ಥರ್ಮಲ್ ಕೈಗಾರಿಕೆ ಸ್ಥಾಪಿಸಿ ಕೆಮಿಕಲ್ ಫ್ಯಾಕ್ಟರಿಗಳು ಬೇಡ ಎಂದ ರೈತರು, ಕೈಗಾರಿಕೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪ್ರಮಾಣಪತ್ರ, ಪರಿಹಾರ, ಉದ್ಯೋಗ ನೀಡಿ; ಆಗ್ರಹ

Oct 11, 2023 - 19:48
 0  56

Google  News WhatsApp Telegram Facebook

ಥರ್ಮಲ್ ಕೈಗಾರಿಕೆ ಸ್ಥಾಪಿಸಿ ಕೆಮಿಕಲ್ ಫ್ಯಾಕ್ಟರಿಗಳು ಬೇಡ ಎಂದ ರೈತರು, ಕೈಗಾರಿಕೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪ್ರಮಾಣಪತ್ರ, ಪರಿಹಾರ, ಉದ್ಯೋಗ ನೀಡಿ; ಆಗ್ರಹ
ಥರ್ಮಲ್ ಕೈಗಾರಿಕೆ ಸ್ಥಾಪಿಸಿ ಕೆಮಿಕಲ್ ಫ್ಯಾಕ್ಟರಿಗಳು ಬೇಡ ಎಂದ ರೈತರು, ಕೈಗಾರಿಕೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪ್ರಮಾಣಪತ್ರ, ಪರಿಹಾರ, ಉದ್ಯೋಗ ನೀಡಿ; ಆಗ್ರಹ

Janaa Akrosha News Desk.

ಥರ್ಮಲ್ ಕೈಗಾರಿಕೆ ಸ್ಥಾಪಿಸಿ ಕೆಮಿಕಲ್ ಫ್ಯಾಕ್ಟರಿಗಳು ಬೇಡ ಎಂದ ರೈತರು

ಕೈಗಾರಿಕೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಪ್ರಮಾಣಪತ್ರ, ಪರಿಹಾರ, ಉದ್ಯೋಗ ನೀಡಿ; ಆಗ್ರಹ

ಯಾದಗಿರಿ, ಅ.11- ಕಡೇಚೂರು ಮತ್ತು ಬಾಡಿಯಾಳ, ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ 2011 ರಲ್ಲಿ ಒಟ್ಟು 3232 ಎಕರೆ 22 ಗುಂಟೆ ಎಕರೆ ಜಮೀನು ಸುವರ್ಣ ಕಾರಿಡಾರ್ ಯೋಜನೆಗಾಗಿ/ ಲ್ಯಾಂಡ್ ಬ್ಯಾಂಕ್ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದು ಇಲ್ಲಿಯವರೆಗೆ ಬೃಹತ್ ಕೈಗಾರಿಕೆ ಕಂಪೆನಿಗಳು (ಥರ್ಮಲ್ ಮತ್ತು ಜವಳಿ ಪಾರ್ಕ) ಸ್ಥಾಪನೆ ಮಾಡದೇ ಕೆಮಿಕಲ್ ಫ್ಯಾಕ್ಟರಿಗಳಿಗೆ ಮಾತ್ರ ಅನುಮತಿ ನೀಡಿದ ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇಂತಹ ಕಂಪೆನಿಗಳು ತಡೆಹಿಡಿಯಬೇಕು ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಯೋಜನಾ ನಿರಾಶ್ರಿತರ ಪ್ರಮಾಣಪತ್ರ ನೀಡಬೇಕು, ಕಂಪೆನಿಯಲ್ಲಿ ನೌಕರಿ ನೀಡಬೇಕು ಹಾಗೂ ಹೆಚ್ಚಿನ ಭೂ ಪರಿಹಾರ ಧನ ನೀಡುವಂತೆ ಸರ್ಕಾರಕ್ಕೆ ಕಡೇಚೂರು ಗ್ರಾಮಸ್ಥರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಡೇಚೂರು ಭಾಗದ ರೈತರು, ಯಾದಗಿರಿ ತಾಲೂಕಿನ ಕಡೇಚೂರ ಗ್ರಾಮದ ಜಮೀನು ವಶಪಡಿಸಿಕೊಂಡು ಸರ್ಕಾರ ಕೈಗಾರಿಕೆ ಬೆಳವಣಿಗೆಗೆ ಕ್ರಮ ಕೈಗೊಂಡಿತು. ಮತ್ತು ನಮ್ಮಗಳ ಜಮೀನು ಖರೀದಿ ಮಾಡಿ ಸಮರ್ಪಕ ಪರಿಹಾರವನ್ನು ನೀಡದೇ ಅನ್ಯಾಯ ಮಾಡಲಾಗಿದೆ. ಇದಲ್ಲದೇ ಜೆಎಂಸಿ ವರದಿ ಪ್ರಕಾರ ಪರಿಹಾರವನ್ನೂ ಸಹ ನೀಡಿಲ್ಲ ಹೊಲದಲ್ಲಿ ಬರುವ ಗಿಡ, ಮರ, ಭಾವಿ, ಪೈಪ್ ಲೈನ್, ಬೋರವೆಲ್‌ಗಳಿಗೂ ಪರಿಹಾರ ನೀಡಲು ಅವಕಾಶವಿದೆ ಆದರೆ ಇದುವರೆಗೆ ಈ ಪರಿಹಾರವನ್ನೂ ಸಹ ರೈತರಿಗೆ ನೀಡಿಲ್ಲ ಎಂದು ದೂರಿದರು.

 2011 322 3232-32 088 ಭೂಮಿಯನ್ನು ಕೈಗಾರಿಕಾ ಪ್ರದೇಶವಾಗಿಸಲು ಜಮೀನು ಸ್ವಾಧೀನಪಡಿಸಿಕೊಳ್ಳಲಾಯಿತು. ಸುಮಾರು 10 ವರ್ಷಗಳಾದರೂ ಭೂಮಿ ಕೊಂಡ ಸಾವಿರಾರು ರೈತರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಿಲ್ಲ, ಉದ್ಯೋಗವೂ ನೀಡಿಲ್ಲ, ಇದಕ್ಕೆ ನಮ್ಮ ಧಿಕ್ಕಾರವಿದೆ, ಉದ್ಯೋಗದ ಭರವಸೆಯೂ ಹುಸಿಯಾಗಿದೆ. ಅತ್ತ ಜೀವನಕ್ಕೆ ಆಧಾರವಾಗಿದ್ದ ಭೂಮಿ ಇಲ್ಲವಾಯಿತು ಎಂದು ಅಲವತ್ತುಕೊಂಡರು.

ಸರ್ಕಾರದಿAದ ಸೂಕ್ತ ಪರಿಹಾರವೂ ದೊರೆಯದೇ ರೈತರ ಜೀವನ ನಿರ್ವಹಣೆ ಕಷ್ಟವಾಗಿದೆ, ಆದ್ದರಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಿ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಮುಂದಾಗಬೇಕು. ಭೂಮಿ ಕಳೆದುಕೊಂಡವರಿಗೆ ಪ್ರತಿ ಎಕರೆಗೆ ರೂ 6,00 ಲಕ್ಷ ನೀಡಿದ್ದು, ರಾಜ್ಯದಲ್ಲಿ ಎಲ್ಲಿಯೂ ಕೂಡಾ ಇಷ್ಟು ಕಡಿಮೆ ಪ್ರಮಾಣದ ಹಣ ನೀಡಿಲ್ಲ, ಆದ್ದರಿಂದ ತಾವು ಪ್ರತಿ ಎಕರೆಗೆ ಹೆಚ್ಚಿನ ಹಣ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಡೆಚೂರು ಮತ್ತು ಬಾಡಿಯಾಳ, ಶೆಟ್ಟಿಹಳ್ಳಿ ಗ್ರಾಮದಲ್ಲಿ ಇಲ್ಲಿಯವರೆಗೆ ಬೃಹತ್ ಕೈಗಾರಿಕೆ ಕಂಪನಿಗಳು (ಫರ್ಮಲ್ ಜವಳಿ ಪಾರ್ಕ) ಸ್ಥಾಪನೆ ಮಾಡಿರುವುದಿಲ್ಲ. ಆದರೆ ಇಲ್ಲಿ ವಿಷಪೂರಿತ ವಾಯುಮಾಲಿನ್ಯ ಹಾಳು ಮಾಡುವಂತ ಕೆಮಿಕಲ್ ಫ್ಯಾಕ್ಟರಿ ಗಳಿಗೆ ಅನುಮತಿ ನೀಡಲಾಗಿದೆ.

Àಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇಂತಹ ಕಂಪನಿಗಳು ತಡೆಹಿಡಿಯಬೇಕು ಈ ಹಿಂದೆ ಸ್ವಾಧೀನಪಡಿಸಿಕೊಂಡ 3200 ಎಕರೆ ಜಮೀನಿನಲ್ಲಿ ಇನ್ನೂವರೆಗೂ ಕಂಪೆನಿಗಳು ಪ್ರಾರಂಭವಾಗಿಲ್ಲ, ಜನರಿಗೆ ಉದ್ಯೋಗ ಸಿಕ್ಕಿರುವುದಿಲ್ಲ. ಆದರೆ ಈಗ ಮತ್ತೆ ಇನ್ನಷ್ಟು ಜಮೀನು ತೆಗೆದುಕೊಂಡು ಮತ್ತೆ ಮನಾ ಭೂಸ್ವಾಧೀನಪಡಿಸಿಕೊಂಡರೆ ರೈತರು ಬೀದಿ ಪಾಲಾಗಬೇಕಾಗುತ್ತದೆ. ಆದ್ದರಿಂದ ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬಾರದು.

ಸದರಿ ಪ್ರದೇಶದಲ್ಲಿ ರಾಸಾಯನಿಕ ಕಂಪೆನಿಯ ವಿಷಪೂರಿತ ಕೆಮಿಕಲ್ ನಿಂದ ಕಡೇಚೂರ ಹಳ್ಳದಲ್ಲಿ ಮೀನುಗಳು ಸತ್ತಿವೆ. ಜಾನುವಾರುಗಳ ಆರೋಗ್ಯ ಹದಗೆಟ್ಟಿದೆ. ಇದರಿಂದ ಜನತೆ ಭಯಭೀತರಾಗಿದ್ದಾರೆ.

 ಸದರಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಸಮಯದಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಉದ್ದೇಶಕ್ಕಾಗಿ ಹೊರತು ಖಾಸಗಿ ಉದ್ದಿಮೆದಾರರಿಗೆ ಅನುಕೂಲ ಮಡಿಕೊಡುವ ಉದ್ದೇಶಕ್ಕೆ ಅಲ್ಲ ಎಂದು ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ವಾಸ್ತವದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿರುತ್ತದೆ.

ಆದರೆ ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಬಂದಿರುವ ಕೈಗಾರಿಕೆ ಕಂಪೆನಿಗಳು ಪರಿಸರ ವಾಯು ಮಾಲಿನ್ಯ ಹೊರತುಪಡಿಸಿ ನಡೆಯುತ್ತಿವೆ. ಮುಂದೆಯಾದರೂ ಇಂತಹ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು. ಈಗಾಗಲೇ ಚಾಲ್ತಿಯಲ್ಲಿರುವ ಕಂಪೆನಿಗಳ ಪರವಾನಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಭೂಮಿ ಕಳೆದುಕೊಂಡವರಿಗೆ ಕಂಪೆನಿಯಲ್ಲಿ ಯಾವುದೇ ಗುತ್ತಿಗೆದಾರರ ಕೆಲಸಕ್ಕೆ ಮತ್ತು ವಾಹನಗಳಾದ ಟ್ರಾಕ್ಟರ್ ಟಿಪ್ಪರ್, ಕ್ರಷರ್, ಜೆಸಿಬಿ, ಇತರೆ ಯಾವುದೇ ನಿರ್ವಹಣೆ ಕೆಲಸಗಳು ಇದ್ದರೆ ಭೂಮಿ ಕಳೆದುಕೊಂಡವರಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಎಲ್ಲಾ ಕಂಪೆನಿಯ ಮಾಲೀಕರಿಗೆ ತಾವು ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಕಡೇಚೂರು ನಿವಾಸಿ ಹಾಗೂ ಸೈದಾಪೂರ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಉಪಾದ್ಯಕ್ಷ ಎಂ.ಡಿ. ಜುಬೇರ್ ಪಾಷಾ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜು ಮೇತ್ರೆ, ಹುಸೇನಪ್ಪ, ಚಂದ್ರಪ್ಪ, ತಾಹೇರ ಅಲಿ, ಗ್ರಾಪಂ ಸದಸ್ಯ ಅಂಜಿನೇಯ, ಗುಇಲ್ ಮಹಮ್ಮದ್, ಅಲಿ ಹುಸೇನ್, ಶೇಖರ ಬದ್ದಳ್ಳಿ ಇನ್ನಿತರರು ಇದ್ದರು.

Google  News WhatsApp Telegram Facebook
HTML smaller font

.

.