ವಾರ್ಡಿಗೊಂದು ಗಣಪತಿ ಕೂಡ್ರಿಸಲು ಆದೇಶ ಮಾಡಿ: ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಆಗ್ರಹ

Sep 1, 2023 - 18:35
 0  190

Google  News WhatsApp Telegram Facebook

ವಾರ್ಡಿಗೊಂದು ಗಣಪತಿ ಕೂಡ್ರಿಸಲು ಆದೇಶ ಮಾಡಿ: ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಆಗ್ರಹ

Janaa Akrosha News Desk.

ಯಾದಗಿರಿ, .- ಗಣೇಶ ಚತುರ್ಥಿ ಪ್ರಯುಕ್ತ ಯಾದಗಿರಿ ನಗರದ ೩೧ ವಾರ್ಡ್ಗಳಲ್ಲಿ ವಾರ್ಡ್ಗೆ ಒಂದರಂತೆ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ಆದೇಶ ಮಾಡುವಂತೆ ಮಾದಿಗ ದಂಡೋರ (ಮಾದಿಗ ರಿಜರ್ವೆಷನ್ ಹೋರಾಟ ಸಮಿತಿ) ಆಗ್ರಹಿಸಿದೆ.

  ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್.ಪಿ. ಅವರಿಗೆ ಪ್ರತ್ಯೇಕ ಮನವಿಗಳು ಸಲ್ಲಿಸಿರುವ ಸಮಿತಿ ತಾಲ್ಲೂಕು ಅಧ್ಯಕ್ಷ ಜಗದೀಶ ಎನ್. ದಾಸನಕೇರಿ ಮಾತನಾಡಿ, ಮುಂದೆ ಬರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಒಂದೊಂದು ವಾರ್ಡಗಳಲ್ಲಿ ಲೆಕ್ಕವಿಲ್ಲದಷ್ಟು ಗಣಪತಿಗಳ ಪ್ರತಿಷ್ಠಾಪನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದು, ಸಾರ್ವಜನಿಕರ ವಾಹನಗಳಿಗೆ ಅಡ್ಡಗಟ್ಟಿ, ಹಣ ವಸೂಲಿ ಮಾಡುವ ಕಾಯಕದಲ್ಲಿ ತೊಡಗಿದ್ದು, ಮತ್ತು ಪ್ರತಿಷ್ಠಾಪನೆ ಮಾಡುವಾಗ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ.

 ಸಂಬಂಧಪಟ್ಟ ನಗರಸಭೆ, ಪೊಲೀಸ್ ಇಲಾಖೆ ಮತ್ತು ಹೋಂ ಗಾರ್ಡ ಸಿಬ್ಬಂದಿಗಳ ಕೊರತೆ ಇದ್ದು. ಆದ ಕಾರಣ ತಾವು ಇದರ ಬಗ್ಗೆ ಆಯಾ ಇಲಾಖೆಗಳ ಜೊತೆ ಸಭೆ ಕರೆದು ಕಟ್ಟುನಿಟ್ಟಿನ ಆದೇಶ ಮಾಡಿ, ಯಾದಗಿರಿ ನಗರದ ೩೧ ವಾರ್ಡ್ಗಳಲ್ಲಿ ವಾರ್ಡ್ಗೆ ಒಂದರAತೆ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ಇದರ ಬಗ್ಗೆ ಕೂಡಾ ತಾವು ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

  ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ಬಸವರಾಜ ಮೇತ್ರಿ, ಅಂಬರೇಶ ಸ್ವಾಮಿ, ಸುಮಿತ್ರಪ್ಪ ಬಳಿಚಕ್ರ, ಎಚ್.ಆರ್. ಶಿವಮೂರ್ತಿ, ನಾಗರಾಜ ಮ್ಯಾಗೇರಿ, ಜಯವಂತ ನಾಯ್ಕಲ್, ಸಿದ್ದಪ್ಪ ಮುಷ್ಟೂರು, ಚೆನ್ನಬಸವ ಬೆಳಗೇರಿ ಇನ್ನಿತರರು ಇದ್ದರು.

Google  News WhatsApp Telegram Facebook
HTML smaller font

.

.