ಕರ್ನಾಟಕ ಸರ್ಕಾರಿ ನೌಕರರ ವಿಶೇಷ ಮಹಾಸಭೆ

Sep 16, 2023 - 17:42
 0  63

Google  News WhatsApp Telegram Facebook

ಕರ್ನಾಟಕ ಸರ್ಕಾರಿ ನೌಕರರ ವಿಶೇಷ ಮಹಾಸಭೆ

Janaa Akrosha News Desk.

ಕರ್ನಾಟಕ ಸರ್ಕಾರಿ ನೌಕರರ ವಿಶೇಷ ಮಹಾಸಭೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನ ವನ ಇದರ 2022ರ ಉಪ ವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದ್ದು ಈ ಕುರಿತು ಸರ್ವ ಸದಸ್ಯರ  ವಿಶೇಷ ಮಹಾ ಸಭೆಯನ್ನು ವಿಷಯದ ಸೂಚಿಯ ಅನ್ವಯ ಏರ್ಪಡಿಸಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಯಾದಗಿರಿಯ ಸರ್ವ ಸದಸ್ಯರಿಗೆ ದಿನಾಂಕ: 01-10-2023 ರಂದು ಭಾನುವಾರ ಬೆಳಿಗ್ಗೆ 11 ಗಂಟೆಯ ಸಮಯಕ್ಕೆ ಸರ್ವ ಸದಸ್ಯರ ವಿಶೇಷ ಮಹಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು  ಪತ್ರಿಕಾ ಪ್ರಕಟಣೆಯನ್ನು ಯಾದಗಿರಿ ಜಿಲ್ಲೆಯ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಹಿಪಾಲರಡ್ಡಿ ಮಾಲಿ ಪಾಟೀಲರು ಹೊರಡಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಈ ಸಭೆಯನ್ನು ಮಹಾವೀರ ಸಮುದಾಯ ಹಿರೇಸಿಂದೋಗಿ ರಸ್ತೆ ಗೋ ಶಾಲೆಯ ಹತ್ತಿರ ಕೊಪ್ಪಳದಲ್ಲಿ ಶ್ರೀ ಸಿ. ಎಸ್. ಷಡಕ್ಷರಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಸಭೆಯನ್ನು ವಾಸ್ತವ/ವರ್ಚುಯಲ್ ವಿಧಾನದ ಮೂಲಕ ಆಯೋಜಿಸಲಾಗಿದ್ದು ಸರ್ವ ಸದಸ್ಯರು ನೇರವಾಗಿ ಅಥವಾ ವರ್ಚುಯಲ್ ವಿಧಾನದ ಮೂಲಕ ಭಾಗವಹಿಸಬಹದು ಎಂದು ಕೋರಲಾಗಿದೆ. ವರ್ಚುಯಲ್ ಲಿಂಕ್ : https://bit.ly/ksgeasplgbm ಜಿಲ್ಲೆಯ ಎಲ್ಲಾ ಸದಸ್ಯರು ಭಾವಹಿಸುವ ಮೂಲಕ ಈ ವಿಶೇಷ ಮಹಾ ಸಭೆಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

Google  News WhatsApp Telegram Facebook
HTML smaller font

.

.