ಗೃಹಲಕ್ಷ್ಮೀ ಯೋಜನೆ, ಡಿಜಿಟಲ್ ಸೇವಾ ಕೇಂದ್ರಗಳ ಸುಗ್ಗಿ!

Jul 29, 2023 - 13:07
Jul 29, 2023 - 14:10
 0  181

Google  News WhatsApp Telegram Facebook

Janaa Akrosha News Desk.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಎನ್ನುವ ಗ್ರಾಮದಲ್ಲಿ ಶ್ರೀ ಮಹಾಕಾಳಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆಯ ಅರ್ಜಿದಾರರಿಂದ ನೂರು ರೂಪಾಯಿ ಪಡೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಈ ಬೆಳಗಾವಿ ಜಿಲ್ಲೆ ಕಾಂಗ್ರೇಶನ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ತವರು ಜಿಲ್ಲೆ. ಅವರು ಈ ಹಿಂದೆ ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು ಯಾರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ನಯಾಪೈಸೆಯೂ ಕೊಡಬೇಕಿಲ್ಲ ಇದು ಸಂಪೂರ್ಣವಾಗಿ ಉಚಿತ ಎಂದು ಹೇಳಿದ್ದಲ್ಲದೆ ಈ ಯೋಜನೆಗೆ ಅರ್ಜಿ ದಾಖಲಿಸುವ ಡಿಜಿಟಲ್ ಸೇವಾ ಕೇಂದ್ರಗಳಿಗೆ ರಾಜ್ಯ ಸರ್ಕಾರ ಇಪ್ಪತ್ತು ರೂಪಾಯಿಗಳ ವೆಚ್ಚ ಭರಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವರದಿಯಲ್ಲಿ ಅಪ್ಲೋಡ್ ಮಾಡಲಾಗಿರುವ ವಿಡಿಯೋದಲ್ಲಿ ಡಿಜಿಟಲ್ ಸೇವಾ ಕೇಂದ್ರ ಮಹಿಳೆಯೊಬ್ಬರು ನೂರು ರೂಪಾಯಿ ಕೊಡಲೇಬೇಕು, ನಾವು ಮೇಲಿನವರಿಗೆ ಕೊಡಬೇಕು ಎನ್ನುವಂತೆ ಸಂಭಾಷಣೆ ನಡೆಸಿದ್ದು ಸದ್ಯ ಬೆಳಗಾವಿ ಜಿಲ್ಲೆಯ ಮೇಲಿನವರು ಎಂದರೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ಅವರಾಗಿದ್ದು ಈ ಹಣ ಅವರಿಗೆ ತಲುಪಲಿದೆಯಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಜನ ಆಕ್ರೋಶ ಪತ್ರಿಕೆಗೆ ಮಾಹಿತಿ ನೀಡಿದ ಅನಾಮಧೇಯ ಹೋರಾಟಗಾರರು ಈ ದಂದೆ ಇಡೀ ರಾಜ್ಯಾದಂತ ನಡೆಯುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಸರ್ಕಾರದ ಶಾಸಕರು ಸಚಿವರು ನೀಡುವ ಹೇಳಿಕೆಗಳು ಬಾಲಿಶವಾಗಿವೆ ಎಂದವರು ತಿಳಿಸಿದರು. ಈ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ವಿಡಿಯೋಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Google  News WhatsApp Telegram Facebook
HTML smaller font

.

.