ಮದ್ಯದ ಅಮಲಿನಲ್ಲಿ ಲೈಂಗಿಕ ಸಮ್ಮತಿ ನೀಡಿದರೆ ಅದು ಒಪ್ಪಿತ ಲೈಂಗಿಕ ಸಂಪರ್ಕವಲ್ಲ-ಕೇರಳಾ ಹೈಕೋರ್ಟ್

Aug 9, 2023 - 16:56
 0  42

Google  News WhatsApp Telegram Facebook

ಮದ್ಯದ ಅಮಲಿನಲ್ಲಿ ಲೈಂಗಿಕ ಸಮ್ಮತಿ ನೀಡಿದರೆ ಅದು ಒಪ್ಪಿತ ಲೈಂಗಿಕ  ಸಂಪರ್ಕವಲ್ಲ-ಕೇರಳಾ ಹೈಕೋರ್ಟ್

Janaa Akrosha News Desk.

ಕೊಚ್ಚಿ: ಅರೆಪ್ರಜ್ಞಾವಸ್ಥೆಯಲ್ಲಿರುವ ಹುಡುಗಿ ತನ್ನ ಪ್ರಿಯಕರ ನೀಡಿದ ಮದ್ಯಪಾನ ಸೇವಿಸಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದರೆ ಅದನ್ನು ಸಮ್ಮತಿಯ ಲೈಂಗಿಕ ಸಂಪರ್ಕ ಎಂದು ಪರಿಗಣಿಸಲಾಗುವುದಿಲ್ಲ ಎಂದು  ಕೇರಳ ಹೈಕೋರ್ಟ್ ಹೇಳಿದೆ


ಕಾಲೇಜಿನಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಹಿರಿಯ ವಿದ್ಯಾರ್ಥಿಗೆ ಎರ್ನಾಕುಲಂನ ಎಸ್ಸಿ/ಎಸ್ಟಿ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದನ್ನು ಹೈಕೋರ್ಟ್ಎತ್ತಿಹಿಡಿದಿದೆ.


ನವೆಂಬರ್ 18, 2022 ರಂದು, ಆರೋಪಿಯು ವಿದ್ಯಾರ್ಥಿನಿಯನ್ನು ಗ್ರಂಥಾಲಯಕ್ಕೆ ಕರೆಸಿದ್ದ. ವೇಳೆ ಆತ ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ. ಧೂಮಪಾನ ಮಾಡಲು ವಿದ್ಯಾರ್ಥಿನಿ ನಿರಾಕರಿಸಿದ್ದರಿಂದ ಆರೋಪಿಯು ಆಕೆಗೆ ಕೇಕ್ ಮತ್ತು ನೀರು ಕೊಟ್ಟಿದ್ದಾನೆ. ಇದನ್ನು ತಿಂದ ನಂತರ ನನ್ನ ದೃಷ್ಟಿ ಮಸುಕಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ.


ನಂತರ ವಿದ್ಯಾರ್ಥಿನಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗಲೇ ಕಾಲೇಜಿನ ಮೇಲಿನ ಮಹಡಿಗೆ ಕರೆತಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಡಿಸೆಂಬರ್ 7ರವರೆಗೆ ಹಲವು ಬಾರಿ ಬೆದರಿಕೆ ಹಾಕಿ ಆಕೆಯ ಮೇಲೆ ಪುನಃ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಕಾಲೇಜು ಓದುತ್ತಿರುವಾಗ ಪ್ರೀತಿಸುತ್ತಿದ್ದು, ನಂತರ ಸಂಬಂಧ ಹಳಸಿದಾಗ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ವಾದಿಸಿದ್ದ.


ಪ್ರಕರಣ ಸಂಬಂಧ ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವೇಳೆ ಲೈಂಗಿಕ ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು ಎಂದು ಆರೋಪಿಗಳು ವಾದಿಸಿದರು. ಆದರೆ, ಆರೋಪಿ ನೀಡಿದ ಪಾನೀಯ ಸೇವಿಸಿದ ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಕಾರಣ ತಿಳಿದೂ ಆಕೆ ಒಪ್ಪಿಗೆ ನೀಡಿದ್ದಾಳೆ ಎಂದು ಭಾವಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ನ್ಯಾಯಾಲಯವು ಪ್ರಾಥಮಿಕ ಹಂತದ ಪ್ರಾಸಿಕ್ಯೂಷನ್ ಪ್ರಕರಣವು ಸರಿಯಾಗಿದೆ. ಮತ್ತು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೆಳ ನ್ಯಾಯಾಲಯದ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿತು.


ಸಾರಾಂಶ: ಅರೆಪ್ರಜ್ಞಾವಸ್ಥೆಯಲ್ಲಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ನೀಡುವುದನ್ನು ಒಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಮಾದಕ ಪಾನೀಯ ನೀಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಹಿರಿಯ ವಿದ್ಯಾರ್ಥಿಯ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

 

Google  News WhatsApp Telegram Facebook
HTML smaller font

.

.