ಪ್ರತಿಭೆಗೆ ಪುರಸ್ಕಾರದಿಂದ ಪ್ರೋತ್ಸಾಹ ಹೆಚ್ಚಳ, ಸಮಾಜದ ಏಳ್ಗೆಗೆ ದಾರಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Nov 20, 2023 - 17:47
 0  11

Google  News WhatsApp Telegram Facebook

ಪ್ರತಿಭೆಗೆ ಪುರಸ್ಕಾರದಿಂದ ಪ್ರೋತ್ಸಾಹ ಹೆಚ್ಚಳ, ಸಮಾಜದ ಏಳ್ಗೆಗೆ ದಾರಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

Janaa Akrosha News Desk.

ವೀರಶೈವ ಮಹಸಭಾದಿಂದ ಪ್ರತಿಭಾ ಪುರಸ್ಕಾರ

ಪ್ರತಿಭೆಗೆ ಪುರಸ್ಕಾರದಿಂದ ಪ್ರೋತ್ಸಾಹ ಹೆಚ್ಚಳ, ಸಮಾಜದ ಏಳ್ಗೆಗೆ ದಾರಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಪ್ರತಿಭಾವಂತರಿಗೆ ಪುರಸ್ಕಾರ ನೀಡುವುದರಿಂದ ಪ್ರೋತ್ಸಾಹ ಹೆಚ್ಚಿ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ೯೦ಕ್ಕೂ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾವಂತರಿಗೆ ಸನ್ಮಾನಿಸಿ ಗೌರವಿಸುವುದು ಸಮಾಜದ ಜವಬ್ದಾರಿಯಾಗಿದೆ ಅದು ಸಮಾಜದ ಬೆಳವಣಿಗೆಗೆಯೂ ಕಾರಣವಾಗುತ್ತದೆ ಎಂದು ಅವರು ನುಡಿದರು. ಸಮಾಜ ಯುವ ಪೀಳಿಗೆಯ ಸಾಧನೆಗೆ ಗೌರವಿಸುವುದರಿಂದ ಇತರರಿಗೂ ಇದರಿಂದ ಪ್ರೇರಣೆ ಪ್ರೋತ್ಸಾಹ ಸಿಕ್ಕಿ ಸಾಮಾಜದ ಬೆಳವಣಿಗೆಗೆ ಕಾರಣವಾಗಲಿದೆ ಎಂದು ನುಡಿದರು.

ಮಾಜಿ ಶಾಸಕ ಡಾ|| ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ಪ್ರತಿಭೆಗೆ ಪುರಸ್ಕಾರ ನೀಡುವ ಮಹಾಸಭೆಯ ಕಾರ್ಯ ಮಾದರಿಯಾಗಿದೆ. ಇಂದು ಎಲ್ಲ ಸಮುದಾಯದವರು ಈ ಮಾರ್ಗವನ್ನು ಅನುಸರಿಸುತ್ತಿರುವುದು ಮೆಚ್ಚುವ ಅಂಶವಾಗಿದೆ. ವೀರಶೈವ ಸಮಾಜ ಎಂದಿನಿAದಲೂ ಎಲ್ಲ ಸಮುದಾಯದ ಪ್ರತಿಭಾವಂತರಿಗೆ ಗುರ್ತಿಸುವ ಕಾರ್ಯ ಮಾಡುತ್ತಲೇ ಬಂದಿದೆ. ಎಲ್ಲ ಸಮುದಾಯದವರಿಗಾಗಿಯೂ ಕೆಲಸ ಮಾಡಿದೆ. ಜಾಗೃತಿ ಮೂಡಿಸುವ ಕಾರ್ಯ ನಿರಂತರ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನುವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ವಹಿಸಿದ್ದರು, ವೇದಿಕೆ ಮೇಲೆ ತಾಲ್ಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ ಜಗನ್ನಾಥ, ವೀರಶೈವ ಸಮಾಜ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಉಪಸ್ಥಿತರಿದ್ದರು.

ಕಸಾಪ, ಶಸಾಪ ಜಿಲ್ಲಾದ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ, ಮಹೇಶ ಆನೆಗುಂದಿ, ಮಹಿಪಾಲರೆಡ್ಡಿ ವಕೀಲರು ಸೈದಾಪೂರ,  

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಯ ೨೦, ಪಿಯುಸಿಯ ೧೫ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿಗೌರವಿಸಲಾಯಿತು. ಕುಮಾರಿ ಪಲ್ಲವಿ ತಂ. ಸುಧಾಕರ ರಾಷ್ಟçಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಹಿನ್ನೆಯಲ್ಲಿ ವಿಶೇಷ ಸನ್ಮಾನ ಮಾಡಲಾಯಿತು.

ನಿವೃತ್ತ ಎಂಜಿನಿಯರ್ ಬಂಡೆಪ್ಪ ಆಕಳ ಸ್ವಾಗತಿಸಿದರು, ಡಾ. ಸಿದ್ದರಾಜರೆಡ್ಡಿ ನಿರೂಪಿಸಿದರು. ಕೊನೆಗೆ ಮಹೇಶ ಹಿರೇಮಠ ವಂದಿಸಿದರು.

Google  News WhatsApp Telegram Facebook
HTML smaller font

.

.