ಜಗದೀಶ್ ಶೆಟ್ಟರ್ ರವರನ್ನು ಸಚಿವರಾಗಿ ಮಾಡಲು ಹಕ್ಕೊತ್ತಾಯ

Jul 9, 2023 - 07:24
 0  34

Google  News WhatsApp Telegram Facebook

ಜಗದೀಶ್ ಶೆಟ್ಟರ್ ರವರನ್ನು ಸಚಿವರಾಗಿ ಮಾಡಲು ಹಕ್ಕೊತ್ತಾಯ

Janaa Akrosha News Desk.

ಬೀದರ್‌/ಚಿಟಗುಪ್ಪ : ಸರ್ವ ಜನಾಂಗದ ಹೆಮ್ಮೆಯ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರನ್ನು ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರ ಸಂಪುಟದಲ್ಲಿ ಸಂಪುಟ/ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ನೇಮಿಸಬೇಕೆಂದು ಸಾಹಿತಿ, ಪತ್ರಕರ್ತರು, ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ಯವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅವರು ಈ ಸಂಬಂಧ ಕಾಂಗ್ರೆಸ್ ಹೈಕಮಾಂಡನವರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಅನೇಕ ಜನಪರ ಕಾರ್ಯ ಯೋಜನೆಗಳನ್ನು ಜಾರಿಗೆ ತಂದು ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದಾರೆ ಮತ್ತು ಇನ್ನು ನಿರಂತರವಾಗಿ ದುಡಿಯುತ್ತಿದ್ದಾರೆ. ಸರ್ವ ಜನಾಂಗದ ಒಳಿತಿಗಾಗಿ ನ್ಯಾಯ ನೀತಿ ಹಾಗೂ ಶ್ರದ್ಧಾ ಮನೋಭಾವನೆಯಿಂದ ಕೆಲಸ ಮಾಡಿದ್ದಾರೆ. ಪ್ರಾಮಾಣಿಕತೆ ಎಂದರೆ ಜಗದೀಶ್ ಶೆಟ್ಟರ್, ಜಗದೀಶ್ ಶೆಟ್ಟರ್ ಎಂದರೆ ಪ್ರಾಮಾಣಿಕತೆ ಎನ್ನುವ ಮಾತು ಎಷ್ಟು ಸತ್ಯವೋ ಆ  ಸತ್ಯದ ಹಾದಿಯಲ್ಲಿ ಸಾಗುವ ಕೆಲಸ ಮಾಡಿ ಜನಸಾಮಾನ್ಯರ ಬವಣೆಗಳಿಗೆ ಸ್ಪಂದಿಸಿ, ಜನ್ನಮನಣೆ ಗಳಿಸಿದ್ದಾರೆ.  ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನ ಸಮುದಾಯದವರ ಅಭಿವೃದ್ಧಿಗೆ 
ಕಂಕಣಬದ್ಧವಾಗಿ ಅಷ್ಟೇ ರೀತಿಯಿಂದ ಟೊಂಕಕಟ್ಟಿ ಶ್ರಮಿಸುತ್ತಿರುವ ಇಂದಿನ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆಗಳು ಸಲ್ಲುತ್ತವೆ. ಐದು ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನಾರ್ಹ ಕೆಲಸ. ಸರಕಾರದ ಜೊತೆಯಲ್ಲಿದ್ದು ಜನಪರ ಕೆಲಸಗಳಿಗೆ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದ ಮೂಲೆ ಮೂಲೆಗಳಲ್ಲಿ ತಿರುಗಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಜಗದೀಶ್ ಶೆಟ್ಟರ್ ರವರ ಪಾತ್ರ ಮಹತ್ವದ್ದಾಗಿತ್ತು. ಇವರಿಗೆ ಸಚಿವರಾಗಿ ಮಾಡಿದರೆ ಜನಸಾಮಾನ್ಯರ ಕೆಲಸಗಳು ಇನ್ನಷ್ಟು ಸರಾಗವಾಗಿ ಆಗುತ್ತವೆ ಎಂದು ಸಂಗಮೇಶ ಎನ್ ಜವಾದಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖಂಡರಾದ ರವಿ ಲಿಂಗಣ್ಣಿ, ಶೌರ್ಯ ಜವಾದಿ, ಶ್ರಾವ್ಯ ಜವಾದಿ, ಸರ್ವೇಶ ಗುಡ್ಡಾ, ಬಸವರಾಜ ಮಂಕಲ್, ಆದಿತ್ಯ ಲಾತೊರೆ, ರಮೇಶ ಸದಲಾಪೂರೆ, ಅರವಿಂದ ಕಲಬುರ್ಗಿ, ಲೋಕೇಶ್ ಕೋರಿ, ಬಸವರಾಜ ರಾಚಾ, ಸಲೀಂ ಖುರೇಷಿ, ಮೈನೊದ್ದೀನ್ ಬಾಬಾ, ಮಸ್ತಾನ ಅಲಿ, ನರೇಶ , ಸಂಗಶೇಟ್ಟಿ ವೀರಶೆಟ್ಟಿ ಸೇರಿದಂತೆ ಇನ್ನಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.
Google  News WhatsApp Telegram Facebook
HTML smaller font

.

.