ಉದ್ದೇಶವನ್ನೇ ಮರೆತ ಗ್ರಾಮ ಪಂಚಾಯತಿಗಳು,ಲೂಟಿಕೋರರ ಸ್ವತ್ತಾದ ಪಂಚಾಯತ್ ರಾಜ್ ಇಲಾಖೆ

Jul 3, 2023 - 17:55
 0  22

Google  News WhatsApp Telegram Facebook

ಉದ್ದೇಶವನ್ನೇ ಮರೆತ ಗ್ರಾಮ ಪಂಚಾಯತಿಗಳು,ಲೂಟಿಕೋರರ ಸ್ವತ್ತಾದ ಪಂಚಾಯತ್ ರಾಜ್ ಇಲಾಖೆ

Janaa Akrosha News Desk.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಭಾಗ ನಾಲ್ಕು ಪ್ರಕರಣ 58 b ಮಾನವ ಘನತೆಗೆ ಕಳಂಕ ತರುವ ಪಾರಂಪರಿಕ, ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಗಳನ್ನು ಪ್ರತಿಬಂಧಿಸಲು ಗ್ರಾಮ ಪಂಚಾಯತಿಯ ಕರ್ತವ್ಯದ ಬಗ್ಗೆ ಹೇಳುತ್ತದೆ. ಪ್ರತಿಯೊಂದು ಗ್ರಾಮ ಪಂಚಾಯತಿಯೂ ವ್ಯಕ್ತಿಗಳ ವಿಶೇಷವಾಗಿ ಮಹಿಳೆಯರ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳು, ಘನತೆ ಮತ್ತು ಸ್ವಾತಂತ್ರ್ಯಕ್ಕೆ ಕಳಂಕ ತರುವ ಯಾವುದೇ ಪಾರಂಪರಿಕ ಅಥವಾ ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಯನ್ನು ಗ್ರಾಮಗಳಲ್ಲಿ ಆಚರಿಸತಕ್ಕದ್ದಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಹಾಕುವಿಕೆ ಮತ್ತು ಇತರ ವಿಧವಾದ ಸಾಮಾನ್ಯವಾಗಿ ಹೊರ ಹಾಕುವ ಆಚರಣೆಯ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವುದು; -ನಿರ್ವಹಿಸಬೇಕಾದ ಕರ್ತವ್ಯವಾಗಿರತಕ್ಕದ್ದು. ಈ ಪ್ರಕರಣವನ್ನು ಓದಿದಾಗ ನಗು ಬರುತ್ತದೆ ಅಲ್ಲವೇ? ಅಸಲು ಗ್ರಾಮ ಪಂಚಾಯತಿಗಳು ನಿಯಮ ಬದ್ಧವಾಗಿ ಕರ್ತವ್ಯ ನಿರ್ವಹಿಸಿದರಲ್ಲವೇ ಈ ಶಾಸನಗಳ ಬಗ್ಗೆ ಮಾತನಾಡುವುದು? ಈ ಪಿಡಿಓಗಳು ಪಂಚಾಯತಿಗೆ ಬರುವುದಿರಲಿ,ಫೋನೂ ರಿಸೀವ್ ಮಾಡುವುದಿಲ್ಲ. ಇನ್ನು ಅಧ್ಯಕ್ಷ ಮತ್ತು ಸದಸ್ಯರು? ಈ ಭ್ರಷ್ಟರು ಪಂಚಾಯತಿಯನ್ನು ದುಖಾನ್ ಮಾಡಿಕೊಂಡಿರುತ್ತಾರೆ, ಕೇವಲ ತಿನ್ನುವುದು ಅವರ ಧ್ಯೇಯ. ಹಳ್ಳಿಗಳಲ್ಲಿ ಅಸ್ಪೃಶ್ಯತೆ ಜೀವಂತವಿದೆ, ಮಹಿಳೆಯರ ಮೇಲಿನ ಶೋಷಣೆ ಜೀವಂತವಿದೆ. ಮುಖ್ಯವಾಗಿ ಹಳ್ಳಿಗಳಲ್ಲಿ ಅಕ್ರಮ ಚಟುವಟಿಕೆಗಳು ಸಾವಿರಾರು. ಈ ಗ್ರಾಮ ಪಂಚಾಯತಿಗಳು ಯಾವ ಪ್ರಾಧಿಕಾರಕ್ಕೂ ವರದಿ ಸಲ್ಲಿಸುವುದಿಲ್ಲ. ಈ ಪಂಚಾಯತ್ ರಾಜ್ ವ್ಯವಸ್ಥೆ ಎನ್ನುವುದು ಶುದ್ಧ ದಂಡ!

Google  News WhatsApp Telegram Facebook
HTML smaller font

.

.