ಯಾದಗಿರಿ : ಆಗಸ್ಟ್ 02, : ಯಾದಗಿರಿ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಬಗ್ಗೆ ಸಾರ್ವಜನಿಕರಿಂದ ಅರೋಪಗಳನ್ನು ಬರುತ್ತಿರುವ ಹಿನ್ನೆಲೆಯಲ್ಲಿ ಓರ್ವ ನಕಲಿ ಕ್ಲಿನಿಕ್ ವೈದ್ಯನನ್ನು ತಪಾಸಣೆ ನಡೆಸಿ ಕೆಎಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಕುಟುಂಬ ಕಲ್ಯಾಣ ಅಧಿಕಾರಿಗಳ ಜ್ಯೋತಿ ಕಟ್ಟಿಮನಿ ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ವೈದ್ಯಧಿಕಾರಿಳ ತಂಡವು ಇಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಹೈಯಾಳ (ಬಿ) ಗ್ರಾಮದಲ್ಲಿ ನಕಲಿ ಕ್ಲಿನಿಕ ತಪಾಸಣ ವೇಳೆ ಅರಬಾಜ್ ಅಲಿ ಎಂಬುವ ನಕಲಿ ವೈದ್ಯನ ಮೇಲೆ ಏಠಿme ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಅವರ ನಿರ್ದೇಶನ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಕುಟುಂಬ ಕಲ್ಯಾಣ ಡಾ.ಜೋತಿ ಕಟ್ಟಿಮನಿ ವೈದ್ಯಕೀಯ ತಂಡಗಳು ರಚಿಸಿ ಮುಂದಿನ ದಿನಗಳಲ್ಲಿ ಚುರಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಮಟ್ಟಹಾಕುವ ಕ್ರಮ ಕೈಗೊಂಡಿದ್ದಾರೆ.
ಡಿಹೆಚ್‌ಓ ಡಾ.ಪ್ರಭುಲಿಂಗ ಮಾನಕರ್. ಕುಟುಂಬ ಕಲ್ಯಾಣ ಡಾ.ಜೋತಿ ಮಾರ್ಗದರ್ಶನದಲ್ಲಿ ಹೈಯಾಳ (ಬಿ) ಗ್ರಾಮದಲ್ಲಿ ನಕಲಿ ಕ್ಲಿನಿಕ್ ತಾಪಸಣೆ ವೇಳೆ ಶಹಾಪುರ ತಾಲೂಕ ವೈದ್ಯಧಿಕಾರಿ ಡಾ.ರಮೇಶ ಗುತ್ತೇದಾರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯಾವುದೇ ವಿಧದ ಶೈಕ್ಷಣಿಕ ಅರ್ಹತೆ ಇಲ್ಲದೆ ಯದ್ವಾತದ್ವ ಜನರ ಮೇಲೆ ಔಷಧಿ ಪ್ರಯೋಗಗಳನ್ನು ಮಾಡುವುದು ತುಂಬಾ ಅಪಾಯಕರ ಮತ್ತು ಪ್ರಾಣ ಕಂಟಕ. ಜನ ಸಾಮಾನ್ಯರು ಎಚ್ಚೆತ್ತುಕೊಂಡು ಶೈಕ್ಷಣಿಕ ಅರ್ಹತೆ ಇರುವ ನೋಂದಾಯಿತ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುವ ಮೂಲಕ ಜೀವ ಮತ್ತು ಜೀವನವನ್ನು ಕಾಪಾಡಿಕೊಳ್ಳಬೇಕು ಎನ್ನುವುದು “ಜನ ಆಕ್ರೋಶ” ಪತ್ರಿಕೆಯ ಆಶಯವಾಗಿದೆ.