ಶಿಕ್ಷಣ

7ನೇ, 8ನೇ, 9ನೇ ತರಗತಿ ಮೀಸಲಾತಿವಾರು ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

ಯಾದಗಿರಿ : ಜೂನ್ 11, (ಕ.ವಾ) : 2024-25ನೇ ಸಾಲಿನ ಆದರ್ಶ ವಿದ್ಯಾಲಯ (ಆರ್‌ಎಮ್‌ಎಸ್‌ಎ) ಶಹಾಪೂರ ಶಾಲೆಗೆ 7ನೇ, 8ನೇ ಮತ್ತು 9ನೇ ತರಗತಿಗಳಲ್ಲಿ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ಪರೀಕ್ಷೆ ಮೂಲಕ ದಾಖಲಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಪೂರ ಆದರ್ಶ ವಿದ್ಯಾಲಯ (ಆರ್‌ಎಮ್‌ಎಸ್‌ಎ) ಮುಖ್ಯ ಗುರುಗಳು ಅವರು ತಿಳಿಸಿದ್ದಾರೆ.

7ನೇ, 8ನೇ ಮತ್ತು 9ನೇ ತರಗತಿಗಳಲ್ಲಿ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾಸಿದೆ. 2024-25ನೇ ಸಾಲಿನ ಆದರ್ಶ ವಿದ್ಯಾಲಯ (ಆರ್‌ಎಮ್‌ಎಸ್‌ಎ) ಶಹಾಪೂರ ಶಾಲೆಯಲ್ಲಿ 7, 8, 9ನೇ ತರಗತಿ ಖಾಲಿ ಸ್ಥಾನಗಳ ವಿವರ ಒಟ್ಟು 14 ಸ್ಥಾನಗಳು ಖಾಲಿ ಇರುತ್ತದೆ.

2024ರ ಜೂನ್ 11 ರಿಂದ 18ರ ಒಳಗೆ ಅರ್ಜಿಸಲ್ಲಿಸಬೇಕು, ಆಸಕ್ತ ವಿದ್ಯಾರ್ಥಿಗಳು, ಪೋಷಕರು ಸದರಿ ಶಾಲೆಯಿಂದ ಅರ್ಜಿಪಡೆದು ಭರ್ತಿ ಮಾಡಿ ಅರ್ಜಿಸಲ್ಲಿಬೇಕು, ಯಾದಗಿರಿ ಅಭಿವೃದ್ಧಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅವರು ಪ್ರವೇಶ ಪರೀಕ್ಷೆ 2024ರ ಜೂನ್ 23 ರಂದು ನಡೆಸುವರು. ಹೆಚ್ಚಿನ ಮಾಹಿತಿಗಾಗಿ ಶಹಾಪೂರ ತಾಲೂಕಿನ ಆದರ್ಶ ವಿದ್ಯಾಲಯ (ಆರ್‌ಎಮ್‌ಎಸ್‌ಎ) ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts