ಶಾಲೆಗೆ ಹಣ ಬಂದು ಎರಡು ವರ್ಷವಾದರೂ ಮುಗಿಯದ ಕಾಮಗಾರಿ ಗಿಡದ ಕೆಳಗೆ ಪಾಠ ಪ್ರವಚನ ತಪ್ಪಿಸಿ: ಸಚಿವರಿಗೆ ಐಕೂರ ಅಶೋಕ

Oct 17, 2023 - 10:29
 0  70

Google  News WhatsApp Telegram Facebook

ಶಾಲೆಗೆ ಹಣ ಬಂದು ಎರಡು ವರ್ಷವಾದರೂ ಮುಗಿಯದ ಕಾಮಗಾರಿ ಗಿಡದ ಕೆಳಗೆ ಪಾಠ ಪ್ರವಚನ ತಪ್ಪಿಸಿ: ಸಚಿವರಿಗೆ ಐಕೂರ ಅಶೋಕ
ashok ikur

Janaa Akrosha News Desk.

ಶಾಲೆಗೆ ಹಣ ಬಂದು ಎರಡು ವರ್ಷವಾದರೂ ಮುಗಿಯದ ಕಾಮಗಾರಿ ಗಿಡದ ಕೆಳಗೆ ಪಾಠ ಪ್ರವಚನ ತಪ್ಪಿಸಿ: ಸಚಿವರಿಗೆ ಐಕೂರ ಅಶೋಕ

ಯಾದಗಿರಿ, ಜಿಲ್ಲೆಯ ವಡಗೇರಿ ತಾಲ್ಲೂಕಿನ ಐಕೂರು ಗ್ರಾಮದ ಶಾಲೆ ಮೇಲ್ದರ್ಜೆಗೇರಿಸಿ ಹೈಸ್ಕೂಲ್ ಆಗಿಸಿ ಕಟ್ಟಡಕ್ಕೆ ೫೦ ಲಕ್ಷ ರೂ. ಮಂಜೂರಾಗಿದ್ದರೂ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು ಇದನ್ನು ಪೂರ್ಣಗೊಳಿಸುವಂತೆ ವರ್ತೂರ್ ಪ್ರಕಾಶ ಯುವ ಘರ್ಜನೆ ಆಗ್ರಹಿಸಿದೆ.

ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬೆಂಗಳೂರಿನ ಕಚೇರಿಯಲ್ಲಿ ಮನವಿ ಸಲ್ಲಿಸಿರುವ ಯುವ ಘರ್ಜನೆ ಅಧ್ಯಕ್ಷ ಐಕೂರು ಅಶೋಕ, ಈಗಾಗಲೇ ಗ್ರಾಮದ ಶಾಲೆಯ ಕಟ್ಟಡವನ್ನು ಅರ್ದ ಪೂರ್ಣಗೊಳಿಸಿ ನಿಲ್ಲಿಸಲಾಗಿದೆ.

ಲೋಕೋಪಯೋಗಿ ಇಲಾಖೆಯ ವತಿಯಿಂದ ಟೆಂಡರ್ ಆಗಿದ್ದು, ಕಾಳೆಬೆಳಗುಂದಿ ಸಿದ್ದಪ್ಪಗೌಡ ಎಂಬುವವರಿಗೆ ಟೆಂಡರ್ ಆಗಿ ಕಾಮಗಾರಿ ಪ್ರಾರಂಭಿಸಿದ ನಂತರ ಅರ್ಧಕ್ಕೆ ನಿಲ್ಲಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆಯೇ ಆರಂಭವಾದ ಕಾಮಗಾರಿ ಏಕೆ ನಿಲ್ಲಿಸಲಾಯಿತು ಎಂಬುದಕ್ಕೆ ಉತ್ತರವಿಲ್ಲ.

ಈ ಕುರಿತು ಡಿಡಿಪಿಐ, ಬಿಇಓ, ಸಿಇಓ, ಡಿಸಿ, ಜನತಾ ದರ್ಶನ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿಗಳು ಸಲ್ಲಿಸಿದರೂ ಇದಕ್ಕೆ ಕವಡೆ ಕಿಮ್ಮತ್ತು ಸಿಕ್ಕಿಲ್ಲ ಎಂದು ಅವರು ಸಚಿವರಿಗೆ ದೂರಿದರು.

ಶಾಲೆಯು ಈಗಾಗಲೇ ಹಳೆಯ ಕಟ್ಟಡ ತೀರ ಶಿಥಿಲಾವಸ್ಥೆಗೆ ತಲುಪಿದ್ದು ಮಳೆ ಬಂದರೆ ಸೋರುತ್ತದೆ. ಬೀಳುವ ಸ್ಥಿತಿಗೆ ಬಂದಿದೆ. ಅದರಲ್ಲೇ ಪಾಠ ಪ್ರವಚನ ನಡೆಸಲಾಗುತ್ತಿದೆ.

ಇದಲ್ಲದೇ ಮಳೆ ಬಂದರೆ ಶಾಲೆಗೆ ರಜೆ ಘೋಷಿಸುತ್ತಾರೆ ಮಳೆ ನಿಂತಮೇಲೆ ಗಿಡದ ಕೆಳಗೆ ಪಾಠ ಮಾಡುವ ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆಗಳು ಹೇಳಿಕ ಯಾರಿಗೆ ದೂರಿದರೂ ಅದಕ್ಕೆ ಕ್ಯಾರೆ ಎನ್ನದೇ ಇರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿವೆ ಎಂದು ದೂರಿರುವ ಅವರು, ಕನಿಷ್ಟ ಶಾಲೆಯ ಕಾಮಗಾರಿಯಾದರೂ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಈ ಕಾರ್ಯದಲ್ಲಿ ನಿರ್ಲಕ್ಷö್ಯ ವಹಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತೇದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

 

Google  News WhatsApp Telegram Facebook
HTML smaller font

.

.