ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ

Sep 19, 2023 - 12:32
Sep 19, 2023 - 12:35
 0  7

Google  News WhatsApp Telegram Facebook

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ

Janaa Akrosha News Desk.

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ: ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ.

ಚಿಟಗುಪ್ಪ: ವಿಶ್ವ ಸಾಹಿತ್ಯಕ್ಕೆ ಪ್ರಜಾಪ್ರಭುತ್ವ ಆಶಯಗಳನ್ನು ಹೊತ್ತ ವಚನ ಸಾಹಿತ್ಯವನ್ನು ಶರಣರು ವಿಶೇಷ ಕೊಡುಗೆಯಾಗಿ ನೀಡಿದ್ದಾರೆ.ಜನರಾಡುವ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ,ಜೀವನ ಸಂದೇಶ ಸಾರಿದ್ದ ಕಾರಣದಿಂದಲೇ ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಬಸವಕಲ್ಯಾಣದ ಅಲ್ಲಮ ಪ್ರಭು ಶೂನ್ಯ ಪೀಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಗಳು ನುಡಿದರು.

ಉಡಬಾಳ ವಾಡಿ ಗ್ರಾಮದ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡ ವಚನ ಅಭಿಷೇಕ ಹಾಗೂ ವಚನ ಪ್ರವಚನ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಶರಣರು ಕನ್ನಡ ಭಾಷೆಗೆ ಆದ್ಯತೆ ನೀಡಿ, ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಅನಕ್ಷರಸ್ಥ ಶರಣರನ್ನು ಅಕ್ಷರಸ್ಥರನ್ನಾಗಿ ಮಾಡಿದ ಪರಿಣಾಮದಿಂದಲೇ ಇಷ್ಟೊಂದು ವಚನಗಳು ನಮಗೆ ದೊರೆಯುತ್ತವೆ.ವಚನ ಸಾಹಿತ್ಯ ಬದುಕಿನ ಸಂದೇಶ ಕೊಡುತ್ತದೆ.ವಚನ ಸಾಹಿತ್ಯದ ಆಶಯಗಳ ಕುರಿತು ಯಾವಾಗಲೂ ಮೆಲುಕು ಹಾಕಬೇಕು. ನಿಸ್ವಾರ್ಥ ಸೇವಾ ಮನೋಭಾವ ಸರ್ವರೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಕ್ಕ ಇಂದುಮತಿ ಗಾರಂಪಳ್ಳಿ ನವರ ಸೇವಾ ಕೈಂಕರ್ಯಗಳು ಅನುಪಮವಾದವು ಎಂದು ಹೇಳಿದರು.

ರಾಜ್ಯ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶರಣೆ ಶಕುಂತಲಾ ಬೆಲ್ದಾಳೆ ಮಾತನಾಡಿ ಸಮಾನತೆಗಾಗಿ ಹಗಲಿರುಳೆನ್ನದೆ ಬಸವಾದಿ ಶರಣರು ದುಡಿದಿದ್ದಾರೆ. ಕಾಯಕ ಹಾಗೂ ದಾಸೋಹ ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ. ಇವರಂತೆ ಇಂದುಮತಿ ಗಾರಂಪಳ್ಳಿ ಅಕ್ಕನವರು ಸಹ ಈ ಭಾಗದಲ್ಲಿ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾರಂಭದ ನೇತೃತ್ವ ವಹಿಸಿದ್ದ ಪ್ರಗತಿಪರ ಚಿಂತಕಿ ಶರಣೆ ಇಂದುಮತಿ ಗಾರಂಪಳ್ಳಿ ಮಾತನಾಡಿ ಪ್ರತಿಯೊಬ್ಬರು ವಚನಗಳನ್ನು ಕೇಳಿದರೆ ಸಾಲದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಅರಿವೇ ಗುರು ಎಂದು ತಿಳಿದು ಸಾಗಬೇಕು.ಅದಕ್ಕಾಗಿಯೇ

ಎಂತದೇ ಕಷ್ಟ ಇದ್ದರೂ ಬಸವಾದಿ ಶರಣರ ಕುರಿತು ಪ್ರವಚನ ಮಾಡುವ ಮೂಲಕ ಶರಣರ ತತ್ವ ಸಂದೇಶಗಳನ್ನು ಸಾಗುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು

 ಶರಣ ಸಾಹಿತಿ ಸಂಗಮೇಶ ಎನ್ ಜವಾದಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಅವರು ಬಸವಾದಿ ಪ್ರಮಥರು ರಚಿಸಿದ ಅಂದಿನ ವಚನೆಗಳೇ ಇಂದಿನ ಮನುಕುಲದ ಒಳಿತಿಗಾಗಿ ಉಪಯೋಗಕ್ಕೆ ಬರುತ್ತವೆ.ಅಂತಹ ವಚನ ಸಾಹಿತ್ಯದ ತೇರನ್ನು ತಾಲೂಕಿನ ತುಂಬೆಲ್ಲ ಪಸರಿಸುತ್ತಿರುವ ಕಾರ್ಯ ಇಂದುಮತಿ ಗಾರಂಪಳ್ಳಿ ಅಕ್ಕನವರು ಮಾಡುತ್ತಿರುವುದು ಶ್ಲಾಘನೀಯ ಸೇವಾ ಕೆಲಸ ಜೊತೆಗೆ ನಾಡಿಗೆ ಮಾದರಿ ಎಂದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಲ್ಕಿ ಶಸಾಪ ಅಧ್ಯಕ್ಷಿ ಮಲ್ಲಮ್ಮ ಆರ್ ಪಾಟೀಲ್, ದತ್ತಿಗಿರಿ ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಜಗದೇವಿ ಆರ್ ಯದಲಾಪೂರೆ ಇಂದುಮತಿ ಗಾರಂಪಳ್ಳಿ ಅಕ್ಕನವರ ಪ್ರಚನದ ಕುರಿತು ಮಾತನಾಡಿದರು.

 ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಚಿಂತಕಿ , ಸಂಸ್ಥೆಯ ಅಧ್ಯಕ್ಷರಾದ ಶರಣೆ

ಈಶ್ವರಮ್ಮಾ ಎಸ್ ಗಾರಂಪಳ್ಳಿ ವಹಿಸಿಕೊಂಡಿದ್ದರು.

ಸಮಾರಂಭದಲ್ಲಿ ಪ್ರಮುಖರಾದ ಹೇಮಾವತಿ ವಿ ಬಿಡಪ್ಪ, ಜೈಶ್ರೀ ಗಾಂಜಿ, ಸುಜಾತಾ ಮುಕಿಂದಪ್ಪನೊರ, ಗಾಯತ್ರಿ ಶಂಕರ ಬುದ್ದಿ, ವಿಜಯಲಕ್ಷ್ಮಿ ಮಾಲಿ ಪಾಟೀಲ್ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು, ಶಿಕ್ಷಕರು - ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.