ರಾಜ್ಯ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿ ಹೈಕ ಭಾಗದಿಂದ ಸಿದ್ಧರಾಮ ಹೊನ್ಕಲ್

Sep 22, 2023 - 08:29
 0  78

Google  News WhatsApp Telegram Facebook

ರಾಜ್ಯ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿ ಹೈಕ ಭಾಗದಿಂದ ಸಿದ್ಧರಾಮ ಹೊನ್ಕಲ್

Janaa Akrosha News Desk.

ಕಿರು ಪರಿಚಯ
-----------------
ಹೆಸರು:-ಸಿದ್ಧರಾಮ ಹೊನ್ಕಲ್,
ಯಾದಗಿರಿ ಜಿಲ್ಲೆಯ ಶಹಾಪುರದವರು.
ವಿದ್ಯಾರ್ಹತೆ:-ಎಂ.ಎ,ಎಲ್ಎಲ್.ಬಿ; 
ಪಿಜಿ ಜರ್ನಾಲಿಸಂ ಮತ್ತು ಮಾಸ್ ಕಮುನಿಕೇಷನ್, ಹಾಗೂ ಆರೋಗ್ಯ ಶಿಕ್ಷಣ ಹಾಗೂ ನ್ಯೂಟ್ರಿಷನ್ ದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಉದ್ಯೋಗ:-ಸಮಾಜಶಾಸ್ತ್ರ ಬೋಧಕರು, ಫೋನ ನಂ.೯೯೪೫೯೨೨೧೫೧.
*ಪ್ರಕಟಿತ ಕೃತಿಗಳು- ಒಟ್ಟು 60 ಕೃತಿಗಳು* 
ಕವನ ಸಂಕಲನ- ೭, ಗಜಲ್ ಸಂಕಲನ-೫, ಕಥಾ ಸಂಕಲನ-೪,ಹೈಕು ಸಂಕಲನ-೧, ಶಾಯಿರಿ-೧, ವಿಮರ್ಶೆ-೧, ಪ್ರವಾಸಕಥನ-೬, ಲಲಿತ ಪ್ರಬಂಧ-೫,ಜೀವನ ಕಥನ-೫,ಶರಣ ಸಾಹಿತ್ಯ -೨, ಹೊನ್ನುಡಿಗಳು-೨, ಇತರೆ ಸಂಪಾದನೆ ಹಾಗೂ ಇತರೆ ಸೇರಿ-೨೨.
*ದೊರೆತ ಪ್ರಶಸ್ತಿ ಪುರಸ್ಕಾರಗಳು:-*
 ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996.ಪಂಚನದಿಗಳ ನಾಡಿನಲ್ಲಿ ಪ್ರವಾಸ ಕೃತಿಗೆ.ಗುಲ್ಬರ್ಗಾ ವಿವಿ ಚಿನ್ನದ ಪದಕ ಕಥೆಗಳಿಗೆ-1991.ರಾಜ್ಯೋತ್ಸವ ಪುರಸ್ಕಾರ ಗುಲ್ಬರ್ಗ ವಿವಿ-2002 ಮತ್ತು 2006, 2019,ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಕೃತಿ.ನೆಲದ ಮರೆಯ ನಿಧಾನ ಕಥಾ ಸಂಕಲನಕ್ಕೆ, ಮೂರು ದೇಶ ನೂರೊಂದು ಅನುಭವ, ಸಂಕ್ರಮಣ ಸಾಹಿತ್ಯ ಪುರಸ್ಕಾರ-ಕಾವ್ಯ ಹಾಗೂ ಲಲಿತ ಪ್ರಬಂಧಕ್ಕೆ, ಶ್ರೀ ವಿಜಯ ಪುರಸ್ಕಾರ,ಅತ್ತಿಮಬ್ಬೆ ಪುರಸ್ಕಾರ ಗಾಂಧೀಯ ನಾಡಿನಲ್ಲಿ ಪ್ರವಾಸ ಕೃತಿಗೆ.ಹೀಗೆ ೫0 ಕಿಂತಲೂ ಹೆಚ್ಚು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ.
ಇವರ ಒಟ್ಟು ಸಾಹಿತ್ಯದ ಮೇಲೆ ಡಾಕ್ಟರೇಟ್ ಡಾ.ರೇವತಿ ಶಿರನಾಳ ಪಡೆದಿದ್ದಾರೆ.ಗುಲ್ಬರ್ಗಾ ವಿವಿ ಯಿಂದ -೨೦೧೮ ರಲ್ಲಿ, ಇವರ ಕಥೆಗಳ ಮೇಲೆ ಎಂ.ಫಿಲ್ ಪುರಸ್ಕಾರ- ಡಾ.ಮಾನಯ್ಯ ಗೋನಾಲ್ ಗುಬವಿವಿ ಯಿಂದ ಪಡೆದಿದ್ದಾರೆ. ಇವರ ಲಲಿತ ಪ್ರಬಂಧ, ಪ್ರವಾಸ ಕಥನಗಳ ಮೇಲೆ ಅನೇಕ ವಿವಿಗಳಲ್ಲಿ ಕಿರು ಪ್ರಬಂಧ ಸಂಶೋಧಕರು ಮಂಡಿಸಿದ್ದಾರೆ. ಇವರ ಪಂಚ ನದಿಗಳ ನಾಡಿನಲ್ಲಿ, ಗಾಂಧೀಜಿಯ ನಾಡಿನಲ್ಲಿ, ಪರದೆ ಸರಿಯುವ ಮುನ್ನ, ಕಾಡು, ಬಯಲಾಟದ ಸುತ್ತ ಮುತ್ತ, ಮೂರು ದೇಶ ನೂರೊಂದು ಅನುಭವ, ಹೊಸದಿಕ್ಕಿನೆಡೆಗೆ.. ಮುತ್ತಂತಹ ಮುತ್ತು ಕಥೆ, ಹೀಗೆ ಅನೇಕ ಬರಹಗಳು, ಕೃತಿಗಳು ಗುಲ್ಬರ್ಗ ವಿ.ವಿ; ಕೃಷ್ಣದೇವರಾಯ ವಿ.ವಿ. , ಸೋಲಾಪುರ ವಿವಿ, ಕೋಲ್ಹಾಪುರ ವಿವಿ, ಅಕ್ಕಮಹಾದೇವಿ ಮಹಿಳಾ ವಿವಿ, ಇತರೆಡೆಗಳಲ್ಲಿ ಪಠ್ಯವಾಗಿ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಭೋದಿಸಲ್ಪಟ್ಟಿವೆ. ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯಮಟ್ಟದ ಕವಿಗೋಷ್ಠಿ, ಭಾಗವಹಿಸಿ ಪ್ರಬಂಧ ಮಂಡನೆ ಹಾಗೂ ಕವಿತೆ ಓದಲಾಗಿದೆ.ನೂರಾರು ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉದ್ಘಾಟನೆ, ಮುಖ್ಯ ಅತಿಥಿಯಾಗಿ, ಉಪನ್ಯಾಸಕನಾಗಿ ಭಾಗವಹಿಸಲಾಗಿದೆ. ಗಜಲ್ ಕಾವ್ಯ ಇವರ ಮೆಚ್ಚಿನ ಪ್ರಕಾರ.
ಶಹಾಪುರ ಕಸಾಪದ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ,ಕಸಾಪ ಯಾದಗಿರಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿವೆ. ಯಾದಗಿರಿ ಜಿಲ್ಲೆಯ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಸಂದಿದೆ. ಇತ್ತೀಚೆಗೆ ೧೦ ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ ಹಾಗೂ ಸಾಂಸ್ಕೃತಿಕ ಪ್ರತಿಭೋತ್ಸವ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ದೊರೆತಿದೆ. ಅದು ೩-೧೧-೨೦೨೨ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.ಇದೀಗ ಗಜಲ್ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕದ ಮೂಲಕ ನಾಡಿನಾದ್ಯಂತ ಹೆಸರು ಮಾಡಿದ್ದಾರೆ.ಇವರ ಪ್ರಕಟಿತ ಎಲ್ಲಾ ಗಜಲ್ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಸಂದಿರುವುದು ವಿಶೇಷ.ಇತ್ತೀಚಿಗೆ ಕಲ್ಯಾಣ ಕರ್ನಾಟಕ ಪ್ರಥಮ ಉತ್ಸವದ ಗಜಲ್ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
Google  News WhatsApp Telegram Facebook
HTML smaller font

.

.