ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಕೇಂದ್ರದ ಸಿಬ್ಬಂದಿಯ ಗಮನಕ್ಕೆ

Jul 26, 2023 - 09:09
 0  79

Google  News WhatsApp Telegram Facebook

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಕೇಂದ್ರದ ಸಿಬ್ಬಂದಿಯ ಗಮನಕ್ಕೆ

Janaa Akrosha News Desk.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವ ಕೇಂದ್ರದ ಸಿಬ್ಬಂದಿಯ ಗಮನಕ್ಕೆ

 

ನೀವುಗಳು ಅರ್ಜಿ ಹಾಕುವ ಸಂದರ್ಭ ಪಡಿತರ ಚೀಟಿ ಸರಿಯಿಲ್ಲ, ಆಧಾರ್ ಜೋಡಣೆ ಸರಿಯಿಲ್ಲ ಎಂದು ಎರರ್ ಬರುವುದನ್ನು ತಾಲೂಕು ಕಚೇರಿಗೆ ಕಳುಹಿಸುತಿದ್ದೀರಿ...

 

ಆದರೆ ಅವುಗಳು ತಾತ್ಕಾಲಿಕ ERROR ಅಥವಾ ಸರ್ವರ್ ಸಮಸ್ಯೆಯ ERROR ಆಗಿರುತ್ತದೆ.

 

ಅಂತಹ ಅರ್ಜಿದಾರರನ್ನು ತಾಲೂಕ್ ಕಚೇರಿಗೆ ಕಳುಹಿಸುವುದು ಬೇಡ.

 

ಅಂತಹ ಅರ್ಜಿಯ ಮುಖ್ಯಸ್ಥರನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಕಳುಹಿಸಿ EKYC ಮಾಡಿಸಲು ತಿಳಿಸಿ.

 

ALREADY EKYC ಆಗಿದ್ದರೂ ಕೂಡ ಒಮ್ಮೆ EKYC ಮಾಡಿಸಲಿ ಹಾಗೂ ನಂತರ 2 ದಿನ ಬಿಟ್ಟು ಅರ್ಜಿ ಹಾಕಲಿ. ಸಮಸ್ಯೆ ಪರಿಹಾರ ಆಗಿರುತ್ತದೆ.

 

ಅದೇ ರೀತಿ ಕೆಲವು ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರು ತಿದ್ದುಪಡಿ ಆಗಿರದೇ ಇದ್ದಲ್ಲಿ (ಹೆಚ್ಚಿನ APL ಕಾರ್ಡ್ )ಗಳಲ್ಲಿ ನ್ಯಾಯಬೆಲೆ ಅಂಗಡಿಗೆ ತೆರಳಲಿ.

 

ಅಲ್ಲಿ EKYC OPTION ನಲ್ಲಿ ಕುಟುಂಬ ಮುಖ್ಯಸ್ಥರಾಗಿ ಹೆಂಗಸರ ಹೆಸರು ಬದಲಾಯಿಸಿ ಕೊಡುತ್ತಾರೆ

 

ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದಲ್ಲಿ ಅಂತಹ ಪಡಿತರ ಚೀಟಿದಾರರನ್ನು ಆಹಾರ ಕಚೇರಿಗೆ ಮರಣ ಹೊಂದಿದವರ ಮರಣ ಪ್ರಮಾಣ ಪತ್ರ,ಆಧಾರ್ ಪ್ರತಿ,ಈಗ ಹೊಸದಾಗಿ ಕುಟುಂಬದ ಮುಖ್ಯಸ್ಥರಾಗುವವರ ಆಧಾರ್ ಪ್ರತಿ ಯೊಂದಿಗೆ ತಾಲ್ಲೂಕು ಕಚೇರಿಗೆ ಭೇಟಿ ನೀಡಲಿ.

 

BLT,MNG,BTL,PUT,SUL ಸಂಖ್ಯೆಯಿಂದ ಬದಲಾದ 110100,200,300,400,500....

ಸಂಖ್ಯೆ ಯನ್ನುhttps://ahara.kar.nic.in/status2/verify_rationcard_without_mems.aspx  SITE ನಲ್ಲಿ ಪಡೆದು ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿ.ಸುಮ್ಮನೆ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಆಹಾರ ಕಚೇರಿಗೆ ಕಳುಹಿಸಬೇಡಿ.ಸುಮಾರು ಅರ್ಧದಷ್ಟು ಜನರ ವಿಳಾಸ ತಪ್ಪಿದೆ.ಜನರು ಸುಮ್ಮ ಸುಮ್ಮನೆ 2 ಬಾರಿ ಪಡಿತರ ಚೀಟಿ ಪ್ರಿಂಟ್ ಪಡೆಯಬೇಕು.ಈಗ ಕಾರ್ಡ್ ಪ್ರಿಂಟ್ ತಿದ್ದುಪಡಿ ಅವಕಾಶ ಇರುವುದಿಲ್ಲ.ತಿದ್ದುಪಡಿ ಅವಕಾಶ ಬಂದಾಗ ನೀವು ಪಡಿತರ ಚೀಟಿದಾರರಿಂದ ತಿದ್ದುಪಡಿ ಅರ್ಜಿ ಆಪ್ಲೇ ಮಾಡಿಸಿ ಆಗ ಆಹಾರ ಇಲಾಖೆ ಇಂದ ಅರ್ಜಿ ವಿಲೇವಾರಿ ಮಾಡಿ ನೀಡಲಾಗುವುದು.

 

ಈಗ ತಾಲೂಕು ಕಚೇರಿಗೆ ಕಳುಹಿಸುವುದು ಬೇಡ

 

ಹಾಗೆಯೇ ಕಾರ್ಡ್ CANCEL ಆಗಿದ್ದಲ್ಲಿ ಹೊಸ ಕಾರ್ಡ್ ಮಾಡುವ ಅವಕಾಶ ಬಂದಾಗ ಅರ್ಜಿ ಸಲ್ಲಿಸಲು ತಿಳಿಸಿ.

https://ahara.kar.nic.in/status2/verify_rationcard_without_mems.aspx  site ನಲ್ಲೇ ರೇಶನ್ ಕಾರ್ಡ್ನ ಸ್ಥಿತಿಯನ್ನು ನೋಡಬಹುದು.

 

ಎಲ್ಲಾ ಮಾರ್ಗ ಸೂಚಿಯನ್ನು ಪಾಲಿಸಿ.. ಗೊಂದಲವಿಲ್ಲದೆ ಅರ್ಜಿ ಸಲ್ಲಿಸಿ.

 

Google  News WhatsApp Telegram Facebook
HTML smaller font

.

.