ಅತಿವೃಷ್ಟಿ-ಪ್ರವಾಹ ಎದುರಿಸಲು ಸರ್ವ ರೀತಿಯಿಂದ ಅಧಿಕಾರಿಗಳು ಸನ್ನದ್ಧಗೊಳ್ಳಿ: ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲ.ಬಿ

Jul 26, 2023 - 06:33
 0  109

Google  News WhatsApp Telegram Facebook

ಅತಿವೃಷ್ಟಿ-ಪ್ರವಾಹ ಎದುರಿಸಲು ಸರ್ವ ರೀತಿಯಿಂದ ಅಧಿಕಾರಿಗಳು ಸನ್ನದ್ಧಗೊಳ್ಳಿ: ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲ.ಬಿ
ಅತಿವೃಷ್ಟಿ-ಪ್ರವಾಹ ಎದುರಿಸಲು ಸರ್ವ ರೀತಿಯಿಂದ ಅಧಿಕಾರಿಗಳು ಸನ್ನದ್ಧಗೊಳ್ಳಿ: ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲ.ಬಿ

Janaa Akrosha News Desk.

ಅವರು, ಭೀಮಾ ಮತ್ತು ಕೃಷ್ಣ ನದಿ ತೀರಗಳಲ್ಲಿ ಬಾಧಿತವಾಗುವ ಗ್ರಾಮಗಳ ಬಗ್ಗೆ, ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ, ಸಂಭವಿಸಬಹುದಾದ ಮಾನವ ಜೀವಹಾನಿ ಹಾಗೂ ಜಾನುವಾರು ಜೀವಹಾನಿ ತಡೆಯುವ ಬಗ್ಗೆ ಅಧಿಕಾರಿಗಳು ಸೂಕ್ತ ನಿಗಾ ಇಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬAಧಿಸಿದ ಇತರೆ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ ಮುಂದಿನ ದಿನಗಳಲ್ಲಿ ಪ್ರವಾಹ ಬಂದಲ್ಲಿ ಬಾಧಿತವಾಗುವ ಗ್ರಾಮಗಳ, ಸೇತುವೆ,ಅಪಾಯಕಾರಿ ರಸ್ತೆ ಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಫಲಕ ಅಥವಾ ಅಪಾಯ ತೋರಿಸುವ ಚಿಹ್ನೆಗಳನ್ನು ಅಳವಡಿಸಬೇಕು. ತಾಲ್ಲೂಕು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಪ್ರವಾಹ ಎದುರಿಸಲು ಸಕಲ ಸಾಧನ ಸಲಕರಣೆಗಳನ್ನು ಇಟ್ಟುಕೊಳ್ಳುವಂತೆ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

“ಸಾರ್ವಜನಿಕರ ನೆರವಿಗೆ ಸಹಾಯವಾಣಿ”

ಜಿಲ್ಲೆಯ ಸಾರ್ವಜನಿಕರು ಭಾರಿ ಮಳೆಯಿಂದ ಆಗುವ ಅನಾಹುತ ತಪ್ಪಿಸಲು ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಅಥವಾ ಸಂಬAಧಿಸಿದ ತಹಶೀಲ್ದಾರರ ಕಚೇರಿಯ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ಕೋರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ 08473- 253700 ಮತ್ತು 08473-53950, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ದೂ.ಸಂ- 9916195960 ಅಥವಾ 9481939550, ಯಾದಗಿರಿ ತಹಶೀಲ್ದಾರ ಕಚೇರಿ ದೂ.ಸಂ 9902565130 ಅಥವಾ 08473-253611, ಶಹಾಪುರ ತಹಶೀಲ್ದಾರ ಕಚೇರಿ ದೂ.ಸಂ- 9448333545 ಅಥವಾ 08479-243321, ಸುರಪುರ ತಹಶೀಲ್ದಾರ ಕಚೇರಿ ದೂ.ಸಂ- 9035949847 ಅಥವಾ 08443256043, ಗುರುಮಿಠಕಲ್ ತಹಶೀಲ್ದಾರ ಕಚೇರಿ ದೂ.ಸಂ- 9972311030 ಅಥವಾ 8708417957, ವಡಿಗೇರಾ ತಹಶೀಲ್ದಾರ ಕಚೇರಿ ದೂ.ಸಂ- 9663230566 ಅಥವಾ 6360077481, ಹುಣಸಗಿ ತಹಶೀಲ್ದಾರ ಕಚೇರಿ ದೂ.ಸಂ -9535399547 ಅಥವಾ 8904633547 ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪÀಣ್ಣ ಸಜ್ಜನ, ಡಿವೈಎಸ್‌ಪಿ ಬಸವೇಶ್ವರ, ಕೃಷಿ ಜಂಟಿ ನಿರ್ದೇಶಕರು ಅಭೀದ್.ಎಸ್, ವಿದ್ಯುತ್ ಜೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಯಾದಗಿರಿ ನಗರಸಭೆ ಪೌರಾಯುಕ್ತರು ಸಂಗಪ್ಪ ಉಪಾಸೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ತಹಸೀಲ್ದಾರರು, ಉಪಸ್ಥಿತರಿದ್ದರು.  

Google  News WhatsApp Telegram Facebook
HTML smaller font

.

.