ ಚಟುವಟಿಕೆಯನ್ನು ಮಾಡಿಸಿದರು. ಮಕ್ಕಳಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕವನ್ನು ದಿನ ಪತ್ರಿಕೆಗಳನ್ನು ಉತ್ತಮ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿ ಕೊಳ್ಳುವಂತೆ, ರಸ್ತೆ ಸುರಕ್ಷತೆಯ ಬಗ್ಗೆ ಹೆಲ್ಮೇಟ್ ಉಪಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಾಲನಾ ಪರವಾನಗಿಯ ಬಗ್ಗೆ ಇನ್ನೂ ಹತ್ತಾರು ಮಹತ್ವದ ಅಂಶಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಪಡಿಸಿದರು.

     ಕಾರ್ಯಕ್ರಮದ ಕುರಿತಾಗಿ ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಎಲ್.ಹೊನೋಲೆ, ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
 
     ಕಾರ್ಯಕ್ರಮವನ್ನು ಯೋಜನಾ ನಿರ್ದೇಶಕರು ಶ್ರೀ ರಿಯಾಜಪಟೇಲ್ ಸ್ವಾಗತಿಸಿದರು. ಶ್ರೀ ರುಧ್ರಸ್ವಾಮಿ ಚಿಕ್ಕ ಮಠ ಅವರು ವಂದನಾರ್ಪಣೆ ಮಾಡಿದರು.

     ವೇದಿಕೆ ಕಾರ್ಯಕ್ರಮ ಮುಗಿಸಿದ ನಂತರ ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ ಯಾದಗಿರಿ ಅವರು ಬಾಲ್ಯ ವಿವಾಹ ನಿಷೇಧ ಹಾಗೂ ಬಾಲ ಕಾರ್ಮಿಕ ನಿಷೇಧದ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. 

Google  News WhatsApp Telegram Facebook
HTML smaller font

.

.