ಭೀಮಾತೀರದಲ್ಲಿ ಕಂಟ್ರಿ ಪಿಸ್ತುಲ್ ಹಾಗೂ ಜಿವಂತ ಗುಂಡು ಜಪ್ತಿ

Aug 16, 2023 - 14:32
 0  373

Google  News WhatsApp Telegram Facebook

ಭೀಮಾತೀರದಲ್ಲಿ  ಕಂಟ್ರಿ ಪಿಸ್ತುಲ್ ಹಾಗೂ ಜಿವಂತ ಗುಂಡು ಜಪ್ತಿ

Janaa Akrosha News Desk.

ಭೀಮಾತೀರದಲ್ಲಿ ಕಂಟ್ರಿ ಪಿಸ್ತುಲ್ ಹಾಗೂ ಜಿವಂತ ಗುಂಡು ಜಪ್ತಿ

ಇಂಡಿ : ಯಾವುದೇ ಕೆಲಸಕ್ಕಾಗಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇಟ್ಟುಕೊಂಡು ಹೋಗುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಕಂಟ್ರಿ ಪಿಸ್ತೂಲ್, ಜೀವಂತ ಗುಂಡು ಜಪ್ತಿಗೈದಿದ್ದಾರೆ.

ಇಂಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಘಟನೆ ಸಂಭವಿಸಿದೆ. ಲಚ್ಯಾಣ ಗ್ರಾಮದ ಅನಿಲ ಮಲ್ಲಪ್ಪ ಬಂಡಾರಿ (35) ಬಂಧಿತ ಆರೋಪಿ. ಇನ್ನು ಇಂಡಿ ಪಟ್ಟಣದ ರೈಲ್ವೆ ನಿಲ್ದಾಣದಿಂದ ಅಹಿರಸಂಗ ಕಡೆಗೆ ಹೋಗುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಸೋಮೇಶ ಗೆಜ್ಜಿ ನೇತೃತ್ವದಲ್ಲಿ ದಾಳಿಗೈದು ಒಂದು ಕಂಟ್ರಿ ಪಿಸ್ತೂಲ್, ಎರಡು ಜೀವಂತ ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲ್ಲದೇ, ಆರೋಪಿಯ ವಿರುದ್ಧ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿಯಲ್ಲಿ ಇಂಡಿ ಗ್ರಾಮೀಣ ಪೋಲಿಸ್ ಠಾಣೆಯ ಉಸ್ತುವಾರಿ ಸಿಪಿಐ ರತನಕುಮಾರ ಜೀರಿಗ್ಯಾಳ,ಎ ಎಸ್ ಐಗಳಾದ ಎಸ್ ಎಂ ಹೊಟಗಾರ,ಎಸ್ ಎಸ್ ತಳವಾರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎಸ್ ವೈ ಜೇರಟಗಿ, ಆರ್ ಪಿ ಗಡೇದ, ಎಂ ಎಸ್ ಕುಡಿಗನೂರ, ರವಿ ಕೋಟೆ, ಪುಂಡಲೀಕ ಬಿರಾದಾರ, ಜೇಟ್ಟೆಪ್ಪ ದೊಡಮನಿ ಇದ್ದರು.

ವರದಿ : ಸಂತೋಷ ಹೊಸಮನಿ ಜಿಲ್ಲಾ ವರದಿಗಾರರು ವಿಜಯಪುರ

Google  News WhatsApp Telegram Facebook
HTML smaller font

.

.