ಶಹಾಪೂರು: ಹೈಯಾಳ ಹೋಬಳಿಯ ಪ್ರಭಾವಿ ಕಾಂಗ್ರೆಸ್ ನಾಯಕ ಬಸಣ್ಣ ಬಂಗಿಯವರನ್ನು ಕೊಳ್ಳೂರು ಗ್ರಾಮದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು. ಬಸಣ್ಣ ಬಂಗಿಯವರು ನಿಕಟಪೂರ್ವ ತಾಲ್ಲೂಕು ಪಂಚಾಯತಿಯ ಸದಸ್ಯರಾದ ಶ್ರೀಮತಿ ವಸುಂದರಮ್ಮನವರ ಪತಿಯಾಗಿದ್ದು ಕಾಂಗ್ರೇಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಸಕ್ರಿಯ ರಾಜಕಾರಣದಲ್ಲಿದ್ದವರು.
ಕಾಂಗ್ರೆಸ್ ಪಕ್ಷ ಇವರನ್ನು ಗುರುತಿಸಿ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಸದಸ್ಯರನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಈ ಸನ್ಮಾನ ಸಮಾರಂಭವನ್ನು ಕೊಳ್ಳೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಅದೇ ಗ್ರಾಮದ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾದ ಹೊನ್ನಯ್ಯ ಗಟ್ಟಿ, ಭೀಮರಾಯ ಗಟ್ಟಿ, ಅಯ್ಯಣ್ಣ ತಾತ, ನಿಂಗಯ್ಯ ಮಡಿವಾಳ, ಹನುಮಂತ ಕರಿಗುಡ್ಡ ಈ ಸಂದರ್ಭದಲ್ಲಿ ಸನ್ಮಾಸಿ ಗೌರವ ಮೆರೆದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಗ್ರಾಮದ ಪ್ರತಿಯೊಬ್ಬರನ್ನೂ ತಲುಪಿರುವ ಈ ಸಂದರ್ಭದಲ್ಲಿ ಬಸಣ್ಣ ಬಂಗಿಯವರನ್ನು ಗ್ಯಾರಂಟಿ ಯೋಜನೆಗಳ ಸದಸ್ಯರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.