ಸ್ಥಳೀಯ

ನಿಯಂತ್ರಣ ತಪ್ಪಿದ ಕಾರು,ಓರ್ವನ ದುರ್ಮಣ

WhatsApp Group Join Now
Telegram Group Join Now

ದೇವದುರ್ಗ: ಅತಿ ವೇಗದಿಂದ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಸುರಕ್ಷ ಕಲ್ಲುಗಳಿಗೆ ಹಾಯ್ದು ಪಲ್ಟಿ ಹೊಡೆದ ಕಾರಣ ದೇವದುರ್ಗದ ನಿಲವಂಜಿ ಕ್ರಾಸ್ ಹತ್ತಿರ ಇಂದು ಬೆಳಿಗ್ಗೆ ಹನ್ನೊಂದು ಗಂಟೆಯ ಸಮಯದಲ್ಲಿ ಸಂಭವಿಸಿದೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಲ್ಲಿ ಓರ್ವ ವ್ಯಕ್ತಿ ತೀವ್ರವಾದ ರಕ್ತಸ್ರಾವದಿಂದ ಮರಣಿಸಿದ್ದು ತಿಳಿದು ಬಂದಿದೆ.

ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಯಾವುದೇ ಪ್ರಾಣಾಪಾಯ ಆಗಿರುವುದಿಲ್ಲ. ಹಿಂದಿನ ಆಸನದಲ್ಲಿದ್ದ ವ್ಯಕ್ತಿ ತಲೆಗೆ ಬಾರಿ ಪೆಟ್ಟು ಬಿದ್ದು ಸಾವು ಸಂಭವಿಸಿದೆ. ಈರ್ವರು ರಾಯಚೂರು ನಿವಾಸಿಗಳು ಎಂದು ತಿಳಿದಿದ್ದು ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ದೇವದುರ್ಗ ಆರಕ್ಷ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now

Related Posts