ಮತ್ತೆ ಗಗನಕ್ಕೇರಿದ ಟೊಮೊಟೋ, ಇನ್ನು ಟೊಮೊಟೋ ಸಾಂಬಾರ್ ಕನಸು ಮಾತ್ರ!

Jul 29, 2023 - 11:21
 0  37

Google  News WhatsApp Telegram Facebook

ಮತ್ತೆ ಗಗನಕ್ಕೇರಿದ ಟೊಮೊಟೋ, ಇನ್ನು ಟೊಮೊಟೋ ಸಾಂಬಾರ್ ಕನಸು ಮಾತ್ರ!

Janaa Akrosha News Desk.

ಬೆಂಗಳೂರು,ಜು.28- ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಮತ್ತೊಮ್ಮೆ ದರ ಏರಿಕೆ ಶಾಕ್ ಉಂಟಾಗಿದೆ. ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಏಪ್ರಿಲ್-ಮೇನಲ್ಲಿ ಸುಡುವ ಬೇಸಿಗೆಯಿಂದ ಬೆಳೆ ಹಾನಿಯಾಗಿದ್ದು, ಈಗ ಭಾರೀ ಮಳೆಯಾಗುತ್ತಿದೆ. ಇದರಿಂದ ಟೊಮ್ಯಾಟೋ ಉತ್ಪಾದನೆಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ 81,000 ಹೆಕ್ಟೇರ್ ಭೂಮಿಯಲ್ಲಿ ಟೊಮ್ಯಾಟೋ ಬೆಳೆಯಲಾಗುತ್ತದೆ. ಪೈಕಿ ಹೆಚ್ಚಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ.

ಹವಾಮಾನ ವೈಪರೀತ್ಯದಿಂದ ರಾಜ್ಯದಾದ್ಯಂತ ಶೇ.70ರಷ್ಟು ಟೊಮ್ಯಾಟೋ ಬೆಳೆಗೆ ಹಾನಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಅತಿಯಾದ ಬಿಸಿಲು ಮತ್ತು ಮಳೆ ಮತ್ತು ಕೀಟಗಳಿಂದ ಅಪಾರ ನಷ್ಟ ಎದುರಿಸುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ 6,000 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಸಸಿಗಳನ್ನು ನಾಟಿ ಮಾಡಲಾಗಿದೆ. ಕೆಲವೇ ವಾರಗಳಲ್ಲಿ ಫಸಲು ಕೊಯ್ಲಿಗೆ ಬರಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
25,000
ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ, ಹೆಚ್ಚು ಮಳೆ ಯಾದರೆ ಬೆಳೆ ಹಾನಿಯಾಗುವ ಸಂಭವವಿದೆ.

ಖಾರಿಫ್ ಬಿತ್ತನೆ ಜೂನ್ ಎರಡನೇ ವಾರದಲ್ಲಿ ಕೊನೆಗೊಂಡಿದೆ ಮತ್ತು ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಟೊಮ್ಯಾಟೋ ಕೊಯ್ಲಿಗೆ ಸಿದ್ಧವಾಗಲಿದೆ. ಇದು ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಗ್ರಾಹಕರಲ್ಲಿದೆ.

ಟೊಮ್ಯಾಟೋ ಗುಣಮಟ್ಟವನ್ನು ಅವಲಂಬಿಸಿ ಬೆಲೆಗಳು ಇರುತ್ತವೆ. ಒಂದು ಕ್ವಿಂಟಾಲ್ ಉತ್ತಮ ಗುಣಮಟ್ಟದ ಟೊಮೊಟೊ 7 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಟೊಮೇಟೊ ಕೆಜಿಗೆ 100 ರಿಂದ 120 ರೂ.ಗೆ ಮಾರಾಟ ಮಾಡಲಾಗುತ್ತದೆ. ಈಗ, ಮುಂಗಾರು ಮಳೆಯಿಂದಾಗಿ ಆಗಸ್ಟ್‍ನಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಕಳೆದ ಮೂರು ಋತುಗಳಲ್ಲಿ ರಸಗೊಬ್ಬರಗಳನ್ನು ಹೆಚ್ಚು ಬಳಸಿದ್ದರಿಂದ ಬೆಳೆಗಳಿಗೆ ಕೀಟ ಬಾಧೆ ಉಂಟಾಗಿದೆ. ಬಿಳಿ ನೊಣಗಳು ಸಸ್ಯಗಳನ್ನು ಹಾನಿಗೊಳಿಸಿವೆ. ರಸಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನಲ್ಲಿ ಇಂಗಾಲದ ನಷ್ಟದಿಂದಾಗಿ, ಸಸ್ಯಗಳು ನೊಣಗಳಿಂದ ಉಂಟಾಗುವ ಸೋಂಕನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಸದ್ಯ 0.5% ಕಾರ್ಬನ್ ಮಣ್ಣಿನಲ್ಲಿ ಇದೆ. ಮಣ್ಣಿನಲ್ಲಿ ಕನಿಷ್ಠ 1% ಕಾರ್ಬನ್ ಇರಬೇಕು.

ಕಳಪೆ ಇಂಗಾಲದ ಕಾರಣದಿಂದಾಗಿ ಬಿಳಿ ನೊಣಗಳು ಸಸ್ಯಗಳ ಮೇಲೆ ದಾಳಿ ಮಾಡುತ್ತವೆ. ಇದರ ಪರಿಣಾಮವಾಗಿ ಹೂವುಗಳು ಒಣಗುತ್ತವೆ ಮತ್ತು ಹಣ್ಣುಗಳ ಗುಣಮಟ್ಟ ಕಳಪೆಯಾಗಿದೆ.

Google  News WhatsApp Telegram Facebook
HTML smaller font

.

.