ದೇವದುರ್ಗ ಸಂದೀಪ್ ಕಾಟನ್ ಜಿನ್ನಿಂಗ್:ರೈತರನ್ನು ವಂಚಿಸುತ್ತಿದೆಯಾ?

Jul 8, 2023 - 13:31
 0  272

Google  News WhatsApp Telegram Facebook

ದೇವದುರ್ಗ ಸಂದೀಪ್ ಕಾಟನ್ ಜಿನ್ನಿಂಗ್:ರೈತರನ್ನು ವಂಚಿಸುತ್ತಿದೆಯಾ?

Janaa Akrosha News Desk.

ರೈತನನ್ನು ದೇಶದ ಬೆನ್ನೆಲು ಎಂದು ಕರೆಯಲಾಗುತ್ತದೆ.ಈಗಲ್ಲ,ರೈತ ಎನ್ನುವ ಪದ ಹುಟ್ಟಿದ ಕಾಲದಿಂದ ಪದ ಚಾಲ್ತಿಯಲ್ಲಿರಬಹದು.ರೈತ ಜಗತ್ತಿಗೆ ಅನ್ನ ಕೊಡುವವನು ಎನ್ನುವುದು ಅನ್ನ ತಿನ್ನುವ ಎಲ್ಲರಿಗೂ ಗೊತ್ತಿದೆ.ಸಹಸ್ರ ಸಹಸ್ರ ಕೋಟಿ ಹಣ,ಟನ್ಗಟ್ಟಲೆ ಬಂಗಾರ,ಮುತ್ತು ರತ್ನ,ವಜ್ರ ವೈಡೂರ್ಯಗಳನ್ನು ಸಂಪಾದಿಸಿದರೂ ಮನುಷ್ಯ ಹಿಡಿ ಅನ್ನವನ್ನೇ ತಿನ್ನಬೇಕು,ಜೀವ ಉಳಿಸಿಕೊಳ್ಳಲು! ಕೆಲವರು ಮಾತ್ರ ಆಳಿಂಬೆ ತಿನ್ನುತ್ತಾರಂತೆ,ಅದನ್ನೂ ರೈತನೇ ಬೆಳೆಯಬೇಕು.ರೈತ ಜಗತ್ತಿಗೆ ಆಧಾರ.ಜಗತ್ತಿನ ಹಲವು ವ್ಯಾಪಾರಗಳು ಕೃಷಿ ಉತ್ಪನ್ನಗಳನ್ನು ಆಧರಿಸಿವೆ.ರೈತನಿಂದ ಜಗತ್ತು.ಹೌದು,ನೀವನ್ನಬಹುದು.ನಾವೇನು ಬಿಟ್ಟಿ ತಿನ್ನುತ್ತಿದ್ದೇವಾ ಎಂದು.ಹಣಕೊಟ್ಟರೂ ಅಕ್ಕಿ ಸಿಗದಿದ್ದರೆ ಏನನ್ನು ತಿನ್ನುತ್ತೀರಿ? ಕಾಗದದ ನೋಟುಗಳಿಗೆ ಒಗ್ಗರಣೆ ಹಾಕಲು ಬರುವುದಿಲ್ಲ.ನುಂಗಿದ ಬಂಗಾರ ಗುದದಿಂದ ಹೊರಗೆ ಬರದಿದ್ದರೆ ಶಸ್ತç ಚಿಕಿತ್ಸೆ ಮಾಡಬೇಕಾಗುತ್ತದೆ.ಜಗತ್ತಿಗೆ ಇಷ್ಟೊಂದು ಅಗತ್ಯ ಮತ್ತು ಅವಶ್ಯ ಹಾಗೂ ಮಹತ್ವವಾದ ರೈತನ ಬದುಕು ಹೇಗಿದೆ? ರೈತ ಆರ್ಥಿಕ ಭದ್ರತೆಯನ್ನು ಹೊಂದಿದ್ದಾನೆಯೇ? ಆತನ ಎಲುಬುಗಳು, ಅಂದರೆ ಬೆನ್ನಿನ ಮೂಳೆ ದೃಢವಾಗಿ ಇದೆಯೇ? ಜಗತ್ತಿಗೆ ಅನ್ನ ನೀಡುವ ಮಹತ್ವಪೂರ್ಣ ಜವಬ್ದಾರಿಯನ್ನು ಹೊತ್ತಿರುವ ರೈತ ಸುಖಿಯಾಗಿದ್ದಾನೆಯೇ? ಎಲ್ಲೋ ಒಂದು ಕಡೆ ಓದಿದ ನೆನಪು:ಜಿಲ್ಲಾಧಿಕಾರಿಗಳು ರೈತನ ಪ್ರಥಮ ದರ್ಜೆಯ ಗುಮಾಸ್ತ ಎಂದು. ಇಂತಿರುವ ರೈತನನ್ನು ಸರ್ಕಾರಗಳು, ವ್ಯಾಪಾರಿಗಳು ಅವ್ಯಾಹತವಾಗಿ ಶೋಷಿಸುತ್ತಿದ್ದಾರೆ. ರೈತನನ್ನು ಅವಲಂಬಿಸಿ ವ್ಯಾಪಾರಕ್ಕಿಳಿಯುವ ವ್ಯಕ್ತಿ ಸೂಟು ಬೂಟು ಮತ್ತು ಹವಾನಿಯಂತ್ರಿತ ಕೋಣೆಯೊಳಗೆ ಐಷರಾಮಿ ಜೀವನ ಮಾಡುತ್ತಾನೆ.ಆತನದು ವೈಭವದ ಬದುಕು.ಇದಕ್ಕೆ ಕಾರಣ ರೈತ ಎನ್ನುವ ತೃಣ ಮಾತ್ರದ ಸ್ಮರಣೆಯೂ ಆತನಿಗಿಲ್ಲ.ಆತ ಕೃಶಗೊಂಡ ರೈತನ ಬೆನ್ನ ಮೂಳೆಯ ಮೇಲೆ ಸವಾರಿ ಮಾಡುತ್ತಲೇ ಇದ್ದಾನೆ. ಆತನನ್ನು ತೂಕದಿಂದ ವಂಚಿಸುತ್ತಾನೆ, ಆತನನು ಬೆಲೆಯಿಂದ ವಂಚಿಸುತ್ತಾನೆ, ಆತನನ್ನು ಬಡ್ಡಿಯ ಮೂಲಕ ವಂಚಿಸುತ್ತಾನೆ. ಸ್ನೇಹಿತರೆ ಇದಷ್ಟೇ ಅಲ್ಲ. ಈತನನ್ನು ಅವಲಂಬಿಸಿ ಬೀಜ ಮಾರುವವನು ಕಳಪೆ ಬೀಜ ಮಾರಿ ವಂಚಿಸುತ್ತಾನೆ. ಕಳಪೆ ಗೊಬ್ಬರ ಕೊಟ್ಟು ವಂಚಿಸುತ್ತಾನೆ, ಕಳಪೆ ರಾಸಾಯಿನಕಗಳನ್ನು ಮಾರಿ ವಂಚಿಸುತ್ತಾನೆ. ಇದಷ್ಟೇ ಅಲ್ಲದೆ ಈತನ ಹೆಸರಿನ ಮೇಲೆ ಹುಟ್ಟಿಕೊಂಡಿರುವ ಸಂಘಟನೆಗಳೂ ಈತನನ್ನು ವಂಚಿಸುತ್ತವೆ. ಈತನ ಹೆಸರಿನ ಮೇಲೆ ಗೆದ್ದು ಬರುವ ರಾಜಕಾರಣಿಗಳು ಈತನನ್ನು ವಂಚಿಸುತ್ತವೆ, ಈತನ ಹೆಸರಿನ ಮೇಲೆ ಅಧಿಕಾರಕ್ಕೆ ಬರುವ ಸರ್ಕಾರ ಈತನನ್ನು ವಂಚಿಸುತ್ತವೆ. ಇದಷ್ಟೇ ಅಲ್ಲ, ಈತನನ್ನು ನಿಸರ್ಗವೂ ವಂಚಿಸುತ್ತದೆ. ಬರಬೇಕಾದ ಸಮಯಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಫಲ ಕೈಕೊಡುವ ಸಂದರ್ಭದಲ್ಲಿ ಭಯಾನಕವಾದ ಮಳೆ ಬಂದು ಬೆಳೆ ನಾಶವಾಗಿ ಹೋಗುತ್ತದೆ. ಬೆಳೆದ ಬೆಳೆಯನ್ನು ನಂಬಿಸಿ ವ್ಯಾಪಾರ ಮಾಡುವ ಅನಧಿಕೃತ ದಲ್ಲಾಳಿ ಏಮಾರಿಸಿ ವಂಚಿಸಿ ಓಡಿ ಹೋಗುತ್ತಾನೆ, ಪ್ರಕೃತಿಯೂ ಈತನನ್ನು ವಂಚಿಸುತ್ತದೆ. ಈತನ ನೆರವಿಗೆ ಬರುವವರು ಯಾರೂ ಇಲ್ಲ. ಆದರೂ-

ರೈತ ದೇಶದ ಬೆನ್ನೆಲುಬು, ರೈತ ಅನ್ನದಾತ ಎನ್ನುವ ಸುಂದರ ಪದಗಳನ್ನು ಬಳಸುತ್ತೇವೆ. ಟಿವಿ ವರದಿಗಾರರು ಬರುತ್ತಾರೆಂದು ಸುಂದರವಾಗಿ ಅಲಂಕರಿಸಿಕೊAಡು ಬಂದು ರೈತರಿಗಾಗಿ ನಾವು ಪ್ರಾಣ ಕೊಡುತ್ತೇವೆ ಎಂದು ಆವೇಶದ ಭಾಷಣ ಮಾಡುತ್ತೇವೆ. ಜೀವಮಾನದಲ್ಲಿ ನೇಗಿಲು ನೋಡದವರು ತಾವು ರೈತರು,ರೈತ ಹೋರಾಟಗಾರರು ಎನ್ನುತ್ತಾರೆ. ಒಂದೆರಡು ಪಕ್ಷಗಳು ರೈತ ಎನ್ನುವ ಪದವನ್ನು ಗುತ್ತಿಗೆ ಹಿಡಿದಿವೆ. ಸಾ¯ ಮನ್ನಾದ ಆಸೆ ತೋರಿಸಲಾಗುತ್ತದೆ.ವಿವಿಧ ಯೋಜನೆಗಳನ್ನು ಘೋಷಿಸಲಾಗುತ್ತದೆ.ರೈತರಿಗೆಂದೇ ಕೃಷಿ ಇಲಾಖೆಯನ್ನು ಸ್ಥಾಪಿಸಲಾಗಿರುತ್ತದೆ. ಸರ್ಕಾರದ ಯೋಜನೆಗಳು ಯಾವ ರೈತನಿಗೆ ತಲುಪಿವೆ ಎನ್ನುವುದು ದೇವರಿಗೇ ಗೊತ್ತು!

ಆತನೊಬ್ಬ ಸಣ್ಣ ರೈತ,ಎರಡು ಎಕರೆ ಜಮೀನು ಇರುವವನು. ಹೊಲದಲ್ಲಿ ಬೆಳೆದ ಐದು ಕ್ವಿಂಟಲ್ ಇಳುವರಿ ಬಂದ ಹತ್ತಿಯನ್ನು ತೆಗೆದುಕೊಂಡು ಮಾರಾಟಕ್ಕೆ ಬರುತ್ತಾನೆ. ದಾರಿಯಲ್ಲಿ ಮೊದಲು ಸಿಕ್ಕ ವ್ಯಾಪಾರಿಯ ವೇ ಬ್ರಿಡ್ಜ್ ತೂಕದ ಮೇಲೆ ತಾನು ತಂದ ಮಾಲಿನ ವಾಹನವನ್ನು ನಿಲ್ಲಿಸುತ್ತಾನೆ. ರೈತನ ಮಾಲು ಖರೀದಿಸಲು ತಾನೇ ಸ್ವತಃ ತೂಕದ ವ್ಯವಸ್ಥೆ ಮಾಡಿಕೊಂಡಿರಬೇಕಾದ ವ್ಯಾಪಾರಿ ತೂಕದ ಖರ್ಚುನ್ನೂ ರೈತನ ಮೇಲೆ ಹೇರುತ್ತಾನೆ. ಹಾಗೆ ವೇ ಬ್ರಿಡ್ಜ್ ಮೇಲೆ ನಿಲ್ಲಿಸಿದ ವಾಹನ ಇರುವಂತೆ ರೈತ ದರ ಕೇಳುತ್ತಾನೆ,ದರ ಗಿಟ್ಟುವುದಿಲ್ಲ.ವೇ ಬ್ರಿಡ್ಜ್ ಮಾಪನದ ರಸೀದಿ ಕೊಡಲು ವಿನಂತಿಸುತ್ತಾನೆ, ವ್ಯಾಪಾರಿ ಕೊಡುವುದಿಲ್ಲ ಎನ್ನುತ್ತಾನೆ.ರೈತ ಮೊಂಡು ಹಿಡಿದು ಪಡೆಯುತ್ತಾನೆ, ಏಕೆಂದರೆ ತೂಕ ಪುಗಸಟ್ಟೆ ಮಾಡಿರುವುದಿಲ್ಲವಲ್ಲ? ಅಲ್ಲಿಂದ ವ್ಯಾಪಾರ ಕೇಂದ್ರದಿA ಕೇವಲ ಏದುನೂರು ಅಡಿ ದೂರದಲ್ಲಿರುವ ಇನ್ನೊಂದು ಖರೀದಿ ಕೇಂದ್ರಕ್ಕೆ ಹೋಗುತ್ತಾನೆ. ಅಲ್ಲೂ ವೇಬ್ರಿಡ್ಜ್ ಮೇಲೆ ವಾಹನ ನಿಲ್ಲಿಸಿ ತೂಕ ಮಾಡಿಸುತ್ತಾನೆ,ದರ ಕೇಳತ್ತಾನೆ,ದರ ಗಿಟ್ಟುವುದಿಲ್ಲ,ತೂಕದ ರಸೀದಿ ಪಡೆಯುತ್ತಾನೆ.ಅಲ್ಲೊಂದು ಅಚ್ಚರಿ ಕಾದಿರುತ್ತದೆ ಅವನಿಗೆ.ಏನದು ಅಚ್ಚರಿ ಎನ್ನುವುದನ್ನು ಪ್ಯಾರಾದ ಕೊನೆಯಲ್ಲಿ ನೋಡೋಣ.ಮತ್ತೆ ಅಲ್ಲಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಇನ್ನೊಂದು ವ್ಯಾಪಾರ ಕೇಂದ್ರಕ್ಕೆ ಹೋಗುತ್ತಾನೆ.ಅಲ್ಲಿ ವೇಬ್ರಿಡ್ಜ್ ಮೇಲೆ ವಾಹನ ನಿಲ್ಲಿಸಿ ದರ ಕೇಳುತ್ತಾನೆ,ದರ ಗಿಟ್ಟುತ್ತದೆ.ಆತ ಅಲ್ಲಿ ಹತ್ತಿಯನ್ನು ಮಾರುತ್ತಾನೆ.ಇದನ್ನು ಇನ್ನೊಂದು ರೀತಿಯಲ್ಲಿ ಹೇಳುತ್ತೇನೆ ಕೇಳಿ, ಮೊದಲ ಖರೀದಿ ಕೇಂದ್ರದ ವೇ ಬ್ರಿಡ್ಜ್ ಮೇಲೆ ಗಾಡಿ ನಿಲ್ಲಿಸಿದಾಗ ೧೬.೭೫ ಕೆಜಿ ತೂಕ ತೋರಿಸುತ್ತದೆ. ಎರಡನೆಯ ಖರೀದಿ ಕೇಂದ್ರದ ವೇಬ್ರಿಡ್ಜ್ ಮೇಲೆ ವಾಹನ ನಿಲ್ಲಿಸಿದಾಗ ೧೬.೮೫ ಕೆಜಿ ತೋರಿಸುತ್ತದೆ. ಮೂರನೆಯ ಖರೀದಿ ಕೇಂದ್ರದ ವೇಬ್ರಿಡ್ಜ್ ೧೬.೮೫ ಕೆಜಿ ತೋರಿಸುತ್ತದೆ. ಈಗ ನಿಮಗೆ ವಿಷಯ ಅರ್ಥವಾಗಿರಬಹುದು. ಮೊದಲ ಖರೀದಿ ಕೇಂದ್ರ ಹಾಗೂ ನಂತರದ ಎರಡು ಖರೀದಿ ಕೇಂದ್ರಗಳ ತೂಕದಲ್ಲಿ ಹತ್ತು ಕೆಜಿಯ ವ್ಯತಾಸ ಬಂದಿದೆ. ಹತ್ತು ಕೆಜಿ ಎಂದರೆ ಅವತ್ತಿನ ದರ ಏಳುನೂರಾ ಐವತ್ತು ರೂಪಾಯಿಗಳು! ಬರಿ ಏಳು ನೂರಾಐವತ್ತು ರೂಪಾಯಿಗಾಗಿ ಲೇಖನವೇ ಎಂದರೆ ನೀವು ಲೇಖಕನನ್ನು ಮೂರ್ಖ ಎಂದು ದೂಷಿಸಿ,ಹಾಸ್ಯ ಮಾಡಿ.ಅದು ನಿಮ್ಮ ಮನಸ್ಥಿತಿ,ಅಭ್ಯಂತರವಿಲ್ಲ.

ಘಟನೆ ನಡೆದಿರುವುದು ದೇವದುರ್ಗದಲ್ಲಿ, ದೇವದುರ್ಗದ ಸಂದೀಪ್ ಕಾಟನ್ ಮಿಲ್ನಲ್ಲಿ. ಸಂದೀಪ್ ಕಾಟನ್ ಮಿಲ್ಲಿನಲ್ಲಿ ಐದು ಕ್ವಿಂಟಲ್ ಹತ್ತಿ ತೂಕದಲ್ಲಿ ಹತ್ತು ಕೆಜಿಯ ವ್ಯತ್ಯಾಸ ಕಂಡು ಬಂದಿದೆ.ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿ ನಿಮಗೆ ವಿವರಿಸಬೇಕು.ನೂರು ರೂಪಾಯಿ ತೂಕದ ಫೀಸ್ ಪಡೆಯಲಾಗುತ್ತದೆ. ಮಿಲ್ಲಿನಲ್ಲಿ ವ್ಯಪಾರ ಕುದುರದಿದ್ದಾಗ ಅವರು ತೂಕದ ರಸೀದಿ ಕೊಡುವುದಿಲ್ಲ.ಸಾಮಾನ್ಯ ರೈತರು ನೂರು ರೂಪಾಯಿ ತೆತ್ತು ದರ ಕುದುರದಿದ್ದಾಗ ಗುದ ಮುಚ್ಚಿಕೊಂಡು ಬೇರೆ ಕಡೆಗೆ ಹೋಗುತಾರೆ.ನೂರು ರೂಪಾಯಿ ತೆತ್ತು ರಸೀದಿ ಪಡೆಯದೆ.ಬಲವಂತ ರೈತ ಜಗಳ ಮಾಡಿದಾಗ ರಸೀದಿ ನೀಡುತ್ತಾರೆ.( ರೀತಿಯ ಸಂಘರ್ಷದ ದೃಶ್ಯಗಳು ಪತ್ರಿಕೆಯ ಹತ್ತಿರ ಲಭ್ಯ ಇವೆ). ರೈತ ಅಲ್ಲಿ ದರ ಗಿಟ್ಟದಿದ್ದಾಗ ಸಂಘರ್ಷಕ್ಕಿಳಿದು ತೂಕದ ರಸೀದಿ ಪಡೆದಿದ್ದಾನೆ. ನಂತರ ಅಲ್ಲಿಂದ ತುಸು ದೂರವಿರುವ ಮೈಲಾರಲಿಂಗೇಶ್ವರ ವೇಬ್ರಿಡ್ಜ್ಗೆ ಹೋಗಿ ತೂಕ ಮಾಡಿಸಿದ್ದಾನೆ.ಅಲ್ಲಿ ಹತ್ತು ಕೆಜಿ ತೂಕ ಹೆಚ್ಚು ಬಂದಿದೆ. ಕೆರಳಿದ ರೈತ ಸಂದೀಪ್ ಕಾಟನ್ ಜಿನ್ನಿಗೆ ಬಂದು ತಕರಾರು ಮಾಡಿದ್ದಾನೆ.ಹತ್ತು ಕೇಜಿ ಐದು ಕೆಜಿಗಳ ತೂಕದ ವ್ಯತ್ಯಾಸ ಸಹಜ,ಗಾಳಿ ಮತ್ತಿತರ ಕಾರಣಗಳಿಂದ ಹೆಚ್ಚುಕಡಿಮೆಯಾಗುತ್ತದೆ,ನಮ್ಮದು ಸರ್ಕಾರದಿಂದ ಅಧಿಕೃತ ಪರವಾನಗಿ ಪಡೆದ ವ್ಯಾಪಾರಿ ಕೇಂದ್ರ,ತಹಸೀಲದಾರರು ಮತ್ತು ಡಿಸಿಯವರು ಲೈಸೆನ್ಸ್ ನೀಡಿದ್ದಾರೆ,ನೀನು ಕೋರ್ಟಿಗೆ ಹೋಗಿ ಕೇಸು ಮಾಡು,ನಾವು ಕೇಸನ್ನು ಎದುರಿಸುತ್ತೇವೆ ಎಂದಿದ್ದಾರೆ.ಅಲ್ಲಿA ನಂತರ ರೈತ ಎಮ್ ಆರ್ ಜಿನ್ನಿಂಗ್ ಫ್ಯಾಕ್ಟರಿಗೆ ಹೋಗಿದ್ದಾನೆ.ಅಲ್ಲೂ ತೂಕ ಮಾಡಿಸಿದಾಗ ಹಿಂದೆ ಮೈಲಾರಲಿಂಗೇಶ್ವರ ವೇ ಬ್ರಿಡ್ಜ್ನ ತೂಕದ ರೀತಿಯಲ್ಲಿ ಒಂದೂ ಕೆಜಿಯೂ ಕಡಿಮೆಯಾಗದಂತೆ ಮಾಪನ ತೋರಿಸಿದೆ. ಎರಡೂ ಕಡೆ ತೂಕ ಸರಿ ಬಂದು ಕೇವಲ ಸಂದೀಪ್ ವೇ ಬ್ರಿಡ್ಜ್ನಲ್ಲಿ ಮಾತ್ರ ಹತ್ತು ಕೇಜಿಯ ಕಡಿಮೆ ತೂಕದ ವ್ಯತ್ಯಾಸ ತೋರಿಸಿದೆ. ವ್ಯತ್ಯಾಸವನ್ನು ಅದರ ಮಾಲೀಕ ಸಹಜ ಎನ್ನುವಂತೆ ಸಮರ್ಥಿಸಿಕೊಳ್ಳುತ್ತಾನೆ.ದೂರು ಸಲ್ಲಿಸಿ ಎಂದು ಧೈರ್ಯವಾಗಿ ಹೇಳುತ್ತಾನೆ.ಟನ್ನದು ಸರ್ಕಾರದ ಅಧಿಕೃತ ಖರೀದಿ ಕೇಂದ್ರ ಎಂದು ಹೇಳುತ್ತಾನೆ.ಅಂದರೆ ಸರ್ಕಾರಿ ಅಧಿಕಾರಿಗಳನ್ನು ತನ್ನೊಂದಿಗೆ ಶಾಮೀಲು ಮಾಡಿಕೊಂಡು ತೂಕದಲ್ಲಿ ಮೋಸ ಮಾಡುತ್ತಾನಾ ಎನ್ನುತ್ತಾನೆ ರೈತ.

ಇದು ನನ್ನೊಬ್ಬನ ಸಮಸ್ಯೆಯಲ್ಲ ಸರ್, ನನ್ನಂಥವರು ಸಾವಿರಾರು ಜನ ರೈತರು ಎರಡು ಮೂರು ಐದು ಹತ್ತು ಕ್ವಿಂಟಲ್ ಮಾಲನ್ನು ತಂದು ಮಾರುತ್ತಾರೆ.ಪ್ರತಿಯೊಬ್ಬರಿಗೆ ಹತ್ತು ಕೆಜಿ ಮೋಸ ಎಂದರೆ ಅದೆಷ್ಟು ಜನ ರೈತರ ರಕ್ತ ಕುಡಿದಿರಬಹುದು. ಅನ್ಯಾಯವನ್ನು ಯಾರು ತಡೆಯಬೇಕು? ಅನಕ್ಷರಸ್ಥರಾದ ಮತ್ತು ಕಾನೂನು ಕೋರ್ಟು ಗೊತ್ತಿಲ್ಲದ ನಾವು ದುಡಿಯುವುದನ್ನು ಬಿಟ್ಟು ಕೇಸು ಮಾಡುವುದು ಹೇಗೆ ಸಾಧ್ಯವಾಗುತ್ತದೆ.ಇದು ಸಾವಿರಾರು ಸಣ್ಣ ರೈತರ ಜೀವನದ ಪ್ರಶ್ನೆ.ಕಳಪೆ ಬೀಜ,ಕಳಪೆ ಗೊಬ್ಬರ,ಕಳಪೆ ರಾಸಾಯನಿಕ ಬಳಸಿ ಪಡೆದ ಅತ್ಯಲ್ಪ ಇಳುವರಿ ಇದು. ನಾವು ದುಡಿಯುವುದು ವ್ಯರ್ಥ,ಬಂದ ಇಳುವರಿ ಎಣ್ಣಿ ಗೊಬ್ಬರಕ್ಕೆ ಸರಿ ಹೋಗುತ್ತದೆ.ಗಳೆ ಮತ್ತಿತತರ ಖರ್ಚುಗಳು ಮೈಮೇಲೆ ಬೀಳುವುದಲ್ಲದೆ ಸಾಲವೂ ಮೈಮೇಲೆ ಬೀಳುತ್ತದೆ.ಬಡವರಾದ ನಾವು ದೇವರು ನೋಡಿಕೊಳ್ಳಲಿ ಎನ್ನುವುದರ ಹೊರತು ಮತ್ತೇನು ಮಾಡಲು ಸಾಧ್ಯವಿಲ್ಲ.ಏಕೆ ರೈತರಿಗೆ ರೀತಿಯ ಮೋಸ ಮಾಡುತ್ತಾರೆ ಸರ್?” ಎನ್ನುತ್ತಾನೆ ರೈತ ದಶವಂತ ಪರಸಾಪೂರು.

ರೈತನ ಅಹವಾಲು ಕೇಳಿದ ಮೇಲೆ ಪತ್ರಿಕೆಯ ವರದಿಗಾರ ಜಿನ್ನಿಂಗ್ ಫ್ಯಾಕ್ಟರಿಯ ಮಾಲೀಕನನ್ನು ಸಂಪರ್ಕಿಸುತ್ತದೆ. ಆತಐದು ಹತ್ತು ಕೆಜಿ ತೂಕದ ವ್ಯತ್ಯಾಸವಾಗುವುದು ಸಹಜ,ನಾವು ಲೈಸೆನ್ಸ್ ಪಡೆದು ವ್ಯಾಪಾರ ಮಾಡುತ್ತಿದ್ದೇವೆ.ನಮ್ಮದು ಏನೂ ತಪ್ಪಿಲ್ಲ,ನೀವು ನ್ಯಾಯಾಲಯದಲ್ಲಿ ಲೀಗಲ್ ಆಗಿ ಪ್ರೊಸೀಡ್ ಆಗಬಹುದುಎನ್ನುತ್ತಾನೆ.ಇದಾದ ಮೇಲೆ ಕಾನೂನು ಮತ್ತು ಮಾಪನಶಾಸ್ತç ಇಲಾಖೆಯ ದೇವದುರ್ಗಕ್ಕೆ ಸಂಬAಧಿಸಿದ ಅಧಿಕಾರಿ ಶಿವಪುತ್ರಪ್ಪ ಅಲ್ಲಾಪುರ ಅವರನ್ನು ಮಾತಾಡಿಸಿದಾಗ ರೀತಿ ವ್ಯತ್ಯಾಸವಾಗಲು ಸಾಧ್ಯವಿಲ್ಲ, ನಾನು ತಪಾಷಣೆಗೆ ಬರುತ್ತೇನೆಎನ್ನುವಂತಹ ಮಾತುಗಳನ್ನು ಆಡುತ್ತಾನೆ. ಇಲಾಖೆ ಭಾರತದಲ್ಲಿ ಸಕ್ರಿಯವಾಗಿರುವುದು ಯಾರಿಗೂ ಗೊತ್ತಿಲ್ಲ.ಗೊತ್ತಿದ್ದರೂ ಇವರಿಗೆ ದಂಡ ಹಾಕುವ ಅಧಿಕಾರ ಮಾತ್ರವಿದೆ.ದಿನಕ್ಕೆ ನೂರಿನ್ನೂರು ಟನ್ ವ್ಯಾಪಾರ ಮಾಡುವ ವ್ಯಾಪಾರಿ ದಂಡಕ್ಕೆ ಭಯಬೀಳುತ್ತಾನೆ ಎಂದರೆ ನಾವು ಬಾಯಿಯಿಂದಲ್ಲ ಕೆಳಗಿನಿಂದ ನಗಬೇಕಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿ ಆರು ತಿಂಗಳವರೆಗೆ ದಂಡ ಭರಿಸದಿದ್ದಾಗ ಇಲಾಖೆ ನ್ಯಾಯಾಲಯದ ಗಮನಕ್ಕೆ ತರಲಾಗುತ್ತದೆ, ವ್ಯಾಪಾರಿಯ ವಕೀಲ ಸುಲಭವಾಗಿ ಪ್ರಕರಣವನ್ನು ಕ್ವಾಶ್ ಮಾಡುತ್ತಾನೆ.ಭಯಾನಕ ಕೊಲೆಗಳು ಸಾಕ್ಷಾಧರಗಳ ಕೊರತೆಯಿಂದ ಕ್ವಾಶ್ ಆಗಿ ಕ್ರೂರ ಹಂತಕರು ಮತ್ತೆ ಸಮಾಜಕ್ಕೆ ಮಾರಣಾಂತಿಕವಾಗಿ ಕಾಡುವುದು ವ್ಯವಸ್ಥೆಯಲ್ಲಿ ಸಹಜ ಎನ್ನುವಂತಹ ವಾತಾವರಣವಿದೆ.

ನಂದು ಕೇವಲ ಹತ್ತು ಕೆಜಿ ನಷ್ಟವಾಗಿದೆ,ಇದು ನನಗೆ ಗಂಭೀರ ವಿಷಯವಲ್ಲ. ಹತ್ತು ಕೆಜಿಯಿಂದ ನಾನು ವಾಹನದ ಬಾಡಿಗೆ ಭರಿಸಬಹುದು, ಆದರೆ ಬೇರೆ ಕಡೆ ತೂಕ ಮಾಡಿಸಿದೆನಾದ ಕಾರಣ ಸಂದೀಪ್ ಕಾಟನ್ ಜಿನ್ನಿನ ತೂಕದ ಮೋಸದ ಬಗ್ಗೆ ನನಗೆ ತಿಳಿಯಿತು.ಸುದೀರ್ಘ ಕಾಲದಿಂದ ಜಿನ್ನಿಂಗ್ ಫ್ಯಾಕ್ಟರಿ ಎಷ್ಟು ಜನ ರೈತರಿಗೆ ಮೋಸ ಮಾಡಿರಬಹುದು.ನಾನು ನ್ಯಾಯಾಲಯಕ್ಕೆ ಹೋಗಲಾರೆ, ಆದರೆ ರೈತರು ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ವ್ಯಾಪಾರ ಮಾಡುವಾಗ ಜಾಗ್ರತೆಯಿಂದ ಇರಬೇಕು ಎನ್ನುವುದು ನನ್ನ ಕಾಳಜಿ,ಸಣ್ಣ ರೈತರಾದ ನಮಗೆ ನೂರು ರೂಪಾಯಿಯೂ ಬಹು ಅಮೂಲ್ಯಎನ್ನುತಾನೆ ರೈತ ದಶವಂತ ಪರಸಾಪೂರು.

ಸ್ನೇಹಿತರೆ,ಇದು ಸಂದೀಪ್ ಕಾಟನ್ ಜಿನ್ನಿಂಗಿನ ಮೇಲೆ ಮಾಡುವ ಆರೋಪದ ವರದಿಯಲ್ಲ. ವ್ಯಾಪಾರ ಮಾಡುವಾಗ ಎರಡು ಮೂರು ಕಡೆ ತೂಕ ಮಾಡಿಸಿ ಜಾಗ್ರತೆ ವಹಿಸಿ ಎಂದು ಹೇಳಲು ಬರೆದ ಲೇಖನ. ಇನ್ನೊಂದು ಗಮನಾರ್ಹ ವಿಷಯವೆಂದರೆ ಎಲೆಕ್ಟಾçನಿಕ ತೂಕದ ಯಂತ್ರಗಳಲ್ಲಿ ತಾಂತರಿಕ ಮಾರ್ಪಾಡುಗಳನ್ನು ಮಾಡಿಯೂ ವಂಚಿಸಲಾಗುತ್ತಿದೆ.ಈಗ ಹಾದಿ ಬೀದಿಯಲ್ಲಿ ಕೆಲಸಕ್ಕೆ ಬಾರದ ಜನಗಳೆಲ್ಲಾ ವ್ಯಾಪಾರವನ್ನು ಆರಂಭಿಸಿದ್ದಾರೆ. ಬಗ್ಗೆ ಪತ್ರಿಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿದಾಗಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿಯ ಮೂರು ಕಾಯ್ದೆಗಳು ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಮ್ಮ ನಿಯಂತ್ರಣವನ್ನು ತಪ್ಪಿಸಿದೆ. ನಮ್ಮ ಎಪಿಎಂಸಿ ವ್ಯಾಪ್ತಿ ಅಥವಾ ಆವರಣದಲ್ಲಿ ತಪ್ಪುಗಳು ನಡೆದಾಗ ನಾವು ಭಾಜನರು. ಎಲ್ಲಂದರಲ್ಲಿ ವ್ಯಾಪರ ಮಾಡುವುದಕ್ಕೆ ಮತ್ತು ಅಲ್ಲಿ ನಡೆಯುವ ವಂಚನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.ಅದಲ್ಲದೆ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆದಿದೆ,ಆದರೆ ರಾಜ್ಯ ಸರ್ಕಾರವಿನ್ನೂ ಹಿಂಪಡೆದಿಲ್ಲ. ಈಗ ರೈತರನ್ನು ದೇವರೇ ಕಾಪಾಡಬೇಕುಎನ್ನುವ ಅರ್ಥದ ಮಾಹಿತಿ ನೀಡಿದ್ದಾರೆ. ತುಂಬಾ ಜಾಗ್ರತೆಯಿಂದ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಎನ್ನುವುದು ಪತ್ರಿಕೆಯ ಕಳಕಳಿ.

ತೂಕದ ವಿವರ:

ಸಂದೀಪ್ ವೇ ಬ್ರಿಡ್ಜ್ ರಿಸಿಪ್ಟ್ ಸಂಖ್ಯೆ ೭೪೩೪,ಗಾಡಿ ನಂಬರ್ ಕೆಎ ೩೩.೦೧೭೭.ರೈತನ ಹೆಸರು ದಶವಂತ.ಗ್ರಾಸ್ ವೇಯ್ಟ್:೧೬೭೫ ಕೆಜಿ,ಸಮಯ:೧೧:೧೭ ನಿಮಿಷ.ದಿನಾಂಕ:೨೫/೦೧/೨೦೨೩

ಶ್ರೀ ಮೈಲಾರಲಿಂಗೇಶ್ವರ ವೇ ಬ್ರಿಡ್ಜ್. ಟಿಕೆಟ್ ನಂಬರ್ ೩೫೯. ಗಾಡಿ ಸಂಖ್ಯೆ ಮೇಲಿನದು,ರೈತನ ಹೆಸರು ಮೇಲಿನದು,ದಿನಾಂಕ ಮೇಲಿನದು.ಸಮಯ:೦೧:೦೫ ನಿಮಿಷ. ತೂಕ:೧೬೮೫.

ಎಮ್.ಆರ್.ಜಿನ್ನಿಂಗ್ ಫ್ಯಾಕ್ಟರಿ:ಸಮಯ ೧೩.೧೯,ತೂಕ:೧೬೮೫.

ಜಾಗ್ರತೆವಹಿಸಿ.

                                                                                                                ಲಕ್ಷ್ಮೀಕಾಂತ ನಾಯಕ

 

Google  News WhatsApp Telegram Facebook
HTML smaller font

.

.