ನಿದ್ರೆಯಲ್ಲಿ ಪಾರ್ಶ್ವ ವಾಯುವಿನ ಹಿಂದಿನ ಕಾರಣ ಶೇಕಡಾ 60-70 ರಷ್ಟು ಸಂಪೂರ್ಣವಾಗಿ ಆಧ್ಯಾತ್ಮಿಕ ಸ್ವರೂಪದ್ದಾಗಿರುತ್ತದೆ ಅಥವಾ ಆಧ್ಯಾತ್ಮಿಕ ಮತ್ತು ಮಾನಸಿಕ ಎರಡೂ ಆಗಿರುತ್ತದೆ, ಆದ್ದರಿಂದ ಆಧ್ಯಾತ್ಮಿಕ ಸಾಧನೆ ಮಾಡಿದರೆ ಆಧ್ಯಾತ್ಮಿಕ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗುತ್ತದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಡೆಸಿದ ಸಂಶೋಧನೆಯಿಂದ ಕಂಡುಬಂದಿದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಇತ್ತೀಚಿಗೆ ಬ್ಯಾಂಕಾಕ್ ಥಾಯ್ಲೆಂಡ್ ನಲ್ಲಿ ನಡೆದ ‘ಟೆಂಥ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆಫ್ ಪಬ್ಲಿಕ್ ಹೆಲ್ತ್ (ICOPH 2024)’ ಈ ಸಭೆಯಲ್ಲಿ ಮಾತನಾಡುತ್ತಿದ್ದರು. ಅವರು ನಿದ್ರೆಯಲ್ಲಿನ ಪಾರ್ಶ್ವವಾಯು ತಡೆಯಲು ಆಧ್ಯಾತ್ಮಿಕ ಉಪಾಯ ಈ ಶೋಧ ಪ್ರಬಂಧವನ್ನು ಪ್ರಸ್ತುತಪಡಿಸಿದರು. ಅದರ ಲೇಖಕರು ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರಾಗಿದ್ದು ಶ್ರೀ. ಶಾರ್ನ್ ಕ್ಲಾರ್ಕ್ ಸಹಲೇಖಕರಾಗಿದ್ದಾರೆ.
ಅಕ್ಟೋಬರ್ 2016 ರಿಂದ ಆಗಸ್ಟ್ 2024 ಈ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು 20 ರಾಷ್ಟ್ರೀಯ ಮತ್ತು 96 ಅಂತರಾಷ್ಟ್ರೀಯ, ಹೀಗೆ ಒಟ್ಟು 116 ವೈಜ್ಞಾನಿಕ ಸಭೆಗಳಲ್ಲಿ ಶೋಧ ಪ್ರಬಂಧ ಪ್ರಸ್ತುತಪಡಿಸಿದೆ. ಇದರಲ್ಲಿ 14 ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಸರ್ವೋತ್ಕೃಷ್ಟ ಪ್ರಸ್ತುತಿಕರಣ (ಮಂಡನೆ) ಪ್ರಶಸ್ತಿ ದೊರೆತಿದೆ.
ಶ್ರೀ. ಶಾನ್ ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ವಿವಿಧ ಸಂಸ್ಕೃತಿ ಮತ್ತು ದೇಶಗಳಲ್ಲಿನ ನಿದ್ರೆಯಲ್ಲಿ ಪಾರ್ಶ್ವವಾಯುವಿಗೊಳಗಾದ 46 ಸಾಧಕರ ಮೇಲೆ ನಡೆಸಿರುವ ಸಮೀಕ್ಷೆಯ ನಿಷ್ಕರ್ಷ ಮಂಡಿಸಿದರು. ಈ ರೀತಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಪಿತೃ ಪಕ್ಷಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ರಾತ್ರಿ ಇರಲಿ ಅಥವಾ ಸೂರ್ಯಾಸ್ತದ ಸಮೀಪದ ಮಧ್ಯಾಹ್ನದ ಸಮಯ ಇರಲಿ, ಗಾಢವಾದ ನಿದ್ರೆಯ ಸಮಯದಲ್ಲಿ ಇದರ ಪುನರಾವರ್ತನೆ ಹೆಚ್ಚಾಗುತ್ತದೆ. ವಿಶೇಷವಾಗಿ ಯುವಕರಿಗೂ ನಿದ್ರೆಯಲ್ಲಿ ಪಾರ್ಶ್ವ ವಾಯು ಆಗುತ್ತದೆ. ಇದರ ಸರಾಸರಿ ಕಾಲಾವಧಿ 3 ನಿಮಿಷದಿಂದ 3 ಗಂಟೆ ಇರುತ್ತದೆ ಮತ್ತು ವ್ಯಕ್ತಿ ಅಂಗಾತ ಮಲಗಿದಾಗ ಈ ದಾಳಿಯ ಸಾಧ್ಯತೆ ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ, ಎಂದು ಈ ಸಮೀಕ್ಷೆಯಿಂದ ಕಂಡು ಬಂದಿದೆ. ಆಧ್ಯಾತ್ಮಿಕ ಸಂಶೋಧನೆ ಈ ಸಮೀಕ್ಷೆಯ ನಿಷ್ಕರ್ಷದ ಜೊತೆಗೆ ಸಾಮ್ಯತೆ ತೋರುತ್ತದೆ. ಒಬ್ಬ ಸಾಧಾರಣ ವ್ಯಕ್ತಿಗಾಗಿ, ಯಾವಾಗ ಆ ವ್ಯಕ್ತಿ ಅಂಗಾತ ಮಲಗುತ್ತಾನೆ ಆಗ ಅವನ ಕುಂಡಲಿನಿ ಪ್ರಣಾಳಿಯಲ್ಲಿನ ಎರಡು ಮುಖ್ಯ ಸೂಕ್ಷ್ಮ ಶಕ್ತಿ ವಾಹಿನಿಗಳು ಕನಿಷ್ಠ ಸಕ್ರಿಯವಾಗಿರುತ್ತವೆ. ಅದರಿಂದ ಅವನ ಶರೀರದಲ್ಲಿನ ಸೂಕ್ಷ್ಮ ಶಕ್ತಿಯ ಪ್ರವಾಹ (ಅದನ್ನು ಪ್ರಾಣಶಕ್ತಿ ಎಂದು ಕೂಡ ಹೇಳುತ್ತಾರೆ) ಕಡಿಮೆ ಆಗುತ್ತದೆ. ಆದ್ದರಿಂದ ಸೂಕ್ಷ್ಮ ಕೆಟ್ಟ ಶಕ್ತಿಯು ವ್ಯಕ್ತಿಯ ಸ್ನಾಯು ವ್ಯವಸ್ಥೆಯನ್ನು ನಿಲ್ಲಿಸಲು ಸುಲಭವಾಗುತ್ತದೆ.
ಶ್ರೀ. ಶಾನ್ ಇವರು ಮಾತು ಮುಂದುವರಿಸಿ, ಶೇಕಡ 85 ಸ್ಪಂದಿಸಿರುವ ವ್ಯಕ್ತಿಗಳು ಆಧ್ಯಾತ್ಮಿಕ ಸಾಧನೆ ಆರಂಭ ಮಾಡಿದ ನಂತರ ನಿದ್ರೆಯಲ್ಲಿ ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚೆಚ್ಚು ಪುನರಾವರ್ತನೆಯಾಯಿತು; ಕಾರಣ ಸಾಧನೆ ಮಾಡುವದಕ್ಕೆ ಸೂಕ್ಷ್ಮ ನಕಾರಾತ್ಮಕ ಶಕ್ತಿಯ ವಿರೋಧವಾಗುತ್ತದೆ. ತದ್ವಿರುದ್ಧ ನಿಯಮಿತ ಆಧ್ಯಾತ್ಮಿಕ ಉಪಾಯ ಮಾಡಿದರೆ ಶೇಕಡ 93 ಸಾಧಕರಿಗೆ ಈ ಹಲ್ಲೆಯನ್ನು ತಡೆಯಲು ಸಹಾಯವಾಗುತ್ತದೆ.
ಮುಕ್ತಾಯ ಮಾಡುವಾಗ ಶ್ರೀ. ಶಾನ್ ಕ್ಲಾರ್ಕ್ ಇವರು ಜಗತ್ತಿನಾದ್ಯಂತ ಅನ್ವಯಿಸುವ ಉಪಾಯಗಳ ಮಾಹಿತಿ ನೀಡಿದರು. ನಿದ್ರೆಯಲ್ಲಿ ಪಾರ್ಶ್ವವಾಯು ತಡೆಯಲು ಮತ್ತು ಅದರಿಂದ ರಕ್ಷಣೆಯಾಗಲು ‘ಶ್ರೀ ಗುರುದೇವ ದತ್ತ’ ಈ ಜಪವನ್ನು ನಿಯಮಿತವಾಗಿ ಮಾಡಬೇಕು, ಹಾಗೂ ಅಮಾವಾಸ್ಯೆ ಮತ್ತು ಪೂರ್ಣಿಮೆಯ ದಿನ ಜಪ ಹೆಚ್ಚು ಮಾಡಬೇಕು. ಪೂರ್ವ-ಪಶ್ಚಿಮ ದಿಶೆಗೆ ಮತ್ತು ಎಡಕ್ಕೆ ಮಲಗುವುದು ಅಥವಾ ಬೆನ್ನು ಅಥವಾ ಹೊಟ್ಟೆಯ ಮೇಲೆ ಮಲಗುವುದನ್ನು ತಪ್ಪಿಸುವುದು. ಹಾಗೂ ಪ್ರತಿದಿನ 15 ನಿಮಿಷ ಉಪ್ಪು ನೀರಿನಲ್ಲಿ ಕಾಲು ಇರಿಸಿ ನಾಮಜಪ ಮಾಡುವುದು. ಇದರಂತಹ ಪ್ರಭಾವಿ ಉಪಾಯಗಳನ್ನು ಹೇಳಿದರು.
ತಮ್ಮ ಸವಿನಯ,
ಶ್ರೀ. ಆಶೀಶ ಸಾವಂತ,
ಸಂಶೋಧನಾ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
(ಸಂಪರ್ಕ : 9561574972)