ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಯಲ್ಲಿ ಅನುಮಾನ ಸಿಡಿಪಿಓ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Sep 1, 2023 - 18:20
 0  232

Google  News WhatsApp Telegram Facebook

ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಯಲ್ಲಿ ಅನುಮಾನ ಸಿಡಿಪಿಓ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Janaa Akrosha News Desk.

ಶಹಾಪುರ: ಮಕ್ಕಳ ಪೋಷಣೆಗೆ ಮೀಸಲಾದ ಹಣವನ್ನು ಲೂಟಿ ಮಾಡುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಶ್ವದ ಅತ್ಯಂತ ಕೆಟ್ಟ ಅಪರಾಧವನ್ನು ಮಾಡುತ್ತಿದ್ದಾರೆ. ಕುರಿತು ಸಂಘದಿಂದ ನಡೆದ ಚುಟುಕು ಕಾರ್ಯಚರಣೆಯಲ್ಲಿ ಬಹಿರಂಗವಾಗಿದ್ದು ಜಿಲ್ಲಾಧಿಕಾರಿಗಳ ಕುರಿತು ತನಿಖೆ ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಆಗ್ರಹಿಸಿದರು. ನಗರದ ಶಿಶು ಅಭಿವೃದ್ದಿ ಯೋಜನಾಧಿಕಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಮಕ್ಕಳು ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬೇಕಿದ್ದ ಆಹಾರ ಧಾನ್ಯ ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ. ಅಕ್ರಮದಲ್ಲಿ ಶಾಮೀಲಾಗಿರುವ ಸಿಡಿಪಿಓ, ಸುಪ್ರೀವೈಜರ್, ಮತ್ತು ಕಚೇರಿಯ ಸಿಬ್ಬಂದಿಗಳ ವಿರುದ್ಧ ತನಿಖೆ ಮಾಡಿದ್ದಲ್ಲಿ ಅಗೆದಷ್ಟು ಆಳವಾಗಿ ಅಕ್ರಮ ಬಯಲಿಗೆ ಬರಲಿದೆ. ಈಗಾಗಲೇ ಸಿಡಿಪಿಓ ಅವರು ಪ್ರಭಲ ವ್ಯಕ್ತಿಗಳ ಬೆಂಬಲದಿಂದ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇನ್ನೂ ಕೇಲವೆಡೆ ಬಾರದ ಮಕ್ಕಳ ಹಾಜರಿ ಹಾಕಿ ಅವರಿಗೆ ನೀಡಬೇಕಾದ ಪದಾರ್ಥ ಬೇರೆಡೆ ಮಾರಾಟ ಮಾಡಲಾಗುತ್ತಿದೆ. ಕೂಲಿಗೆ ಹೋದ ಗರ್ಭೀಣಿಯರ ಹೆಸರಲ್ಲಿ ವಸ್ತುಗಳು ನಾಪತ್ತೆಯಾಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ - ಮಕ್ಕಳ ಬದಲು ೩೦-೩೫ ಮಕ್ಕಳ ಹಾಜರಿ ಹಾಕಿ ಇಲಾಖೆಯ ಅಧಿಕಾರಿಗಳೇ ಅದನ್ನು ಮಾರಾಟ ಮಾಡುತ್ತಿದ್ದಾರೆ. ಸಿಡಿಪಿಓ ಮೀನಾಕ್ಷಮ್ಮ ಪಾಟೀಲ ಅವರು ಅಧಿಕಾರ ವಹಿಸಿಕೊಂಡ ನಂತರ ಎಷ್ಟು ಗ್ರಾಮಗಳ ಅಂಗನವಾಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತು ಅಲ್ಲಿ ಕಂಡು ಬಂದ ವಿಷಯಗಳ ಬಗ್ಗೆ ವರದಿ ತರಿಸಿರುವ ದಾಖಲಾತಿ ಮತ್ತು ಕೈಗೊಂಡ ಕ್ರಮಗಳೇನು ತಿಳಿಸಬೇಕು. ಇತ್ತೀಚೆಗೆ ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದ ಮೇಲ್ಛಾವಣೆ ಕುಸಿದು ಮಕ್ಕಳು ಗಾಯಗೊಂಡಿದ್ದದ್ದ ಯಾವ ಕ್ರಮ ಕೈಗೊಂಡಿದ್ದೀರಿ. ಸಂಘಟನೆಯ ಸಮ್ಮುಖದಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಮಾತೃಪೂರ್ಣ, ಮಾತೃವಂದನಾ, ಅಪೌಷ್ಠಿಕ ಮಕ್ಕಳ ಹಾಗೂ ಗರ್ಭೀಣಿಯರಿಗೆ, ಬಾಣಂತಿಯರಿಗೆ ಆರೈಕೆ, ಭಾಗ್ಯಲಕ್ಷ್ಮೀ ಯೋಜನೆಗಳಿಂದ ಸರ್ಕಾರದ ಅನುಷ್ಠಾನಗೊಳಿಸಿ ಶ್ರಮಿಸುತ್ತಿದೆ ಆದರೆ ಎಲ್ಲಾ ಯೋಜನೆಗಳನ್ನು ತಾಲೂಕಿನಾದ್ಯಂತ ಜಾರಿಯಾಗಿರುವ ಬಗ್ಗೆ ಅನುಮಾನವಿದ್ದು ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದರು. ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಮಾತನಾಡಿ ಇಲಾಖೆ ಅಧಿಕಾರಿಗಳ ಜೊತೆ ಕೇಲವರು ಕೈಜೋಡಿಸಿದ್ದು ಬೇದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ಉಚಿತ ಮೊಟ್ಟೆ ವಿತರಣೆ, ಆಹಾರ ಪೂರೈಕೆಯಲ್ಲಿ ವಂಚನೆ ಸೇರಿದಂತೆ ಪ್ರತಿಯೊಂದು ಯೋಜನೆಯಲ್ಲಿಯೂ ಸಹ ಭಾರೀ ಅವ್ಯವಹಾರ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕು. ನಿಷ್ಕಾಳಜಿ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಬೇಕು. ತನಿಖೆಯಲ್ಲಿ ಅವ್ಯವಹಾರ ಕಂಡುಬಂದಲ್ಲಿ ಸಿಡಿಪಿಓ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ಧಶಕರಿಗೆ ಬರೆದ ಮನವಿಯನ್ನು ಅವರ ಪರವಾಗಿ ಬಂದಿದ್ದ  ಸಿದ್ದಣ್ಣಗೌಡ ಅವರಿಗೆ ನೀಡಲಾಯಿತು. ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಂಗಯ್ಯ ಮುಸ್ತಾಜೀರ, ಶಿವುಕುಮಾರ ಸಿಂಗ್, ಅಮರೇಶ ತೆಲಗೂರ, ಭೀಮರಾಯ ಬಸವಂತಪುರ, ನಿಂಗಪ್ಪ ಮೂಗಿ, ಸಂಗಮೇಶ ರಾಜಾಪುರ, ರಾಜಶೇಖರ ಗುಂಡಗುರ್ತಿ, ಮಲ್ಲಣ್ಣಗೌಡ, ರಾಮಲಿಂಗಪ್ಪ, ಸಕ್ಮೀರ್ ಕನ್ಯಾಕೊಳುರ, ಚಂದ್ರು ಹಲಗಿ, ಶಂಕರ, ರಾಯಣ್ಣ ಹೊತಪೇಠ, ದೇವು, ಚಾಂಸಪಾಶಾ, ರವಿ ಯಾದವ, ದೇವು ಮಕ್ತಾಪೂರ, ಮಲ್ಲಿಕಾರ್ಜುನ, ರವಿ, ಮಾಳಪ್ಪ, ಸಾಯಬಣ್ಣ, ಮಲ್ಲಿಕಾರ್ಜುನ ಆರಬೋಳ, ಮೆಷುಕ್, ಸೈಯಾದ, ಅಯ್ಯಪ್ಪ ಭಂಡಾರಿ ಸೇರಿದಂತೆ ಇತರರು ಇದ್ದರು.

ಕುರಿತು ನನ್ನ ಗಮನಕ್ಕೆ ಬಂದಿದ್ದು ತಕ್ಷಣವೇ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ

ವೀರನಗೌಡ

ಉಪನಿರ್ಧೇಶಕರು

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ.

Google  News WhatsApp Telegram Facebook
HTML smaller font

.

.