ಹೊಸಕೇರಾ ಸರಕಾರಿ ಪ್ರೌಢ ಶಾಲೆಗೆ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

Jul 4, 2023 - 19:24
Jul 5, 2023 - 01:06
 0  55

Google  News WhatsApp Telegram Facebook

ಹೊಸಕೇರಾ ಸರಕಾರಿ ಪ್ರೌಢ ಶಾಲೆಗೆ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ

Janaa Akrosha News Desk.

ಶಹಾಪೂರ: ಸೋಮವಾರ ಸುರಿದ ಮಳೆ ನೀರಿನ ಒತ್ತಡಕ್ಕೆ ಹೊಸಕೇರಾ ಗ್ರಾಮದ ಪ್ರೌಢ ಶಾಲೆಯ ಮುಂದಿನ ನಾಲೆಯ ಒಡ್ಡು ಒಡೆದು ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆಯಾದ ಹಿನ್ನಲೆ ಜು.೦೪ ರಂದು ಶಹಾಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸೋಮಶೇಖರ ಬಿರಾದಾರ ಅವರು ಭೇಟಿ ನೀಡಿ, ಪರಿಶೀಲನೆ ಮಾಡುದರು.

ಹೊಸಕೇರಾ ಸರಕಾರಿ ಪ್ರೌಢ ಶಾಲೆ ಮುಂದಿನ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರು, ನಾಲೆಗೆ ಹೊಂದಿಕೊAಡಿದ್ದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನ ಒತ್ತಡದಿಂದ ಕುಸಿತಗೊಂಡು ಮಕ್ಕಳ ಸಂಚಾರಕ್ಕೆ ಸಮಸ್ಯೆಯಾಗಿ, ಅಪಾಯ ಸಂಭವಿಸುವದನ್ನು ತಡೆಯಲು ರಸ್ತೆ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚಿಸಿದರು.

ಶಾಲೆಯ ಶಿಕ್ಷಕರ ಹಾಜರಾತಿ ವಹಿ ಪರಿಶೀಲಿಸಿ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದ ಬಳಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಶೇ.೧೦೦ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಿ ಎಂದು ತಿಳಿಸಿದರು.

ಮಕ್ಕಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಾಲಾ ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕುಡಿಯುವ ನೀರು, ಅಡುಗೆ ಕೋಣೆ, ಊಟದ ಕೋಣೆ ಸೇರಿ ಇತರೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದ್ದರೆ ನರೇಗಾ ಯೋಜನೆಯ ಸಮಗ್ರ ಶಾಲಾ ಅಭಿವೃದ್ಧಿ ಕಾರ್ಯಕ್ರಮದಡಿ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಮಳೆಗಾಲ ಆರಂಭವಾಗಿದ್ದು, ರೋಗ-ರುಜಿನಗಳು ಬಾರದಂತೆ ಮುಂಜಾಗೃತೆ ವಹಿಸಲು ರಸ್ತೆ, ಚರಂಡಿ ಹಾಗೂ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಗ್ರಾಮದ ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆ ಕಾಪಾಡಬೇಕು ಹಾಗೂ ಪ್ರತಿ ಮನೆಯಿಂದ ಸಂಗ್ರಹವಾಗು ಕಸವನ್ನು ಗ್ರಾಮ ಪಂಚಾಯಿತಿ ಸ್ವಚ್ಛವಾಹಿನಿ ವಾಹನಕ್ಕೆ ನೀಡುವ ಮೂಲಕ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಈ ವೇಳೆ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಶಿವುಕುಮಾರ, ನರೇಗಾ ಯೋಜನೆ ಐಇಸಿ ಸಂಯೋಜಕ ಬಸಪ್ಪ ಹೋತಪೇಟ, ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ದೊಡ್ಮನಿ, ಗ್ರಾಮ ಪಂಚಾಯಿತಿ ಸಿಡಿಇಒ ಭೀಮಾಶಂಕರ, ಮಹಾದೇವ, ಅಯ್ಯಣಗೌಡ, ಸಿದ್ರಾಯ ಕಿಲಾರಿ, ರಡ್ಡೆಪ್ಪ, ಬಂಡಿ ಸಾಹುಕಾರ, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.

Google  News WhatsApp Telegram Facebook
HTML smaller font

.

.