ಬುಡಕಟ್ಟು ಸಮುದಾಯದ ವ್ಯಕ್ತಿಯ ಪಾದಪೂಜೆ ಮಾಡಿದ ಮಧ್ಯೆ ಪ್ರದೇಶ ಸರ್ಕಾರ

Jul 7, 2023 - 11:19
 0  33

Google  News WhatsApp Telegram Facebook

ಬುಡಕಟ್ಟು ಸಮುದಾಯದ ವ್ಯಕ್ತಿಯ ಪಾದಪೂಜೆ ಮಾಡಿದ ಮಧ್ಯೆ ಪ್ರದೇಶ ಸರ್ಕಾರ

Janaa Akrosha News Desk.

ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತತೆ ಮೆರೆದ ಜಾತಿವಾದಿ ಕ್ರೂರಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕಡು ಕ್ರೂರ ಘಟನೆಗೆ ಸಂಬಂಧಿಸಿದಂತೆ ಮಧ್ಯೆ ಪ್ರದೇಶ ಸರ್ಕಾರದ ಮುಖ್ಯಮಂತ್ರಿಗಳು ಶಿವರಾಜ್ ಸಿಂಗ್ ಚವ್ಹಾಣ್  ಸಂತ್ರಸ್ತ ವ್ಯಕ್ತಿ ದಶಮತ್ ರಾವತ್ ಅವರಿಗೆ ಪಾದಪೂಜೆ ಮಾಡುವ ಮೂಲಕ ಸರ್ಕಾರದ ವತಿಯಿಂದ ಕ್ಷಮೆ ಯಾಚಿಸಿದ್ದಾರೆ. ಘಟನೆಯ ನಂತರ ರಾವತ್ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಪಾದ ಪೂಜೆ ಮಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ಜನರು ನನಗೆ ದೇವರಿದ್ದಂತೆ, ವೈರಲ್ ಆದ ವಿಡಿಯೋ ನೋಡಿ ನನಗೆ ಅತೀವ ನೋವಾಗಿತ್ತು. ಅದಕ್ಕಾಗಿ ನಾನು ನಿಮ್ಮ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಅವರು ಆ ಸಂದರ್ಬದಲ್ಲಿ ಸಂತ್ರಸ್ತ ವ್ಯಕ್ತಿಗೆ ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಜಾತಿವಾದಿ ವಿಕೃತನನ್ನು ನಿನ್ನೆ ಪೋಲೀಸರು ಬಂಧಿಸಿದ್ದಾರೆ. ಈ ಘಟನೆ ಮೇಲ್ಜಾತಿಗಳ ಜನರ ವಿಕೃತಿಯನ್ನು ಪ್ರದರ್ಶಿಸುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಇಂತಹ ಘಟನೆಗಳು ಪುನಾರಾವರ್ತಿತವಾಗುತ್ತಿವೆ. ಈ ಘಟನೆಗಳಿಗೆ ಕಾನೂನಿನ ನಿರ್ಲಕ್ಷ್ಯವೇ ಕಾರಣ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಜಾಗೃತವಹಿಸಬೇಕು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನ ಆಕ್ರೋಶ ಪತ್ರಿಕೆಯ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕನ್ನು ಒತ್ತಿರಿ. ಮತ್ತು ಜನ ಆಕ್ರೋಶದ ಸುದ್ದಿ ಹಾಗು ಲೇಖನಗಳನ್ನು ಓದಲು 9845968164 ನಂಬರನ್ನು ನಿಮ್ಮ ನಿಮ್ಮ ಗ್ರೂಪುಗಳಿಗೆ ಸೇರಿಸಿಕೊಳ್ಳಿ.

ವಾಟ್ಸಪ್ ಲಿಂಕ್: https://chat.whatsapp.com/GpPwHbdweyc5WjrHhHtf4n

Google  News WhatsApp Telegram Facebook
HTML smaller font

.

.