ವಾರ್ಡನ್ ಗೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ: ದಸಂಸ ಆಗ್ರಹ

Sep 7, 2023 - 12:22
 0  150

Google  News WhatsApp Telegram Facebook

ವಾರ್ಡನ್ ಗೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ: ದಸಂಸ ಆಗ್ರಹ

Janaa Akrosha News Desk.

ವಾರ್ಡನ್ ಗೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿ: ದಸಂಸ ಆಗ್ರಹ

ಯಾದಗಿರಿ, ಸೆ. ೬- ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ವಾರ್ಡನ್ ಶ್ರೀಮತಿ ಶಾಂತಮ್ಮ ಇದರನ್ನು ಕೂಡಲೇ ವರ್ಗಾವಣೆ ಮಾಡುವಂತೆ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ಆಗ್ರಹಿಸಿದೆ.

ಈ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಡೆ ಅಧಿಕಾರಿಗಳಿಗೆ ಪ್ರತ್ಯೇಕ ಮನವಿಗಳು ಸಲ್ಲಿಸಿದ ಸಮಿತಿ, ಶ್ರೀಮತಿ ಶಾಂತಮ್ಮ ವಾರ್ಡನ್ ಇವರು ಯಾದಗಿರಿ ಹುದ್ದೆಗೆ ಬಂದ ದಿನದಿಂದ ಇಲ್ಲಿಯವರೆಗೆ ಇಲಾಖೆಯ ಹಾಗೂ ವಸತಿ ನಿಲಯಗಳ ವಾತಾವರಣ ಕೆಡಿಸಿ ಬಿಟ್ಟಿದ್ದಾರೆ: ತಮಗೆ ಜವಾಬ್ದಾರಿ ವಹಿಸಿರುವ ವಸತಿ ನಿಲಯಗಳಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ದಿನಾಲೂ ವಸತಿ ನಿಲಯಕ್ಕೆ ಹೋಗುವುದಿಲ್ಲ. ವಿದ್ಯಾರ್ಥಿಗಳ ಜೊತೆ ಅನುಚಿತವಾಗಿ ವರ್ತಿಸುವುದು ಅವಾಚ್ಯ ಶಬ್ದಗಳಿಂದ ಬೈಯುವುದು ಮೇನು ಚಲನ್ ಪ್ರಕಾರ, ಊಟ ಕೊಡದೆ ಇರುವುದು, ಹಾಸ್ಟೆಲ್‌ಗಳನ್ನು ಸ್ವಚ್ಛ ಇಡದೆ ಇರುವುದು ಶೌಚಾಲಯಗಳ ಸ್ವಚ್ಛ ಮಾಡದೇ ಯಾವುದೂ ಹಾಗೂ ಆಡುಗೆಯವರನ್ನು ಹೊರಗುತ್ತಿಗೆ ಮೇಲೆ ಬೇಕಾಬಿಟ್ಟಿ ದುಡ್ಡು ಪಡೆದು ತೆಗೆದುಕೊಂಡಿರುವುದನ್ನು ಹುದ್ದೆ ನಿರ್ವಹಿಸುತ್ತಿರುವ ವಸತಿ ತೆಗೆದುಕೊಂಡಿರುವುದು ಹುದ್ದೆ ನಿರ್ವಹಿಸುತ್ತಿರುವ ವಸತಿ ನಿಲಯದ ಯಾವುದೇ ದಾಖಲಾತಿಗಳು ಬರೆದಿರುವುದಿಲ್ಲ, ಮಕ್ಕಳು ಹಾಜರಾತಿ / ಬಯೋಮೆಟ್ರಿಕ್ ಹಾಜರಾತಿ ಇರುವುದಿಲ್ಲ. ಈ ಎಲ್ಲಾ ವಿಚಾರಗಳಿಗೆ ಸಂಬAಧಪಟ್ಟAತೆ ಸಂಬAಧಪಟ್ಟ ಅಧಿಕಾರಿಗಳು ವಿಚಾರಿಸಿದರೆ ಅವರ ಮೇಲೆ, ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳ ದಬ್ಬಾಳಿಕೆ ಹಾಗೂ ಪ್ರಭಾವವನ್ನು ಬೀರುತ್ತಿದ್ದಾರೆ.

ಶ್ರೀಮತಿ ಶಾಂತಮ್ಮ ವಾರ್ಡನ್ ಇವರ ಮೇಲೆ ಹಲವು ಸಂಘ ಸಂಸ್ಥೆಗಳು ಹಾಗೂ ವಿದ್ಯಾರ್ಥಿನಿಯರು ಹಲವು ಬಾರಿ ಪ್ರತಿಭಟನೆ ಹಾಗೂ ಮೇಲಾಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದಾರೆ, ಈ ಸಂಬAಧ ಒಂದು ಸಾರಿ ಸೇವೆಯಿಂದ ಅಮಾನತ್ತು ಸಹ ಆಗಿದ್ದಾರೆ. ವಿಶೇಷವಾಗಿ ವಸತಿ ನಿಲಯಕ್ಕೆ ಸಂಬAಧಿಸಿದ ಹಾಗೆ ವಿವಿಧ ಕೆಲಸ ಕಾರ್ಯಗಳನ್ನು ಮಾಡಿದ್ದಾಗಿ ಹಾಗೂ ಸಲಕರಣೆಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಮಗೆ ಬೇಕಾದ ಎನ್.ಜಿ.ಓ.ಗಳ ಮೂಲಕ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಇಲಾಖೆಗೆ ವಂಚಿಸಿ ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ನಕಲಿ ಜಿಲ್ಲುಗಳನ್ನು ಸೃಷ್ಟಿಸಿ ಪಾವತಿ ಮಾಡಲು ಅಧಿಕಾರಿಗಳ ಮೇಲೆ ಒತ್ತಡವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ಹಾಕುತ್ತಾರೆ: ಕಾರಣ ಯಾರೇ ಪ್ರಶ್ನೆ ಮಾಡಲಿಕ್ಕೆ ಹೋದರೆ ಅವರ ವಿರುದ್ಧವೇ ಜೋರಾಗಿ ಕಿರುಚಾಡುವುದು ನಾನು ಹೆಣ್ಣು ಮಗಳು ಇದ್ದೀನಿ, ನಿಮ್ಮ ಮೇಲೆ ಕೇಸ್ ಮಾಡುತ್ತೇನೆ. ನನಗೆ ಅವರು ಗೊತ್ತು, ಇವರು ಗೊತ್ತು ಎಂದು ಹೆದರಿಕೆ ಹಾಕುತ್ತಾಳೆ. ಈಗಾಗಲೇ ಮಾನ್ಯ ಸಹಾಯಕ ನಿರ್ದೇಶಕರು ತಾಲೂಕಾ ಸಮಾಜ ಕಲ್ಯಾಣ ಇಲಾಖೆ, ಯಾದಗಿರಿ ರವರು ಮಾನ್ಯ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ರವರಿಗೆ ಹಲವಾರು ವರದಿ ಸಲ್ಲಿಸಿದರೂ ವಾರ್ಡನ್ ಇವರ ವಿರುದ್ಧ ಉಪನಿರ್ದೇಶಕರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಸದರಿ ವಾರ್ಡನ್‌ರವರನ್ನು ಯಾದಗಿರಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ. ಒಂದು ವಾರದೊಳಗಡೆ ಈ ಬಗ್ಗೆ ತನಿಖೆ ನಡೆಸಿ, ಶಾಂತಮ್ಮ ವಾರ್ಡನ್ ಇವರ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡದೇ ಹೋದರೆ ತಮ್ಮ ಕಛೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಯಾದಗಿರಿ ಸೈದಪ್ಪ ಕೊಲೂರಕರ್ ಸಂಚಾಲಕರು, ಗೋಪಾಲ ತಳಗೇರಿ ಜಿ.ಸಂ.ಸAಚಾಲಕರು

ಮಲ್ಲಿನಾಥ ಸು೦ಗಲಕರ್, ಜಿ.ಸಂ. ಸಂಚಾಲಕರು ಪರಶುರಾಮ ಒಡೆಯರ್, ಯಾದಗಿರಿ ಉಪವಿಭಾಗ ಸಂಚಾಲಕರು, ವಸಂತ ಸುಂಗಲ್ಕರ್,

ಸAಪತ ಚಿನ್ನುಕಾರ ಮಲ್ಲಿಕಾರ್ಜುನ ಜಿನಕೇರಿ ಇನ್ನಿತರರು ಇದ್ದರು. 

Google  News WhatsApp Telegram Facebook
HTML smaller font

.

.