ಶಂಕಿತ ಉಗ್ರರಿಗೆ ಶಸ್ತ್ರಾಸ್ತ್ರ ನೀಡಿದ್ದ ಆರೋಪಿ ವಿದೇಶಕ್ಕೆ ಪರಾರಿ

Jul 29, 2023 - 10:17
Jul 29, 2023 - 10:33
 0  52

Google  News WhatsApp Telegram Facebook

ಶಂಕಿತ ಉಗ್ರರಿಗೆ ಶಸ್ತ್ರಾಸ್ತ್ರ ನೀಡಿದ್ದ ಆರೋಪಿ ವಿದೇಶಕ್ಕೆ ಪರಾರಿ

Janaa Akrosha News Desk.

ಬೆಂಗಳೂರು,ಜು. 28- ಶಂಕಿತ ಐವರು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ತಂದುಕೊಡುತ್ತಿದ್ದ ವ್ಯಕ್ತಿ ವಿದೇಶಕ್ಕೆ ಪರಾರಿಯಾಗಿರುವುದು ಸಿಸಿಬಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಆರ್‍ಟಿ ನಗರದ ಮನೆಯೊಂದರಲ್ಲಿ ಶಂಕಿತ ಐವರು ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಕಂಟ್ರಿಮೇಡ್ ಪಿಸ್ತೂಲ್‍ಗಳು, ಜೀವಂತ ಗುಂಡುಗಳು ಮೊಬೈಲ್‍ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಈ ಶಸ್ತ್ರಾಸ್ತ್ರಗಳನ್ನು ಇವರಿಗೆ ಯಾರು ತಂದುಕೊಡುತ್ತಿದ್ದಾನೆಂಬ ಬಗ್ಗೆ ತನಿಖೆ ಕೈಗೊಂಡಾಗ ಸಲ್ಮಾನ್ ಎಂಬ ವ್ಯಕ್ತಿ ಪೂರೈಸುತ್ತಿದ್ದುದ್ದು ಗೊತ್ತಾಗಿದೆ. ಈತ ಈಗಾಗಲೇ ದುಬೈನಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜುನೈದ್ ಅಣತಿಯಂತೆ ಶಂಕಿತ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿರುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ.

ಶಸ್ತ್ರಾಸ್ತ್ರಗಳನ್ನು ರೈಲಿನಲ್ಲಿ ಕಳ್ಳ ಸಾಗಣಿಕೆ ಮಾಡಿಕೊಂಡು ಯಶವಂತಪುರದ ರೈಲ್ವೆ ನಿಲ್ದಾಣಕ್ಕೆ ಬಂದು ನಂತರ ಟಿ. ಬೇಗೂರು ಬಳಿ ನಾಡಪಿಸ್ತೂಲು, ಜೀವಂತ ಗುಂಡುಗಳನ್ನು ಕೊಟ್ಟು ಹೋಗಿರುವುದು ಗೊತ್ತಾಗಿದೆ.

ಶಸ್ತ್ರಾಸ್ತ್ರಗಳನ್ನು ಈ ಶಂಕಿತ ಉಗ್ರರಿಗೆ ಕೊಟ್ಟ ನಂತರ ಆರೋಪಿ ಸಲ್ಮಾನ್ ನೇಪಾಳದ ಮೂಲಕ ವಿದೇಶಕ್ಕೆ ಪರಾರಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಸಿಸಿಬಿ ಪೊಲೀಸರು ಈಗ ಆತನ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.

40ಕ್ಕೂ ಹೆಚ್ಚು ಖಾತೆಗಳ ಪರಿಶೀಲನೆ:

ಐವರು ಶಂಕಿತ ಉಗ್ರರನ್ನು ಬಂಧಿಸಿದ ನಂತರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಾಗ ಇವರಿಗೆ ವಿದೇಶದಿಂದ ಹಣ ಬರುತ್ತಿರುವುದನ್ನು ಪತ್ತೆ ಹಚ್ಚಿ ಯಾವ ಯಾವ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲು ಆರೋಪಿಗಳು ಹಾಗೂ ಅವರ ಕುಟುಂಬದವರಿಗೆ ಸಂಬಂಧಪಟ್ಟ 40ಕ್ಕೂ ಹೆಚ್ಚು ಖಾತೆಗಳನ್ನು ಪರಿಶೀಲಿಸಿದ್ದಾರೆ.

ಆರೋಪಿಗಳಿಗೆ ಎಷ್ಟು ಹಣ ಬಂದಿದೆ. ಯಾವ ಮೂಲದಿಂದ ಬಂದಿದೆ. ಹಣ ಬಂದ ನಂತರ ಆರೋಪಿಗಳು ಯಾರ್ಯಾರಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆ ಹಾಕುತ್ತಿದ್ದಾರೆ.

Google  News WhatsApp Telegram Facebook
HTML smaller font

.

.