ಗ್ರಾಪಂ ಸದಸ್ಯನಿಗೆ ಅವಾಚ್ಯ  ಶಬ್ದಗಳಿಂದ ನಿಂದಿಸಿದ ಮಾವಿನಹಳ್ಳೀ ಶಾಲೆ ಮುಖ್ಯಗುರು, ಕ್ರಮಕ್ಕೆ ಸೇನೆ ಒತ್ತಾಯ

Sep 16, 2023 - 17:03
 0  58

Google  News WhatsApp Telegram Facebook

ಗ್ರಾಪಂ ಸದಸ್ಯನಿಗೆ ಅವಾಚ್ಯ  ಶಬ್ದಗಳಿಂದ ನಿಂದಿಸಿದ ಮಾವಿನಹಳ್ಳೀ ಶಾಲೆ ಮುಖ್ಯಗುರು, ಕ್ರಮಕ್ಕೆ ಸೇನೆ ಒತ್ತಾಯ

Janaa Akrosha News Desk.

ಯಾದಗಿರಿ: ತಾಲ್ಲೂಕಿನ ಬೊಮ್ಮರಾಳದೊಡ್ಡಿ (ಹಿಂದಿನ ಮಾವಿನಹಳ್ಳಿ) ಶಾಲೆಯ ಮುಖ್ಯ ಗುರು ಮಚ್ಚೆಂದ್ರ ಗ್ರಾಪಂ ಸದಸ್ಯನಿಗೆ ಅವಾಚ್ಯ ನಿಂದಿಸಿದ್ದು ಇಂತಹ ಶಿಕ್ಷಕನನ್ನು ಶಾಲೆಯಲ್ಲಿ ಮುಂದುವರೆಸಬಾರದು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ  ಆಗ್ರಹಿಸಿದೆ.

  ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿರುವ ಸೇನೆ ತಾಲ್ಲೂಕು ಘಟಕ ಅವಾಚ್ಯ ನಿಂದಿಸುವ ಶಿಕ್ಷಕ ನಮ್ಮ ಗ್ರಾಮಕ್ಕೆ ಬೇಡ ಎಂದು ಅವರು ಶಾಲೆಯಲ್ಲಿ ಸರಿಯಾಗಿ ಕೆಲಸ ಮಾಡದ ಮುಖ್ಯ ಗುರು ಮಚ್ಚೆಂದ್ರ ವಿರುದ್ಧ ದೂರು ಸಲ್ಲಿಸಿದ ಏಕೈಕ ಕಾರಣಕ್ಕೆ ಗ್ರಾಪಂ ಸದಸ್ಯರಾದ ಆಂಜಿನೇಯ ಇವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಿಂದ ನಿಂದಿಸಿ ಬಾಯಿಗೆ ಬಂದಂತೆ ಬೈದಿದ್ದು ಇವರ ದೂರವಾಣಿ ಕರೆಯ ರೆಕಾರ್ಡಿಂಗ್ ಸಹ ಇದೆ ಎಂದು ಸೇನೆ ತಿಳಿಸಿದೆ.

 ಮದ್ಯ ಸೇವನೆ ಮಾಡಿ ಬಾಯಿಗೆ ಬಂದಂತೆ ಬೈದಿರುವುದು ಸಾಕ್ಷಿಗಳು ಇರುವುದರಿಂದ ತಕ್ಷಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದೆ.

 ಸೇನೆ ಸೈದಾಪೂರ ವಲಯ ಅಧ್ಯಕ್ಷ ವೀರೇಶ ಸಜ್ಜನ್ ಸೈದಾಪೂರ ಮನವಿ ಸಲ್ಲಿಸಿದರು. ಚಂದ್ರಶೇಖರ ಬದ್ದೆಪಲ್ಲಿ, ರಾಜು ಮೇತ್ರಿ, ಆಂಜಿನೇಯ ಪೂಜಾರಿ, ಆಂಜಿನೇಯ ಕೋಟಿಮನಿ, ಮಲ್ಲಿಕಾರ್ಜುನ ನೀಲಹಳ್ಳಿ, ರಾಜಪ್ಪ ಕೋಟಿಮನಿ, ಭೀಮರಾಯ ಕೋಟಿಮನಿ ಹಾಗೂ ಮಾವಿನಹಳ್ಳಿ ಗ್ರಾಮಸ್ಥರು ಇದ್ದರು.

Google  News WhatsApp Telegram Facebook
HTML smaller font

.

.