ಸ್ಥಳೀಯ

ಅಕ್ರಮವಾಗಿ ಗೋಸಾಗಣೆ ಪತ್ತೆ ಹಚ್ಚಿದ ಭಜರಂಗದಳ ಕಾರ್ಯಕರ್ತರು: ಪ್ರಕರಣ ದಾಖಲು

WhatsApp Group Join Now
Telegram Group Join Now

ಯಾದಗಿರಿ: ನಗರದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ೫ ಗೋವುಗಳನ್ನು ಭಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಸಮೀಪದ ಲೈಫ್ ಲೈನ್ ಆಸ್ಪತ್ರೆ ಬಳಿ ನಿಂತಿದ್ದ ವಾಹನದಲ್ಲಿ ಐದು ಗೋವುಗಳನ್ನು ತುಂಬಿಕೊAಡು ಹೋಗುತ್ತಿದ್ದ ಮಾಹಿತಿ ಪಡೆದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ನಗರ ಪೊಲೀಸರು ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಹಾಗೂ ಅಕ್ರಮ ಗೋಸಾಗಣೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗೋವುಗಳನ್ನು ನಗರದ ಮಹಾವೀರ ಗೋಶಾಲೆಗೆ ಒಪ್ಪಿಸಲಾಯಿತು ಎಂದು ಭಜರಂಗದಳ ಕಾರ್ಯಕರ್ತರು ತಿಳಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ ಸುಕಲೂರ, ಕೋರೇಶ, ಬಸ್ಸು, ಸಾಯಿ, ಮಲ್ಲು, ತಾಯಪ್ಪ, ಬಸ್ಸು ಇನ್ನಿತರರು ಇದ್ದರು.

WhatsApp Group Join Now
Telegram Group Join Now

Related Posts