ತಕ್ಷಣ ಜಿಲ್ಲೆ ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ: ರೈತ ಸಂಘದ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಎಚ್ಚರಿಕೆ

Sep 7, 2023 - 12:16
 0  101

Google  News WhatsApp Telegram Facebook

ತಕ್ಷಣ ಜಿಲ್ಲೆ ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ: ರೈತ ಸಂಘದ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಎಚ್ಚರಿಕೆ

Janaa Akrosha News Desk.

ತಕ್ಷಣ ಜಿಲ್ಲೆ ಬರಪೀಡಿತ ಎಂದು ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ: ರೈತ ಸಂಘದ ಜಿಲ್ಲಾಧ್ಯಕ್ಷ ರಂಗನಾಥಗೌಡ ಬೈರಿಮರಡಿ ಎಚ್ಚರಿಕೆ

ಯಾದಗಿರಿ, ಸೆ.೬- ಜಿಲ್ಲೆಯನ್ನು "ಬರ ಪೀಡಿತ ಪ್ರದೇಶ" ಎಂದು ಘೋಷಣೆ ಮಾಡಲು ರೈತ ನಾಯಕ ಪ್ರೊ|| ನಂಜುAಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ರಿ) ಒತ್ತಾಯಿಸಿದೆ.

ಈ ಕುರಿತು ಬುಧವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದ ರೈತ ಸಂಘದ ಜಿಲ್ಲಾದ್ಯಕ್ಷ ರಂಗನಾಥಗೌಡ ಬೈರಿಮರಡಿ ಮಾತನಾಡಿ, ರಾಜ್ಯಾದ್ಯಂತ ವಾಡಿಕೆಯ ಮಳೆಯಾಗದೇ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಮುಂಗಾರು ಕೈಕೊಟ್ಟಿದ್ದು, ಮಳೆ ಇಲ್ಲದ ಕಾರಣ ಜಲಾಷಯ ಬತ್ತಿವೆ, ನೀರು ಇಲ್ಲದೇ ಬೆಳೆಗಳು ಒಣಗುತ್ತಿವೆ ಒಟ್ಟಾರೆ ಅನ್ನದಾತ ರೈತರು ಸಂಕಷ್ಟಕ್ಕೆ ಈಡಾಗಿದ್ದು ಕೂಡಲೇ ಬರಗಾಲ ಘೋಷಣೆ ಮಾಡಬೇಕು ಮತ್ತು ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿದರು.

ಕೂಡಲೇ ಕ್ರಮ ಕೈಗೊಂಡು ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು, ಬರ ಪರಿಹಾರದ ಮೊತ್ತವನ್ನು ಡಿಬಿಟಿ ಮುಖಾಂತರ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಬಸವ ಸಾಗರ ಜಲಾಷಯದಲ್ಲಿ ನೀರು ಇದ್ದರೂ ಸಹ ವಾರಾಬಂದಿ ಜಾರಿಗೊಳಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಎಂದು ಅವರು ಆರೋಪಿಸಿದರು.

ಈ ಹಿಂದಿನ ಸರ್ಕಾರ ರೈತರ ಹಿತಕ್ಕಾಗಿ ಆರಂಭಿಸಿದ ಯೋಜನೆಗಳನ್ನು ಬಂದ್ ಮಾಡದೇ ಅವುಗಳನ್ನು ಮುಂದುವರೆಸಿಕೊAಡು ಹೋಗಬೇಕು ಮತ್ತು ವಿದ್ಯುತ್ ಪೂರೈಕೆ ಮಾಡುವಲ್ಲಿಯೂ ಅನ್ಯಾಯವಾಗುತ್ತಿದ್ದು ಕನಿಷ್ಟ ೧೨ ತಾಸು ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾ ಖಜಾಂಚಿ ಮಕಬೂಲ್ ಅಜಲಾಪೂರ, ಯಾದಗಿರಿ ತಾಲೂಕ ಗೌರವಾಧ್ಯಕ್ಷ ಮಹಾದೇವಪ್ಪ,  ತಾಲೂಕು ಅಧ್ಯಕ್ಷ ಕಾಶಿನಾಥ ದೊರೆ, ಪ್ರಧಾನ ಕಾರ್ಯದರ್ಶಿ ಬೀರಪ್ಪ ಪೂಜಾರಿ, ಗುರುಮಠಕಲ್ ತಾಲೂಕು ಅಧ್ಯಕ್ಷ ಭೀಮರಾಯ, ಗೌರವಾಧ್ಯಕ್ಷ ಸುರೇಶ್ ರೆಡ್ಡಿ, ಕಾರ್ಯದರ್ಶಿ ರಾಜಶೇಖರ್ ರೆಡ್ಡಿ, ಸುರಪುರ ತಾಲ್ಲೂಕ ಅಧ್ಯಕ್ಷ ಮರಿಲಿಂಗಪ್ಪ ಗೌಡ, ಕಾರ್ಯದರ್ಶಿ ಶಾಂತಗೌಡ ಮಾಲಿ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾದಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದರು. 

Google  News WhatsApp Telegram Facebook
HTML smaller font

.

.