ಅಂಬೇಡ್ಕರ್
ಇಂದು ಕಂಡೆ ದೇವರಾಗಿ
ಅಂದು ಕಂಡೆ ಬಡವನಾಗಿ
ಮೆಟ್ಟಿದೆ ಅಂಧಕಾರವಾ/
ಕಟ್ಟಿದೆ ಜ್ಞಾನ ಬಂಡಾರವ
ಹಟ್ಟಿಸಿಕೊಂಡು ಹೋದೆ ಅಜ್ಞಾನವ /
ಶೂದ್ರರಲ್ಲಿ ಮೂಡಿದ ಕತ್ತಲಿಗೆ
ಮಿಂಚಂತೆ ಬೆಳಕಾಗಿ ಬಂದೆ/
ಉಳ್ಳವರ ಪಾಲಿಗೆ ಆಹಾರವಂತಿದ್ದ ಮುಗ್ಧ ಮನಸುಗಳ ಒಡೆಯ, ನೀನೇ ಅವರ ದೇವರಯ್ಯ/
ದಲಿತರ ಪಾಲಿಗೆ ವರವಾದೇ
ದೇಶದ ಜನರ ಪಾಲಿಗೆ ನೆಮ್ಮದಿ ತಂದೆ /
ದೇಶ ಕಂಡ ಸಂವಿಧಾನ ಶಿಲ್ಪಿ ನೀನಾದೆ ಓ ನನ್ನ ದೇವರೇ /
ಸಂವಿಧಾನ ಜನರ ಧರ್ಮ
ಮರಿಬ್ಯಾಡೋ ಅದರ ಮರ್ಮ
ಮರೆತರೆ ನಿನಗೈತಿ ಕರ್ಮ/
ಸಂವಿಧಾನ ಉಳಿಸೋಣ ಅಜ್ಞಾನವ ಅಳಿಸೋಣ ಒಂದಾಗಿ ಬಾಳೋಣ, ನೀ ಕಾಣೋ ಜಗದ ನಿಯಮ/
ಬದಲಾಗು ಜಾತಿ ಮಾಮ.
ಗುಮ್ಮನೂರು ಮಲ್ಲಿಕಾರ್ಜುನಪ್ಪ ವಕೀಲರು ದಾವಣಗೆರೆ.