ಕದಸಂಸ ಭೀಮವಾದ ಹುಣಸಗಿ ತಾಲ್ಲೂಕು ಘಟಕ ರಚನೆ: ಶರಣು ಎಸ್. ನಾಟೇಕರ್

Sep 18, 2023 - 09:20
 0  10

Google  News WhatsApp Telegram Facebook

ಕದಸಂಸ ಭೀಮವಾದ ಹುಣಸಗಿ ತಾಲ್ಲೂಕು ಘಟಕ ರಚನೆ: ಶರಣು ಎಸ್. ನಾಟೇಕರ್

Janaa Akrosha News Desk.

ಯಾದಗಿರಿ, ಸೆ.೧೭- ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿ ಸಭೆ ಹುಣಸಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ತಾಲ್ಲೂಕು ಘಟಕ ಹಾಗೂ ಮಹಿಳಾ ಘಟಕ ಹಾಗೂ ನಗರ ಘಟಕ ರಚನೆ ಮಾಡಲಾಯಿತು. ಸಭೆಯಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.

ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್. ನಾಟೇಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಸಮಾಜ ಅಭಿವೃದ್ಧಿ ಆಗಬೇಕೆಂದರೆ ಶಿಕ್ಷಣ ಮುಖ್ಯ ಶಿಕ್ಷಣ ಸಂಘಟನೆ ಹೋರಾಟ ದಿಂದಲೇ ಏಳ್ಗೆ ಸಾಧ್ಯ ಎಂದು ಹೇಳಿದರು.

ಬುದ್ಧ ಬಸವ ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆದಾಗ ಮಾತ್ರ ಎಲ್ಲರ ಏಳ್ಗೆ ಸಾಧ್ಯವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕೆಂದು ತಿಳಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂಧಿಗೇರಿ ನೇತೃತ್ವ ವಹಿಸಿ ಮಾತನಾಡಿ, ನಂಬಿಕೆ ಇರಬೇಕು, ಮೂಢನಂಬಿಕೆ ಇರಬಾರದು ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು ಮುಂತಾದ ಅನಿಷ್ಟ ಪದ್ಧತಿಗಳು ನಿಲ್ಲಬೇಕು ಎಂದು ಹೇಳಿದರು.

ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ಹುಣಸಗಿ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ವಿವರ ಇಂತಿದೆ:

ಮಾನಪ್ಪ ಹಾದಿಮನಿ (ಸಂಚಾಲಕ), ಸಂಗಪ್ಪ ಬೊಮ್ಮನಗುಡ್ಡ, ಮಲ್ಲಿಕಾರ್ಜುನ ಕಚಕನೂರ, ಪರಶುರಾಮ ಬೈಲಕುಂಪಿ, ಹೊನ್ನಪ್ಪ ಹಾಗರಟಗಿ (ಸಂ. ಸಂಚಾಲಕರು), ಬಸವರಾಜ ದ್ಯಾಮನಾಳ (ಖಜಾಂಚಿ)

ಮಹಿಳಾ ಘಟಕದ ತಾಲ್ಲೂಕು ಘಟಕಕ್ಕೆ ಜ್ಯೋತಿ ದೊಡ್ಡಮನಿ ನಾರಾಯಣಪುರ (ಸಂಚಾಲಕಿ), ಹುಣಸಗಿ ನಗರ ಮಹಿಳಾ ಘಟಕ ಹುಲಿಗೆಮ್ಮ ಗಾಳೆಪ್ಪ ಜೊಂಡೆ (ಸಂಚಾಲಕರು), ಯಮನಪ್ಪ ಚೆನ್ನೂರು (ಜಿಲ್ಲಾ ಸಂಘಟನಾ ಸಂಚಾಲಕ)

ಸಭೆಯಲ್ಲಿ ಮಹಿಳಾ ಘಟಕದ ರಾಜ್ಯ ಸಂಘಟನಾ ಸಂಚಾಲಕಿ ಶ್ರೀಮತಿ ಮಂಜುಳಾ ಸುರಪುರ, ಜಿಲ್ಲಾ ಸಂ.ಸAಚಾಲಕ ರಾದಭೀಮರಾಯ ಕಾಗಿ, ಶಿವಶರಣಪ್ಪ ವಾಡಿ, ಪ್ರಭು ಕಚಕನೂರ, ಕೆಂಭಾವಿ ಹೋಬಳಿ ಸಂ. ಸಂಚಾಲಕ ಬಸವರಾಜ ಹೆಮನೂರ, ಯಾದಗಿರಿ ತಾಲ್ಲೂಕು ಸಂಚಾಲಕ ಶರಣಪ್ಪ ಮಮ್ಮದರ ಯರಗೋಳ, ಶರಣು ಹಾಲಹಳ್ಳಿ ಇನ್ನಿತರರು ಇದ್ದರು. 

Google  News WhatsApp Telegram Facebook
HTML smaller font

.

.