ಋತುಚಕ್ರ ನೈಸರ್ಗಿಕ ಪ್ರಕ್ರಿಯೆ, ಮುಜುಗರ ಬೇಡ, ಶುಚಿತ್ವದ ಅರಿವು : ಸಿಇಒ ಗರಿಮಾ ಪನ್ವಾರ್

Sep 3, 2023 - 10:16
 0  54

Google  News WhatsApp Telegram Facebook

ಋತುಚಕ್ರ ನೈಸರ್ಗಿಕ ಪ್ರಕ್ರಿಯೆ, ಮುಜುಗರ ಬೇಡ, ಶುಚಿತ್ವದ ಅರಿವು : ಸಿಇಒ ಗರಿಮಾ ಪನ್ವಾರ್

Janaa Akrosha News Desk.

ಋತುಚಕ್ರ ನೈಸರ್ಗಿಕ ಪ್ರಕ್ರಿಯೆ, ಮುಜುಗರ ಬೇಡ, ಶುಚಿತ್ವದ ಅರಿವು : ಸಿಇಒ ಗರಿಮಾ ಪನ್ವಾರ್

ಮಹಿಳೆಯರ ಆರೋಗ್ಯ ಮತ್ತು ಸುಸ್ಥಿರ ಮುಟ್ಟು ಅರಿವು ಕಾರ್ಯಕ್ರಮ

ಯಾದಗಿರಿ :ಸೆಪ್ಟೆಂಬರ್, 02  : ಋತುಚಕ್ರ ಮಹಿಳೆಯರಿಗೆ ಒಂದು ಸಹಜ ಪ್ರಕ್ರಿಯೆಯಾಗಿದ್ದು, ಆ ದಿನಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಗರಿಮಾ ಪನ್ವಾರ್ ಅವರು ಹೇಳಿದರು.

 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಯುನಿಸೆಫ್ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಸ್ಥಿರ ಮುಟ್ಟಿನ ನಿರ್ವಹಣೆ ಕುರಿತು ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

 ಮುಟ್ಟಿನ ಕುರಿತು ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಈ ಕಾರ್ಯಕ್ರಮ ಮೂಲಕ ಎಲ್ಲರೂ ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

 ಋತುಚಕ್ರದ ದಿನಗಳಲ್ಲಿ ಆಗುವ ದೈಹಿಕ ಆರೋಗ್ಯದ ಏರುಪೇರು, ಮಾನಸಿಕ ಸ್ಥಿತಿಯ ಏರುಪೇರನ್ನು ಸಂಭಾಳಿಸುವುದು ತೀರ ಸುಲಭದ ಮಾತಲ್ಲ. ಆದರೆ ನೆನಪಿರಲಿ ಮುಟ್ಟಿನ ದಿನಗಳ ಅನೈರ್ಮಲ್ಯ ಅದೆಷ್ಟೋ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮುಜುಗರ ಬೇಡ. ಆ ದಿನಗಳಲ್ಲಿ ಮಹಿಳೆಯರು ತಮ್ಮ ಅವಶ್ಯಕತೆಯನ್ನು ನಾಚಿಕೆ ಬಿಟ್ಟು ಹೇಳಿಕೊಳ್ಳಬೇಕು. ಮಹಿಳೆಯರ ಋತುಚಕ್ರದ ದಿನಗಳ ಜಾಗೃತಿ. ಅಗತ್ಯ ಇರುವವರಿಗೆ ಸಹಕಾರ ನೀಡಲು ಅದೆಷ್ಟೋ ಎನ್‌ಜಿಒಗಳು ಪ್ರಾರಂಭವಾಗಿವೆ. ಕಡಿಮೆ ಬೆಲೆಯಲ್ಲಿ ಮರುಬಳಕೆ ಮಾಡಬಹುದಾದಂಥ ಸ್ಯಾನಿಟರಿ ಪ್ಯಾಡ್, ಕಪ್‌ಗಳನ್ನು ತಯಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಅವರು ನುಡಿದರು.

 ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶೋಭಾರಾಣಿ ಅವರು ಉಪನ್ಯಾಸ ನೀಡಿ, ಮುಟ್ಟಿನ ಹಲವು ಉತ್ಪನ್ನಗಳು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ಗಳು ಮತ್ತು ರಾಸಾಯನಿಕಗಳನ್ನು ಹೊಂದಿರುತ್ತವೆ. ಅವು ಕಸದಲ್ಲಿ ಹಾಕಿದಾಗ ಅವುಗಳನ್ನು ಹಸುಗಳು ತಿನ್ನುತ್ತವೆ. ಆನಂತರ ಹಾಲಿನ ಮುಖಾಂತರ ನಾವೇ ಸೇವಿಸುವ ಪರಿಸ್ಥಿತಿ ಬರುತ್ತದೆ. ಮಣ್ಣಿನಲ್ಲಿಯೂ ಸಹ ಕೊಳೆಯುದಿಲ್ಲ. ಹೀಗಿರುವಾಗ ಬಳಸಿದನ್ನು ನಾವೇ ಮುಟ್ಟಲು ಹೇಸಿಗೆ ಪಟ್ಟು ರಸ್ತೆಗೆ ಎಸೆದಾಗ ಅದನ್ನು ಸ್ವಚ್ಚ ಮಾಡುವವರು ಮುಟ್ಟುತ್ತಾರೆಯೇ ಎಂದು ನಾವೇ ಅರಿತುಕೊಂಡು ಪರಿಸರದ ಮೇಲೆ ಪರಿಣಾಮ ಬೀರದ ಉತ್ಪನ್ನಗಳನ್ನು ಬಳಸಬೇಕು ಎಂದು ಅವರು ನುಡಿದರು.

 ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಡಾ.ಮೀನಾಕ್ಷಿ ಭರತ್‌ಮಾತನಾಡಿ, ಋತುಚಕ್ರ ಸಮಯದಲ್ಲಿ ಸಂಬAಧಿಸಿದ ಹಾರ್ಮೋನಿನ ಬದಲಾವಣೆಗಳು ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳನ್ನು ಉಂಟುಮಾಡಬಹುದು, ನೋವು, ತಲೆನೋವು ಮತ್ತು ಸ್ನಾಯು ನೋವಿನಿಂದ ಹಿಡಿದು ಆತಂಕ ಮತ್ತು ಖಿನ್ನತೆಗೆ ಬರುವುದು ಸಹಜ ಆದರೆ ಅದು ರೋಗವಲ್ಲ, ಖಾಯಿಲೆಯೂ ಅಲ್ಲ ಎಂದು ಜಾಗೃತರಗಬೇಕು


 ಈ ಸಂದರ್ಭದಲ್ಲಿ ಡಿಹೆಚ್‌ಓ ಡಾ.ಪ್ರಭುಲಿಂಗ, ಸ್ವಚ್ಛ ಭಾರತ್ ನೋಡಲ್ ಅಧಿಕಾರಿ ಗುರುನಾಥ ಗೌಡಪ್ಪನವರ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಜಯಾಂಬಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ವಿರಣ್ಣಗೌಡ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು, ಮಹಿಳಾ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆರು, ಎಸ್.ಬಿ.ಎಂ ಸಮಾಲೋಚರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.