ಸ್ಥಳೀಯ

ಅಗಲಿದ ನಾಯಕನಿಗೆ ಕೆಂಭಾವಿ ಪಟ್ಟಣದಲ್ಲಿ ನುಡಿ ನಮನ ಸಲ್ಲಿಸಿದ ಕಾರ್ಯಕರ್ತರು

WhatsApp Group Join Now
Telegram Group Join Now

ಕೆಂಭಾವಿ: ಜನಪ್ರಿಯ ಶಾಸಕ ಮತ್ತು ಸುರಪುರ ಭಾಗದ ಮಾತಿಗೆ ತಪ್ಪದ ಸರದಾರ ಎನ್ನುವ ಖ್ಯಾತಿಯನ್ನು ಮುಡಿಗೇರಿಸಿಕೊಂಡ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ನುಡಿನಮನ ಸಲ್ಲಿಸಿದ ಕಾರ್ಯಕ್ರಮ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಒಂದು ನಿಮಿಷದ ಮೌನಾಚಾರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯ ಮಾನ್ಯರು ಭಾಗವಹಿಸಿ ದಿವಂಗತ ನಾಯಕ ರಾಜಾ ವೆಂಕಟಪ್ಪ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀನಿವಾಸ ದೊರಿ ಮಾಲಗತ್ತಿ ವೆಂಕಟಪ್ಪ ನಾಯಕರ ಒಡನಾಟ ಮತ್ತು ಅವರ ಸ್ವಾಭಿಮಾನದ ಮೇರು ವ್ಯಕ್ತಿತ್ವದ ಬಗ್ಗೆ ಸ್ಮರಣೆ ಮಾಡಿಕೊಂಡರು. ವಾಸ್ತವವಾಗಿ ಸುರಪುರ ತಾಲ್ಲೂಕಿಗೆ ಸೇರಿದ ಮತ್ತು ಶಹಾಪೂರು ಮತಕ್ಷೇತ್ರಕ್ಕೆ ಒಳಪಟ್ಟ ಹಳ್ಳಿಗಳ ಬಗ್ಗೆ ಅವರಿಗಿದ್ದ ಕಾಲಜಿಯ ಬಗ್ಗೆ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲಾಯಿತು. ಎಲ್ಲರನ್ನೂ ನಮ್ಮವರು ಎಂದು ಭಾವಿಸುತ್ತಿದ್ದ ಅವರ ಮೇರು ಗುಣ ಮತ್ತು ಅವರ ಪಾರಂಪರಿಕ ರಾಜ ಮನೆತನದ ವ್ಯಕ್ತಿತ್ವವನ್ನು ಶ್ಲಾಘಿಸಲಾಯಿತು. ಶಹಾಪೂರು ಮತಕ್ಷೇತ್ರ ಶರಣಬಸ್ಸಪ್ಪಗೌಡ ದರ್ಶನಾಪೂರು ಮತ್ತು ರಾಜಾ ವೆಂಕಟಪ್ಪ ನಾಯಕರಿಗೆ ಇದ್ದ ಅವಿನಾಭಾವ ಸಂಬಂಧ ಮತ್ತು ಸ್ನೇಹಗಳ ಬಗ್ಗೆ ಶ್ರೀನಿವಾಸ ದೊರೆ ಕೊಂಡಾಡಿದರು. ತಮ್ಮ ಮತಕ್ಷೇತ್ರವಲ್ಲದ ಹಳ್ಳಿಗಳ ಜನರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ದಿವಂಗತ ಶಾಸಕರು ಕರುಣಾಳು ಗುಣವನ್ನು ಹೊಂದಿದ್ದರು ಎಂದು ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಸೇರಿದ ಎಲ್ಲರೂ ಒಕ್ಕೂರಲಿನಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಅದೊಂದು ಸುಸಂಕೃತ ಕುಟುಂಬ, ಅವರ ಮುಂದುವರೆದ ಪರಂಪರೆಯಾಗಿ ರಾಜಾ ಕುಮಾರರ ನಾಯಕರಿದ್ದಾರೆ. ಅವರೂ ಮಾನವೀಯ ಕಳಕಳಿ ಇರುವ ವ್ಯಕ್ತಿತ್ವದವರು. ಮುಂಬರುವ ಉಪ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವ ಮೂಲಕ ಮೇರು ವ್ಯಕ್ತಿತ್ವದ ರಾಜಾ ವೆಂಕಟಪ್ಪ ನಾಯಕರ ಆತ್ಮಕ್ಕೆ ಗೌರವ ಸಲ್ಲಿಸಬೇಕಿದೆ ಎಂದು ಅನೇಕ ಗಣ್ಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಿದ್ದನಗೌಡ ಕೆಂಭಾವಿ, ವಾಮನ್‌ ರಾವ್‌ ದೇಶಪಾಂಡೆ, ನಿಂಗನಗೌಡ ಕೆಂಭಾವಿ, ಹಣಮಂತ್ರಾಯ ದೊರೆ ದಳಪತಿ, ಅಮಿನ್‌ ರೆಡ್ಡಿ ಕಿರದಳ್ಳಿ, ಗೌಡಪ್ಪಗೌಡ ಆಲ್ದಾಲ, ಮಾನಿಶಪ್ಪ ದೊರಿ ಕರಡಕಲ್‌, ಹಳಪ್ಪ ಹವಲ್ದಾರ್‌, ಮಾನಪ್ಪ ಸೂಗೂರು, ದೊಡ್ಡಪ್ಪಗೌಡ ಜೈನಾಪೂರು, ಶರಣಗೌಡ ಗೌಡಗರೆ, ಯಂಕಣ್ಣ ದೊರೆ ಗೌಡಗೆರೆ, ರಾಮಣ್ಣ ಗುರಿಕಾರ್‌, ವೆಂಕಟೇಶ್‌ ಬೇಟೆಗಾರ, ರಮೇಶ್‌ ದೊರೆ ಆಲ್ದಾಳ್‌,ಗೋಪಾಲ್‌ ದೊರೆ ಅರಕೇರಾ, ಪಟೇಲ್‌ ಮಾಲಗತ್ತಿ, ಪರಶುರಾಮ್‌ ಗಡ್ಡದ್‌ ಮಾಲಗತ್ತಿ, ದರ್ಮೀಬಾಯಿ ರಾಥೋಡ್‌ ಸೇರಿದಂತೆ ರಾಜಾ ವೆಂಕಟಪ್ಪ ನಾಯಕರ ಅಪಾರ ಅಭಿಮಾನ ಬಳಗ ಉಪಸ್ಥಿತರಿದ್ದರು.

ವರದಿ: ಹುಲಗಪ್ಪ. ಎಸ್.‌ ಹವಲ್ದಾರ್.

WhatsApp Group Join Now
Telegram Group Join Now

Related Posts